ನಮ್ಮ ಭೂಮಿಯ ಮೇಲೆ ಅತ್ಯಂತ ವಿಶೇಷ ಜೀವಸಂಕುಲ ವಿದ್ದು, ಅದರಲ್ಲಿ ಅಟ್ಲಾಸ್ ಮೂಸ್ ಕೂಡ ಒಂದು.ಅಪರೂಪದ ಈ ಚಿಟ್ಟೆ ಇದೀಗ ಉಡುಪಿಯಲ್ಲಿ ಪತ್ತೆಯಾಗಿದೆ.
ಉಡುಪಿ (ಸೆ.04): ಇಲ್ಲಿನ ಶೆಟ್ಟಿಬೆಟ್ಟು ವಾರ್ಡಿನ ಮಾರುತಿನಗದದಲ್ಲಿ ಭಾರೀ ಗಾತ್ರದ ಪತಂಗ (ಅಟ್ಲಾಸ್ ಮೊತ್) ವೊಂದು ಪತ್ತೆಯಾಗಿದೆ. ಸುಮಾರು 25 ಸೆಮೀ ಅಗಲ, 15 ಸೆಮೀ ಉದ್ದದ ಈ ಬಹಳ ಅಪರೂಪದ ಪತಂಗ ಇಲ್ಲಿನ ಅಕ್ಕು ಎಂಬವರ ಮನೆಯಂಗಳದಲ್ಲಿ ಕಾಣಸಿಕ್ಕಿದೆ.
ಈ ಪತಂಗ ಮೊದಲು ತೆಂಗಿನ ಮರದ ಕಾಂಡದ ಮೇಲೆ ಕುಳಿತಿದ್ದು, ಅದನ್ನು ಒಂದು ಕಾಗೆಯು ಕುಕ್ಕುವುದಕ್ಕೆ ಪ್ರಯತ್ನಿಸುತಿತ್ತು, ಅದನ್ನು ಗಮನಿಸಿದ ಸ್ಥಳೀಯ ನಿವಾಸಿ ಗಣೇಶ್ ಕುಮಾರ್ ಅವರು ತೆಂಗಿನ ಗರಿಗಳಿಂದ ಅದಕ್ಕೆ ಅಡ್ಡ ಮಾಡಿ ಕಾಗೆಯಿಂದ ರಕ್ಷಿಸಲಾಗಿದೆ.
ಕೇವಲ 2 ವಾರಗಳ ಬದುಕು ಈ ಬೃಹತ್ ಅಟ್ಲಾಸ್ ಮೊತ್ ಗಳದ್ದು
undefined
ಪೇರಳೆ, ಸಂಪಿಗೆ ಇತ್ಯಾದಿ ಮರಗಳಲ್ಲಿ ಈ ಮೊಟ್ಟೆ ಇಡುತ್ತದೆ ಈ ಅಟ್ಲಾಸ್ ಮೂತ್. ಮೊಟ್ಟೆಯಿಂದ ಹೊರಗೆ ಬಂದ ಹುಳಗಳು ಆ ಮರದ ಎಲೆ ತಿಂದು ದೊಡ್ಡದಾಗುತ್ತವೆ. ನಂತರ ತನ್ನ ಸುತ್ತ ಕೋಶವನ್ನು ರಚಿಸುತ್ತವೆ. ಕೋಶದಿಂದ ಹೊರಗೆ ಬರುವಾಗ ಪತಂಗಗಳಾಗಿರುತ್ತವೆ.
ರೈತರಿಗೆ ಸಂತಸದ ಸುದ್ದಿ: ಚಿಟ್ಟೆ ಗುರುತು ಹೇಳಲು ಬಂದಿದೆ ಆ್ಯಪ್ ...
ಆದರೇ ಈ ಪತಂಗಗಳಿಗೆ ಬಾಯಿ ಇರುವುದಿಲ್ಲ, ಜೀರ್ಣಾಂಗ ವ್ಯವಸ್ಥೆಯೂ ಇರುವುದಿಲ್ಲ, ಕೋಶದಿಂದ ಹೊರಗೆ ಬಂದ ಗಂಡು ಪತಂಗ ತಕ್ಷಣವೇ ಹೆಣ್ಣು ಪತಂಗವನ್ನು ಕೂಡುವುದಕ್ಕೆ ಸಿದ್ಧವಾಗಿರುತ್ತದೆ.
ಹೀಗೆ ಕೂಡಿದ ಗಂಡು ಪತಂಗ ಸಾಯುತ್ತದೆ. ಹೆಣ್ಣು ಪತಂಗ ಕೆಲವುಗಳಲ್ಲಿ ಮೊಟ್ಟೆ ಇಟ್ಟು ತಾನೂ ಸಾಯುತ್ತವೆ. ಹೆಚ್ಚೆಂದರೇ 2 ವಾರಗಳ ಕಾಲ ಬದುಕುವ ಈ ಪತಂಗಗಳು, ಹುಳಗಳಾಗಿದ್ದಾಗ ಎಲೆಗಳನ್ನು ತಿಂದಿರುವುದರಿಂದ ಇಷ್ಟು ಕಾಲ ಬದುಕುತ್ತವೆ.