ಟಿಪ್ಪು ಹಿಂದು ಮತ್ತು ಕನ್ನಡ ವಿರೋಧಿ. ಹಾಗಾಗಿ ಟಿಪ್ಪು ಸುಲ್ತಾನ್ ಜಯಂತಿಗೆ ನಮ್ಮ ವಿರೋಧವಿದೆ. ಎಲ್ಲಿಯೂ ಆಚರಣೆ ಮಾಡಲು ಬಿಡುವುದಿಲ್ಲ. ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆ
ಹುಬ್ಬಳ್ಳಿ (ನ.10) : ಟಿಪ್ಪು ಹಿಂದು ಮತ್ತು ಕನ್ನಡ ವಿರೋಧಿ. ಹಾಗಾಗಿ ಟಿಪ್ಪು ಸುಲ್ತಾನ್ ಜಯಂತಿಗೆ ನಮ್ಮ ವಿರೋಧವಿದೆ. ಎಲ್ಲಿಯೂ ಆಚರಣೆ ಮಾಡಲು ಬಿಡುವುದಿಲ್ಲ. ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.. ಹಿಂದು ಮತ್ತು ಕನ್ನಡ ವಿರೋಧಿ ಟಿಪ್ಪು ಜಯಂತಿಯನ್ನು ವಿರೋಧಿಸುತ್ತೇವೆ. ಆದರೆ ನಮಗೆ ಪ್ರತಿಭಟನೆ ಮಾಡಲು ಬಿಡುತ್ತಿಲ್ಲ. ಆದರೆ ನಾವು ಯಾವುದೇ ಸಂದರ್ಭದಲ್ಲಿ ಟಿಪ್ಪು ಜಯಂತಿ ಆಚರಿಸುವುದನ್ನು ತಡೆಯುತ್ತೇವೆ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲ ಮಹಾಪುರುಷರಿಗೆ ಟಿಪ್ಪು ಸುಲ್ತಾನ್ ಹೋಲಿಕೆ ಮಾಡಬಾರದು. ಆತ ದೇಶದ್ರೋಹಿ. ಯಾರ ಜಯಂತಿ ಬೇಕಾದರೂ ಮಾಡಿ ಆದರೆ ಟಿಪ್ಪು ಜಯಂತಿ ಮಾಡಬೇಡಿ.
ಮಹಾನಗರ ಪಾಲಿಕೆ ತೆಗೆದುಕೊಂಡ ನಿಲುವನ್ನು ಖಂಡಿಸುತ್ತೇವೆ ಎಂದ ಮುತಾಲಿಕ್, ಟಿಪ್ಪು ಸುಲ್ತಾನ್ ಜಯಂತಿ ಬ್ಯಾನ್ ಮಾಡಲಾಗಿದೆ. ಯಾಕೆ ಅವಕಾಶ ಮಾಡಿಕೊಟ್ಟಿರಿ ಎಂದು ಪ್ರಶ್ನಿಸಿದರು.
ಎಐಎಂಐಎಂ ಒಂದು ದೇಶ ದ್ರೋಹಿ ಪಕ್ಷ: ದೇಶದ್ರೋಹಿಗಳನ್ನು ಬಿಜೆಪಿ ಬೆಳೆಸುತ್ತಿದೆ. ಇದಕ್ಕೆ ನಮ್ಮ ವಿರೋಧ ವಿದೆ. ಮತಾಂತರ ಮಾಡಿದವರ ಜಯಂತಿ ಆಚರಣೆ ಸರಿಯಲ್ಲ. ಯಾವುದೇ ಹೋಲಿಕೆ ಮಾಡಲು ಸಾಧ್ಯವಿಲ್ಲ.ಟಿಪ್ಪು ಜಯಂತಿ ಆಚರಣೆ ಬೇಡವೆಂದು ಹೈಕೋರ್ಟ್ ನಲ್ಲಿ ಪಿಐಎಲ್ ಹಾಕಲಾಗುವುದು ಎಂದರು.
ಈದ್ಗಾ ಮೈದಾನದ ಸುತ್ತ ಬಿಗಿಬಂದೋಬಸ್ತ್: ಈದ್ಗಾ ಮೈದಾನದಲ್ಲಿ ಟಿಪ್ಪು ಸುಲ್ತಾನ ಜಯಂತಿ ಆಚರಣೆಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಮೈದಾನದ ಸುತ್ತಲೂ ಬಿಗಿ ಬಂದೋಬಸ್ತು ಏರ್ಪಡಿಸಿದ್ದು, ಇದನ್ನು ವಿರೋಧಿಸಿ ಮುತ್ತಿಗೆ ಹಾಕಲು ಯತ್ನಿಸಿದ ಶ್ರೀರಾಮ ಸೇನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಮೈದಾನದ ಸುತ್ತಮುತ್ತಲು ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿದ ಹಿನ್ನೆಲೆ, ಟಿಪ್ಪು ಜಯಂತಿ ಆಚರಣೆಗೆ ಮಹಾನಗರ ಪಾಲಿಕೆ ಅನುಮತಿ ನೀಡಲಾಗಿದೆ. ಆದರೆ ಟಿಪ್ಪುವಿನ ಆಚರಣೆಯನ್ನು ಸರ್ಕಾರವೇ ರದ್ದು ಮಾಡಿರುವಾಗ ಮಹಾನಗರ ಪಾಲಿಕೆ ಟಿಪ್ಪು ಜಯಂತಿ ಆಚರಿಸುವ ಮೂಲಕ ರಾಜಕಾರಣ ಮಾಡಲು ಹೊರಟಿದೆ. ಈ ನಿರ್ಧಾರ ಹಿಂಪಡೆಯುವಂತೆ ಪಾಲಿಕೆ ಆಯುಕ್ತ ಹಾಗೂ ಮಹಾಪೌರರಿಗೆ ಮನವಿ ಮಾಡಿದ್ದರು. ಟಿಪ್ಪು ಜಯಂತಿಗೆ ಅನುಮತಿ ನೀಡಿದರೆ ಮುತ್ತಿಗೆ ಹಾಕುವುದಾಗಿ ಶ್ರೀರಾಮ ಸೇನೆ ಎಚ್ವರಿಕೆ ನೀಡಿದ್ದರು. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಮೈದಾನ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿತ್ತು.
ಶ್ರೀ ರಾಮ ಸೇನೆ ಕಾರ್ಯಕರ್ತರು ವಶಕ್ಕೆ: ಪಾಲಿಕೆ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡಿರುವುದನ್ನು ಖಂಡಿಸಿ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ ಹಾಗೂ 7ಕ್ಕೂ ಹೆಚ್ಚಿನ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಆಚರಣೆಗೆ ಸಿದ್ದತೆ: ಟಿಪ್ಪು ಆಚರಣೆಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಈದ್ಗಾ ಮೈದಾನದಲ್ಲಿ ಟಿಪ್ಪು ಆಚರಣೆಗೆ ಪೂರ್ವ ಸಿದ್ದತೆ ಮಾಡಿಕೊಳ್ಳಲಾಗಿದೆ. ಇಲ್ಲಿರುವ ಧಾರ್ಮಿಕ ಕಟ್ಟಡಕ್ಕೆ ಯಾವುದೇ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮೈದಾನದ ಒಳಗೆ ಹಾಗೂ ಹೊರಗೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.