ಗದಗ: ಸರ್ಕಾರದ ವಿರುದ್ಧ ಜೆಡಿಎಸ್ ಪ್ರತಿಭಟನೆ ವೇಳೆ ಕನ್ನಡ ಕಗ್ಗೊಲೆ!

By Ravi Janekal  |  First Published Feb 27, 2024, 9:15 PM IST

ಸರ್ಕಾರದ ನಿಲುವಿನಿಂದ ರಾಜ್ಯ, ಜಿಲ್ಲೆ  ಹಿಂದೆ ಹೋಗ್ತಿದೆ ಅಂತಾ ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ನಗರದ ಗಾಂಧಿ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ರಿವರ್ಸ್ ಪಾದಯಾತ್ರೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ರು.


ಗದಗ (ಫೆ.27): ಸರ್ಕಾರದ ನಿಲುವಿನಿಂದ ರಾಜ್ಯ, ಜಿಲ್ಲೆ  ಹಿಂದೆ ಹೋಗ್ತಿದೆ ಅಂತಾ ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ನಗರದ ಗಾಂಧಿ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ರಿವರ್ಸ್ ಪಾದಯಾತ್ರೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ರು.

ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ ನೇತೃತ್ವದಲ್ಲಿ ವಿನೂತನ ಪ್ರತಿಭಟನೆ ನಡೆಸಲಾಯ್ತು. ಪ್ರತಿಭಟನೆ ವೇಳೆ ಕಾರ್ಯಕರ್ತರು ಕೈಯಲ್ಲಿ ಹಿಡಿದಿದ್ದ ಫಲಕಗಳಲ್ಲಿ ತಪ್ಪಾದ ಕನ್ನಡ ಪದಗಳನ್ನ ಬಳಕೆ ಮಾಡಲಾಗಿದ್ದು, ಕನ್ನಡ ಅಭಿಮಾಗಳ ಆಕ್ರೋಶಕ್ಕೆ ಗುರಿಯಾಗಬೇಕಾಯಿತು. 'ಗದಗ ದ್ಧಿವೃಭಿಅ' ಎಂಬ ಅರ್ಥವೇ ಇಲ್ಲದ ಬೋರ್ಡ್ ಹಿಡಿದು ಜೆಡಿಎಸ್ ಕಾರ್ಯಕರ್ತರು ಹೆಜ್ಜೆ ಹಾಕಿದ್ದು ವಿಚಿತ್ರವಾಗಿ ಕಂಡು ಬಂತು ಇನ್ನುಳಿದಂತೆ 'ನಮ್ಮ ಜಿಲ್ಲೆಯ ಹಣ ಬೇರೆ ಕೆಲಸಕ್ಕೆ ಬಳಸಿದ್ದು ಅಪರಾಧ' ಎನ್ನುವ ಬೋರ್ಡ್ ನಲ್ಲಿ 'ಬಳಿಸಿದು', 'ಕೆಲ್ಸ' ಅಂತೆಲ್ಲ ಬರೆಯಲಾಗಿತ್ತು.

Latest Videos

undefined

'ಕರ್ಕಶವಾದ ಲೌಡ್ ಸ್ಪೀಕರ್ ಅವನು..' ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಪ್ರಕಾಶ್ ರಾಜ್!

ಇನ್ನೊಂದು ಬೋರ್ಡ್‌ನಲ್ಲಿ ಧಿಕ್ಕಾರ ಪದವನ್ನ ದಿಕ್ಕಾರವೆಂದು ಬಳಸಲಾಗಿದೆ. ಕಣ್ಣಿಗೆ ರಾಚುವಂತೆ ತಪ್ಪಾಗಿರೋ ಪದಗಳ ಬೋರ್ಡ್ ಕಂಡುಬಂದ್ರೂ  ಕಾಗುಣಿತ ದೋಷವಿರುವ ಬೋರ್ಡ್ ಹಿಡಿದುಕೊಂಡೇ ತಹಸೀಲ್ದಾರ್ ಕಚೇರಿ ವರೆಗೆ ಜೆಡಿಎಸ್ ಕಾರ್ಯಕರ್ತರು ರಿವರ್ಸ್ ಪಾದಯಾತ್ರೆ ಮಾಡಿದ್ರು.

ರಾಜ್ಯಪಾಲರ ಗಮನ ಸೆಳೆಯಲು ನಡೆಸಿದ್ದ ಪ್ರತಿಭಟನೆ ಇದು. ಗದಗ ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ರಾಜ್ಯಪಾಲರು ಮಧ್ಯೆಪ್ರವೇಶಿಸಬೇಕು ಅಂತಾ ಪ್ರತಿಭಟನೆ ಮಾಡಿದ ಜೆಡಿಎಸ್, ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ರು. ರಾಜ್ಯ ಸರ್ಕಾರ ನಮ್ಮ ತೆರಿಗೆ ನಮ್ಮ ಹಕ್ಕು ಅಂತಾ ಪ್ರತಿಭಟನೆ ಮಾಡ್ತಿದೆ. ಆದರೆ ಗದಗ ಜಿಲ್ಲೆಯಿಂದ ಸುಮಾರು 500 ಕೋಟಿ ರೂಪಾಯಿ ಪ್ರತಿ ವರ್ಷ ತೆರಿಗೆ ಸಂಗ್ರಹವಾಗ್ತಿದೆ. ರಾಜ್ಯ ಬಜೆಟ್ ನಲ್ಲಿ ಗದಗ ಜಿಲ್ಲೆಗೆ ಸಾಕಷ್ಟು ಅನುದಾನ ಸಿಕ್ಕಿಲ್ಲ. 500 ಕೋಟಿ ತೆರಿಗೆ ಪಡೆಯುತ್ತಿರುವ ರಾಜ್ಯ ಸರ್ಕಾರ ಕೇವಲ 50 ಕೋಟಿ ರೂಪಾಯಿ ಯೋಜನೆಯನ್ನು ನಮ್ಮ ಜಿಲ್ಲೆಗೆ ಕೊಟ್ಟಿದ್ದಾರೆ. ಅಭಿವೃದ್ಧಿ ಇಲ್ಲದೆ ಹಿಂದುಳಿದ ಜಿಲ್ಲೆಯಾಗಿರುವ ಗದಗ ಈಗ ಮತ್ತಷ್ಟು ಹಿಂದುಳಿಯಲು ಇದು ಕಾರಣವಾಗುತ್ತದೆ ಅಂತಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯಪಾಲರೇ ಮಧ್ಯಪ್ರವೇಶಿಸಿ ಅನ್ಯಾಯ ಸರಿಪಡಿಸಬೇಕು. ಗದಗ ಜಿಲ್ಲೆಗೆ ಹೆಚ್ಚಿನ ಅನುದಾನ ಕೊಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಿಗೆ ನಿರ್ದೇಶಿಸಬೇಕು ಮನವಿ ಮಾಡಲಾಗಿದೆ.

ಗದಗ: ಸತ್ತವರ ಬ್ಯಾಂಕ್ ಖಾತೆಗೂ ಗೃಹಲಕ್ಷ್ಮೀ ಹಣ ಜಮೆ!

ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಮಹಿಳೆಯರಿಂದ ತುಂಬಿದ ಬಸ್ ಗಳಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸಲಾಗುತ್ತಿಲ್ಲ. ಇದರ ಪರಿಣಾಮದಿಂದ ಮಕ್ಕಳು ಶಾಲೆ ಬಿಟ್ಟಿರುವ ಸಾಕಷ್ಟು ಉದಾಹರಣೆಗಳಿವೆ. ಪರೀಕ್ಷೆ ಹಿನ್ನೆಲೆ ಮಕ್ಕಳಿಗೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಬೇಕು. ಇಲ್ಲದಿದ್ರೆ ಪರೀಕ್ಷೆ ಮುಕ್ತಾಯವಾಗುವವರೆಗೂ ಶಕ್ತಿ ಯೋಜನೆ ಬಂದ್ ಮಾಡ್ಬೇಕು ಎಂದು ಆಗ್ರಹಿಸಿದ ಕಾರ್ಯಕರ್ತರು.

click me!