ಬಿಡಿಎ ಅಧ್ಯಕ್ಷರ ಕಚೇರಿ ಮುಂದೆ ರೈತ ಆತ್ಮಹತ್ಯೆಗೆ ಯತ್ನ; ಭೂಮಿ ಕೊಟ್ಟು 30 ವರ್ಷವಾದ್ರೂ ಪರಿಹಾರ ಸಿಕ್ಕಿಲ್ಲ!

By Sathish Kumar KH  |  First Published Feb 27, 2024, 6:23 PM IST

ನಗರದ ಪ್ರತಿಷ್ಠಿತ ಹೆಚ್‌ಎಸ್‌ಆರ್‌ ಲೇಔಟ್ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) 30 ವರ್ಷಗಳ ಹಿಂದೆ ಭೂಮಿ ಕೊಟ್ಟಿದ್ದರೂ ಇನ್ನೂ ಪರಿಹಾರ ಕೊಟ್ಟಿಲ್ಲ ಎಂದು ರೈತ ಬಿಡಿಎ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.  


ಬೆಂಗಳೂರು (ಫೆ.27): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸಂಸ್ಥೆಯಿಂದ ಹೆಚ್‌ಎಸ್‌ಆರ್ ಬಡಾವಣೆ ನಿರ್ಮಾಣಕ್ಕಾಗಿ ಕಳೆದ 30 ವರ್ಷಗಳ ಹಿಂದೆಯೇ ನಮ್ಮ ಭೂಮಿಯನ್ನು ಕಿತ್ತುಕೊಂಡಿದೆ. ಈವರೆಗೂ ಪರಿಹಾರವನ್ನೇ ನೀಡಿಲ್ಲ ಎಂದು ರೈತನೊಬ್ಬ ಬಿಡಿಎ ಆಯುಕ್ತರ ಕಚೇರಿ ಮುಂದೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ.

ಸಿಲಿಕಾನ್‌ ಸಿಟಿಯನ್ನು ವ್ಯವಸ್ಥಿತವಾಗಿ ನಿರ್ಮಿಸಲು ಸರ್ಕಾರದಿಂದ ರಚಿಸಲಾದ ಸಂಸ್ಥೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ವಾಗಿದೆ. ಆದರೆ, ಈಗ ಇದು ಭ್ರಷ್ಟಾಚಾರಿಗಳ ಅಭಿವೃದ್ಧಿ ಸಂಸ್ಥೆಯಾಗಿದೆ ಎಂದು ಹಲವರು ಆರೋಪ ಮಾಡುತ್ತಿದ್ದಾರೆ. ಇಲ್ಲಿ ಹಣವನ್ನು ನೀಡದೇ ಯಾವುದೇ ಕೆಲಸ ಆಗೊಲ್ಲ ಎಂದು ದೂರು ನೀಡಿದವರೇ ಹೆಚ್ಚಾಗಿದ್ದಾರೆ. ಈಗ ಬಿಡಿಎ ಕಚೇರಿಗೆ ಕಳೆದ 30 ವರ್ಷಗಳಿಂದ ಅಲೆದಾಡಿರುವ ವೃದ್ಧ ರೈತ ಮನನೊಂದು ಬಿಡಿಎ ಆಯುಕ್ತರ ಕಚೇರಿ ಮುಂದೆಯೇ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ, ಬಿಡಿಎ ಆಯುಕ್ತ ಎನ್. ಜಯರಾಮ್ ಹಾಗೂ ಭದ್ರತಾ ಸಿಬ್ಬಂದಿ ಬಂದು ರೈತನನ್ನು ಕಾಪಾಡಿದ್ದಾರೆ.

Latest Videos

undefined

ಬಿಜೆಪಿ ವಿಪ್‌ನಿಂದ ಏನಾಗುತ್ತೆ? ವಜಾಕ್ಕೂ ಮುನ್ನವೇ ರಾಜೀನಾಮೆ ಕೊಡುವರೇ ಎಸ್.ಟಿ. ಸೋಮಶೇಖರ್!

ಬಿಡಿಎ ಕಮಿಷನರ್ ಕಚೇರಿ ಬಳಿ ರೈತ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ತಾನು ಕೊಟ್ಟ ಭೂಮಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ಹೆಚ್ಎಸ್ಆರ್  ಲೇಔಟ್‌ ಅನ್ನು ಬಿಡಿಎ ವತಿಯಿಂದ ಅಭಿವೃದ್ಧಿ ಮಾಡುವಾಗ ಈ ರೈತ ಭೂಮಿಯನ್ನು ಕಳೆದುಕೊಂಡಿದ್ದಾನೆ. ಇನ್ನು ಬಡಾವಣೆ ನಿರ್ಮಾಣವಾಗಿ 30 ವರ್ಷಗಳು ಕಳೆದಿದ್ದು, ಈಗಾಗಲೇ ಮನೆಗಳು ನಿರ್ಮಾಣವಾಗಿ ಎಲ್ಲರೂ ನೆಮ್ಮದಿಯಿಂದ ಜೀವನ ಮಾಡುತ್ತಿದ್ದಾರೆ. ಆದರೆ, ಭೂಮಿಯನ್ನು ಕಳೆದುಕೊಂಡ ರೈತ ಮಾತ್ರ ಇನ್ನೂ ಪರಿಹಾರಕ್ಕೆ ಅಲೆದಾಡುತ್ತಿದ್ದೇನೆ ಎಂದು ಬಿಡಿಎ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನ್ಯಾಯಾಲಯದ ಆದೇಶವಿದ್ದರೂ ಪರಿಹಾರವಿಲ್ಲ: ಹೆಚ್‌ಎಸ್‌ಆರ್‌ ಬಡಾವಣೆ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡ ಬಗ್ಗೆ ಪರಿಹಾರ ಕೊಡದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಈ ಬಗ್ಗೆ ನ್ಯಾಯಾಲಯವೇ ಸಂತ್ರಸ್ತ ರೈತನಿಗೆ ಕೂಡಲೇ ಪರಿಹಾರ ನೀಡುವಂತೆ ಆದೇಶ ಮಾಡಿದೆ. ಇನ್ನು ಕೋರ್ಟ್‌ ಆದೇಶ ನೀಡಿದ ಬೆನ್ನಲ್ಲೇ ಬಿಡಿಎ ಅಧಿಕಾರಿಗಳು ಪರಿಹಾರ ಕೊಡುತ್ತಾರೆ ಎಂಬ ಭರವಸೆಯನ್ನು ಇಟ್ಟುಕೊಂಡಿದ್ದನು. ಆದರೆ, ಕೋರ್ಟ್ ಆದೇಶ ಇದ್ರೂ ಭೂ ಪರಿಹಾರವನ್ನು ನೀಡಲಿಲ್ಲ. ಹೀಗಾಗಿ, ಅಧಿಕಾರಿಗಳ ನಿರ್ಧಾರಕ್ಕೆ ಬೇಸತ್ತು ರೈತ ಬಿಡಿಎ ಕಚೇರಿಯ ಆಯುಕ್ತರ ಕೋಣೆ ಎದುರು ಬಂದು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. 

ಶಿವಮೊಗ್ಗದ ಹಿರಿಯ ವಕೀಲ ಬೆಂಗಳೂರಿನ ರಸ್ತೆ ಅಪಘಾತದಲ್ಲಿ ದಾರುಣ ಸಾವು

ಹೆಚ್‌ಎಸ್‌ಆರ್ ಬಡಾವಣೆ ನಿರ್ಮಾಣಕ್ಕೆಂದು ಬಿಡಿಎ ನಮ್ಮ ವಿರೋಧದ ನಡುವೆಯೂ ಭೂಮಿಯನ್ನು ವಶಕ್ಕೆ ಪಡೆದುಕೊಂಡಿದೆ. ಆದರೆ, ಭೂಮಿ ಕಿತ್ತುಕೊಂಡು ನಂತರ ಅದಕ್ಕೆ ಪರಿಹಾರ ನೀಡದೇ ಅಲೆದಾಡಿಸುತ್ತಿದೆ. ಹೀಗಾಗಿ, ಬಿಡಿಎ ಕಮಿಷನರ್ ಜಯರಾಮ್ ಕಚೇರಿ ಮುಂದೆ ಆತ್ಮಹತ್ಯೆಗೆ ಯತ್ನಿಸುತ್ತಿರುವುದಾಗಿ ರೈತ ಅಳಲು ತೋಡಿಕೊಂಡಿದ್ದಾನೆ.

click me!