Special voters list revision: ಮಂಡ್ಯ ಜಿಲ್ಲೆಯಲ್ಲಿ ಮತಪಟ್ಟಿಯಿಂದ 1.69 ಲಕ್ಷ ಮಂದಿ ಔಟ್

Published : Aug 06, 2026, 05:55 AM IST
SIR

ಸಾರಾಂಶ

ಮಂಡ್ಯ ಜಿಲ್ಲೆಯಲ್ಲಿ ನಡೆದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ, ಸುಮಾರು 1.69 ಲಕ್ಷ ಜನರನ್ನು ವಿವಿಧ ಕಾರಣಗಳಿಂದ ಪಟ್ಟಿಯಿಂದ ಕೈಬಿಡಲಾಗಿದೆ. ಇದಲ್ಲದೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯು ಆಗಸ್ಟ್ 6 ರಂದು ಎಸ್ಎಸ್ಎಲ್‌ಸಿ, ಪಿಯುಸಿ, ಮತ್ತು ಪದವೀಧರರಿಗಾಗಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನವನ್ನು ಆಯೋಜಿಸಿದೆ.

ಮಂಡ್ಯ: ಜಿಲ್ಲೆಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿಯಲ್ಲಿದ್ದು ಇದುವರೆಗೆ ಮತದಾರರ ಪಟ್ಟಿಯಿಂದ 1.69 ಲಕ್ಷ ಮಂದಿಯನ್ನು ಕೈಬಿಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.

ಒಟ್ಟು 15,75,849 ಮತದಾರರಲ್ಲಿ 1,69,037 ಮತದಾರರು ಹೊರಗುಳಿದಿದ್ದಾರೆ. ಪರಿಷ್ಕರಣೆಯ ಸಮಯದಲ್ಲಿ ಶೇ. 10.73 ಜನರು ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೆ. 1143 ಮತಗಟ್ಟೆಗಳಲ್ಲಿ ಶೇ. 90 ರಷ್ಟು ಮತದಾರರ ಪಟ್ಟಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಮತ್ತು ಒಂದು ಮತಗಟ್ಟೆಯಲ್ಲಿ ಶೇ. 100 ರಷ್ಟು ಆನ್‌ಲೈನ್ ಅಪ್‌ಲೋಡ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆಯ ಸಮಯದಲ್ಲಿ 25,264 ಜನರು ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ. ಅವರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. 86,439 ಜನರು ಶಾಶ್ವತ ವರ್ಗಾವಣೆಗಳಾಗಿದ್ದರೆ, 14,277 ಜನರು ದ್ವಿ ಮತದಾನದ ಹಕ್ಕುಗಳನ್ನು ಹೊಂದಿದ್ದರು, 42,549 ಜನರು ಸಾವನ್ನಪ್ಪಿದ್ದಾರೆ ಮತ್ತು 508 ಇತರ ಮತದಾರರಾಗಿದ್ದಾರೆ.

ಮತದಾರರ ಪಟ್ಟಿಯಲ್ಲಿ ಸೇರ್ಪಡೆಗಾಗಿ 61 ಜನರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. 14,05,313 ಮತದಾರರು ತಮ್ಮ ಮತದಾರರ ಪಟ್ಟಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವಲ್ಲಿ 89.18 ಪ್ರಗತಿ ಸಾಧಿಸಿದ್ದಾರೆ, ಆದರೆ 1499 ಮತದಾರರ ಪಟ್ಟಿಗಳು ಇನ್ನೂ ಅಪ್‌ಲೋಡ್ ಆಗಿಲ್ಲ. 0.10% ಪ್ರಗತಿ ಸಾಧಿಸಬೇಕಾಗಿದೆ.

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಳ್ಳಲು ಕೇವಲ ಮೂರು ದಿನಗಳು ಮಾತ್ರ ಉಳಿದಿವೆ. ಪರಿಷ್ಕರಣೆ ಕಾರ್ಯವು ಜೂನ್ 8 ರಂದು ಪೂರ್ಣಗೊಳ್ಳುತ್ತದೆ. ಅಧಿಕೃತ ಮತದಾರರ ಪಟ್ಟಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ ನಂತರವೂ, ಹೆಸರು ಕೈಬಿಟ್ಟಿದ್ದರೆ ಅದನ್ನು ಸೇರಿಸಲು ಅನುಮತಿಸಲಾಗುತ್ತದೆ.

ಉದ್ಯೋಗಾಕಾಂಕ್ಷಿಗಳಿಗೆ ಇಂದು ನೇರ ಸಂದರ್ಶನ

ಮಂಡ್ಯ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಮೆ.ಗೋಲ್ಡನ್ ಬ್ರಿಡ್ಜ್ ಪ್ರೋಪರ್ಟಿಸ್, ಮೆ.ಎಚ್.ಡಿ.ಎಫ್.ಸಿ ಲೈಫ್ ಇನ್ಸೂರೆನ್ಸ್ ಮತ್ತು ಮೆ.ಇನ್‌ಕಾಸ್ಟ್ ಮಿಷನ್ ಸಂಸ್ಥೆಗಳ ಸಹಯೋಗದಲ್ಲಿ ಆ.6ರಂದು ಬೆಳಗ್ಗೆ 10 ಗಂಟೆಗೆ ಖಾಲಿ ಇರುವ ಹುದ್ದೆಗಳಿಗೆ ‘ನೇರಸಂದರ್ಶನ’ ವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಲಾಗಿದೆ.

ನೇರ ಸಂದರ್ಶನದಲ್ಲಿ ಸದರಿ ಸಂಸ್ಥೆಯಲ್ಲಿ ಖಾಲಿಯಿರುವ ಟೆಲಿಕರ್ಸ್ ಹಾಗೂ ಬ್ಯೂಸಿನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್ ಹಾಗೂ ಮಿಷನ್ ವೆಲ್ಡರ್ & ಫಿಟ್ಟರ್ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲಿದ್ದು, ಮಂಡ್ಯ ಹಾಗೂ ಮೈಸೂರು ಸ್ಥಳಗಳಲ್ಲಿ ಕೆಲಸ ಮಾಡಲು ಎಸ್ಎಸ್ಎಲ್‌ಸಿ, ಪಿಯುಸಿ, ಐಟಿಐ (ವೆಲ್ಡರ್ & ಫಿಟ್ಟರ್) ಹಾಗೂ ಯಾವುದೇ ಪದವಿ ಉತ್ತೀರ್ಣರಾಗಿರುವ 18 ರಿಂದ 40 ವರ್ಷ ವಯೋಮಿತಿಯುಳ್ಳ ಅಭ್ಯರ್ಥಿಗಳು ತಮ್ಮ ರೆಸ್ಯೂಮ್/ ಬಯೋಡೇಟಾಗಳೊಂದಿಗೆ ನೇರಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ-9164642684, 9113500761, 9113875775, ಮತ್ತು 9741939716 ಅನ್ನು ಸಂಪರ್ಕಿಸಬಹುದು ಎಂದು ಮಂಡ್ಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Read more Articles on
click me!

Recommended Stories

ಮೃತ ಕಾನ್‌ಸ್ಟೇಬಲ್ ಅರ್ಜುನ್ ಶಂಕರ್ ಕುಟುಂಬಕ್ಕೆ 1.45 ಕೋಟಿ ರೂಪಾಯಿ ವಿಮೆ ಹಸ್ತಾಂತರ
ಮಂತ್ರಿಗಿರಿ ಸಿಗದ್ದಕ್ಕೆ ನೋವಿಲ್ಲ, ಹೀಗ್ಯಾಕೆ ಮಾಡಿದರೆಂಬ ಬೇಸರ: ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ