ಕೊರೋನಾ ಸೋಂಕು ನಿಯಂತ್ರಿಸುವ ಸಂಬಂಧ ಲಾಕ್‌ಡೌನ್ ಘೋಷಿಸಿದ್ದ ಕೇಂದ್ರ ಸರ್ಕಾರ| ಕೆಲವು ಕಾರಣದಿಂದ ಸೇವೆಗೆ ಹಾಜರಾಗಿರದಿದ್ದ ನೌಕರರು| 2020ರ ಮೇ 4ರಿಂದ 17ರವರೆಗಿನ ಪೂರ್ಣ ಪ್ರಮಾಣದ ಲಾಕ್‌ಡೌನ್ ಅವಧಿ ಹಾಗೂ 2020ರ ಆಗಸ್ಟ್ 14ರಿಂದ 22ರವರೆಗೆ ರಾತ್ರಿ ಕರ್ಫ್ಯೂ|
ಬೆಂಗಳೂರು(ಫೆ.27): ಕೊರೋನಾ ಲಾಕ್‌ಡೌನ್ ಅವಧಿಯಲ್ಲಿ ಗೈರಾಗಿದ್ದ ಸಾರಿಗೆ ನೌಕರರ ವೇತನ ಕಡಿತ ಸೇರಿ ಯಾವುದೇ ಕ್ರಮ ಕೈಗೊಳ್ಳದೆ ಗೈರಾದ ದಿನಗಳನ್ನು ವಿಶೇಷ ರಜೆ ಎಂದು ಪರಿಗಣಿಸಲು ಬಿಎಂಟಿಸಿ ನಿರ್ಧರಿಸಿದೆ.
ಕೊರೋನಾ ಸೋಂಕು ನಿಯಂತ್ರಿಸುವ ಸಂಬಂಧ ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಿಸಿತ್ತು. ಈ ವೇಳೆ ಬಿಎಂಟಿಸಿ ತುರ್ತು ಸೇವೆಗಳ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದ್ದ ಕಾರಣದಿಂದ ನಿಗಮದ 3 ಮತ್ತು 4ನೇ ದರ್ಜೆ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆದರೆ, ಕೆಲವು ಕಾರಣದಿಂದ ನೌಕರರು ಹಾಜರಾಗಿರಲಿಲ್ಲ.
undefined
ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಸಾರಿಗೆ ಸಚಿವರಿಂದ ಮತ್ತೊಂದು ಶಾಕ್
ಹೀಗಾಗಿ 2020ರ ಮೇ 4ರಿಂದ 17ರವರೆಗಿನ ಪೂರ್ಣ ಪ್ರಮಾಣದ ಲಾಕ್‌ಡೌನ್ ಅವಧಿ ಹಾಗೂ 2020ರ ಆಗಸ್ಟ್ 14ರಿಂದ 22ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿದ್ದ ಸಂದರ್ಭದಲ್ಲಿ ಗೈರಾದ ಸಿಬ್ಬಂದಿಯ ಹಾಜರಾತಿಯನ್ನು ವಿಶೇಷ ರಜೆ ಎಂದು ಪರಿಗಣಿಸುವಂತೆ ಬಿಎಂಟಿಸಿ ವ್ಯವಸ್ಥಾಪಕ ನಿದೇರ್ಶಕಿ ಸಿ. ಶಿಖಾ ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿದ್ದಾರೆ.