ಮೈಸೂರು(ಏ.15): ಲಾಕ್‌ಡೌನ್ ಹಿನ್ನೆಲೆಯಲ್ಲಿ ನೈಋುತ್ಯ ರೈಲ್ವೆಯು ಸಾರ್ವಜನಿಕರ ಅನುಕೂಲಕ್ಕಾಗಿ ವಿಶೇಷ ಸರಕು ಸಾಗಣೆ ರೈಲನ್ನು ಆರಂಭಿಸಿದೆ. ನಿಗದಿತ ಸ್ಥಳದಿಂದ ಮತ್ತೊಂದು ನಿಗದಿತ ಸ್ಥಳಕ್ಕೆ ಅಗತ್ಯ ವಸ್ತುಗಳನ್ನು ಪೂರೈಸಬಲ್ಲ ಈ ರೈಲು ಕಾಳುಗಳು, ಔಷಧ, ತರಕಾರಿ ಮತ್ತು ಹಣ್ಣು ಮತ್ತಿತರ ವಸ್ತುಗಳನ್ನಷ್ಟೇ ಸಾಗಣೆ ಮಾಡಲಿದೆ.
ಈ ವಿಶೇಷ ರೈಲು ಕೆಎಸ್‌ಆರ್ ಬೆಂಗಳೂರಿನಿಂದ ನಿಜಾಮುದ್ದೀನ್‌ಗೆ ಮೈಸೂರು ಮತ್ತು ಹಾಸನ ಮಾರ್ಗವಾಗಿ ಸಂಚರಿಸಲಿದೆ. ಏ. 17 ರಂದು ಬೆಂಗಳೂರಿನಿಂದ ಹೊರಟು, 19ಕ್ಕೆ ನಿಜಾಮುದ್ದೀನ್ ತಲುಪುವುದು. ಅಂತೆಯೇ ನಿಜಾಮುದ್ದೀನ್ ನಿಂದ ಹೊರಡುವ ರೈಲು ಬೆಂಗಳೂರು ತಲುಪಲಿದೆ.
ಜ್ಯುಬಿಲಿಯಂಟ್ ತನಿಖೆಗೆ ಹರ್ಷ ಗುಪ್ತ ನೇಮಕ..?
ಲಾಕ್‌ಡೌನ್ ಹಿನ್ನೆಲೆ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಕಷ್ಟಪಡುವಂತಾಗಿದ್ದು, ಸರಕು ಸಾಗಣೆಗಾಗಿ ರೈಲು ಸೇವೆ ಒದಗಿಸುವ ಬಗ್ಗೆ ರೈತರು ಒತ್ತಾಯಿಸಿದ್ದರು.