ಕೊರೋನಾದಿಂದಾಗಿ ಗಣೇಶ ಸಮಿತಿಗಳು ದೊಡ್ಡ ಗಾತ್ರದ ಗಣಪತಿ ಬದಲಾಗಿ ಸಣ್ಣ ಗಾತ್ರದ ಮೂರ್ತಿ ಇಟ್ಟಿದ್ದಾರೆ. ಇನ್ನು ನೀಲಾವರ ಗೋಶಾಲೆಯ ಶಾಖಾ ಮಠದಲ್ಲಿ ಬೈಹುಲ್ಲಿನ ವಿಶಿಷ್ಟ ಗಣಪತಿ ಪ್ರತಿಷ್ಠಾನ ಮಾಡಲಾಗಿದೆ.
ಉಡುಪಿ, (ಆ.23): ನೀಲಾವರ ಗೋಶಾಲೆಯ ಶಾಖಾ ಮಠದಲ್ಲಿ ಚಾತುರ್ಮಾಸ್ಯ ವ್ರತ ನಡೆಸುತ್ತಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಗಣೇಶ ಚತುರ್ಥಿಯನ್ನು ವಿಶೇಷವಾಗಿ ಆಚರಿಸಿದರು.
ತಮ್ಮ ವಿದ್ಯಾರ್ಥಿಗಳು ಬೈಹುಲ್ಲನ್ನು (ಭತ್ತದ ಒಣಹುಲ್ಲು) ಬಳಸಿಕೊಂಡು ರಚಿಸಿದ ಗಣಪತಿ ಹಾಗೂ ರಾಜ್ಯ ಪರಿಸರ ಇಲಾಖೆ ಸೂಚಿಸಿದಂತೆ ಅರಶಿನ ಹುಡಿಯಲ್ಲಿ ಚಿಕ್ಕ ಗಣಪತಿ ವಿಗ್ರಹ ಸಿದ್ಧಪಡಿಸಿ ಅದಕ್ಕೆ ಸುಂದರ ಅಲಂಕಾರಗಳನ್ನು ಮಾಡಿ ಗಜಮುಖನ ಆರಾಧಿಸಿದರು.
ವೈರಸ್‌ಗೆ ಶೂಟ್ ಮಾಡ್ತಿದೆ ಮೂಷಿಕ: ಕೊರೋನಾ ಗಣಪ ವೈರಲ್
ಗಣಯಾಗವೂ ವೈದಿಕರಿಂದ ನಡೆಯಿತು. ಮಹಾಪೂಜೆಯನ್ನು ಶ್ರೀಗಳು ನೆರವೇರಿಸಿ, ಕೊರೋನಾ ಮಾರಕ ರೋಗದಿಂದ ಮುಕ್ತಿ ದೊರೆತು ಲೋಕ ಕ್ಷೇಮವಾಗಲಿ, ಸಮಸ್ತ ಗೋಕುಲಕ್ಕೆ ಸುರಕ್ಷೆ ಸಮೃದ್ಧಿ ಹಾಗೂ ಅಯೋಧ್ಯೆ ರಾಮಮಂದಿರವು ನಿರ್ವಿಘ್ನವಾಗಿ ನೆರವೇರಲೆಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಇನ್ನು ಬುಧವಾರ ಈ ಗಣಪನ ವಿಗ್ರಹ ವಿಸರ್ಜನೆ ನಡೆಯಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.