ಆನೇಕಲ್ ತಾಲೂಕಿನ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಬೆಂಗಳೂರು(ಫೆ.05): ಬೆಂಗಳೂರು ನಗರದ ಸೆರಗಿನಲ್ಲಿರುವ ಆನೇಕಲ್ ತಾಲೂಕಿನ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ನಗರದ ಜನ ಸಾಂದ್ರತೆ ಕಡಿಮೆಯಾಗಲು ಹೊರವಲಯದ ಮೂಲ ಸೌಕರ್ಯಗಳನ್ನು ವೃದ್ಧಿಸಬೇಕಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಆನೇಕಲ್‌ನ ಸರ್ಜಾಪುರದ ನಾಗರಬಾವಿ ಕಲ್ಯಾಣಿಯ ಪುನಶ್ಚೇತನ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ವಿವಿಧ ಸವಲತ್ತುಗಳ ವಿತರಣೆ ಹಾಗೂ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ್ದಾರೆ. 1200 ಕೋಟಿ ವೆಚ್ಚದ ಸಬ್‌ಅರ್ಬನ್ ರೈಲು ಯೋಜನೆ ಹಾಗೂ ಉಪನಗರ ವರ್ತುಲ ರಸ್ತೆ ಆನೇಕಲ್ ಮೂಲಕ ಹಾದು ಹೋಗಲಿದೆ. ಶುದ್ಧ ಕುಡಿಯುವ ನೀರು ಪೂರೈಕೆ ಕಾಮಗಾರಿ ಸಹಾ ಪ್ರಗತಿಯಲ್ಲಿದೆ ಎಂದಿದ್ದಾರೆ.
ಕನ್ನಡ, ಸಂಸ್ಕೃತಿ ಅನುದಾನಕ್ಕೆ ಬಜೆಟ್‌ನಲ್ಲಿ ಕತ್ತರಿ ಸಾಧ್ಯತೆ!
ಕಂದಾಯ ಹಾಗೂ ನಗರಾಭಿವೃದ್ಧಿ ಸಚಿವ ಆರ್.ಅಶೋಕ್, ಶಾಸಕ ಬಿ.ಶಿವಣ್ಣ, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಮುನಿರಾಜು, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಬೆಂಗಳೂರು ದಕ್ಷಿಣ ಶಾಸಕ ಎಂ.ಕೃಷ್ಣಪ್ಪ, ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್‌ರೆಡ್ಡಿ, ಎಂಎಲ್‌ಸಿ ಮನೋಹರ್, ಶಾಸಕ ಎಸ್.ಟಿ.ಸೋಮಶೇಖರ್, ಉಪ ಮಹಾಪೌರ ಮೋಹನರಾಜು, ಯಂಗಾರೆಡ್ಡಿ, ಆನೇಕಲ್ ಪ್ರಾಧಿಕಾರದ ಆಧ್ಯಕ್ಷ ಜಯಣ್ಣ, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ವಿ.ಶಿವಪ್ಪ, ರಾಘವೇಂದ್ರ, ಮುರಳಿಕೃಷ್ಣ, ವಸಂತ, ಪಟಾಪಟ್ ರವಿ, ಮಧುಕುಮಾರ್ ಇತರರಿದ್ದರು.
ವಿವಿಧ ಇಲಾಖೆಗಳಿಂದ ಫಲಾನುಭಗಳಿಗೆ ಸವಲತ್ತುಗಳನ್ನು ವೇದಿಕೆಯಲ್ಲಿ ತರಿಸಲಾಯಿತು. ತಹಸೀಲ್ದಾರ್ ಮಹದೇವಯ್ಯ, ಡಿಎಚ್‌ಒ ಜಿ.ಎ.ಶ್ರೀನಿವಾಸ್, ಇಒ ದೇವರಾಜಗೌಡ, ಟಿಎಚ್‌ಒ ಜ್ಞಾನಪ್ರಕಾಶ್ ಫಲಾನುಭಗಳಿಗೆ ಚೆಕ್ ವಿತರಿಸಿದರು.