ಬೆಂಗಳೂರು-ಕಲಬುರಗಿ ಪ್ರಯಾಣಿಕರಿಗೆ ಸಿಹಿಸುದ್ದಿ, ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ..

Published : Nov 21, 2025, 09:55 PM IST
special express train

ಸಾರಾಂಶ

ವಾರಾಂತ್ಯದ ಪ್ರಯಾಣಿಕರ ದಟ್ಟಣೆ ನಿಭಾಯಿಸಲು, ನೈಋತ್ಯ ರೈಲ್ವೆಯು ಬೆಂಗಳೂರು ಕಂಟೋನ್ಮೆಂಟ್ ಮತ್ತು ಕಲಬುರಗಿ ನಡುವೆ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳನ್ನು ಘೋಷಿಸಿದೆ. ಇದರೊಂದಿಗೆ, ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಿರ್ಲೋಸ್ಕರವಾಡಿ ನಿಲ್ದಾಣದಲ್ಲಿ ಹೊಸ ನಿಲುಗಡೆ ನೀಡಲಾಗಿದೆ.

ಬೆಂಗಳೂರು (ನ.21): ವಾರಾಂತ್ಯಗಳಲ್ಲಿ ಪ್ರಯಾಣಿಕರ ನಿರೀಕ್ಷಿತ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು, ನೈಋತ್ಯ ರೈಲ್ವೆಯು ಬೆಂಗಳೂರು ಕಂಟೋನ್ಮೆಂಟ್ ಮತ್ತು ಕಲಬುರಗಿ ನಡುವೆ ಆರು ಟ್ರಿಪ್‌ಗಳ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ನಿರ್ವಹಿಸಲು ನಿರ್ಧರಿಸಿದೆ. ರೈಲು ಸಂಖ್ಯೆ 06207 ಬೆಂಗಳೂರು ಕಂಟೋನ್ಮೆಂಟ್ – ಕಲಬುರಗಿ ವಿಶೇಷ ಎಕ್ಸ್‌ಪ್ರೆಸ್ ರೈಲು ನವೆಂಬರ್ 22 ರಿಂದ ಡಿಸೆಂಬರ್ 27 ರವರೆಗೆ ಪ್ರತಿ ಶನಿವಾರದಂದು ರಾತ್ರಿ 07:20 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್‌ನಿಂದ ಹೊರಡಲಿದೆ ಮತ್ತು ಮರುದಿನ ಬೆಳಿಗ್ಗೆ 07:30 ಗಂಟೆಗೆ ಕಲಬುರಗಿಯನ್ನು ತಲುಪಲಿದೆ.

ಮತ್ತೆ, ರೈಲು ಸಂಖ್ಯೆ 06208 ಕಲಬುರಗಿ –ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ ರೈಲು ನವೆಂಬರ್ 23ರಿಂದ ಡಿಸೆಂಬರ್ 28ರವರೆಗೆ ಪ್ರತಿ ಭಾನುವಾರದಂದು ಬೆಳಿಗ್ಗೆ 09:35 ಗಂಟೆಗೆ ಕಲಬುರಗಿಯಿಂದ ಹೊರಟು, ಅದೇ ದಿನ ರಾತ್ರಿ 08:30 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.

ಮಾರ್ಗದಲ್ಲಿ, ಈ ರೈಲು ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣ, ಯಾದಗಿರಿ ಮತ್ತು ಶಹಾಬಾದ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಈ ರೈಲು 20 ಸ್ಲೀಪರ್ ಕ್ಲಾಸ್ ಬೋಗಿಗಳು ಮತ್ತು 2 ಸೆಕೆಂಡ್ ಲಗೇಜ್ ಕಮ್ ಬ್ರೇಕ್ ವ್ಯಾನ್/ವಿಕಲಚೇತನ ಸ್ನೇಹಿ ಬೋಗಿಗಳನ್ನು ಒಳಗೊಂಡಿರಲಿದೆ.

ಕಿರ್ಲೋಸ್ಕರವಾಡಿಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ನಿಲುಗಡೆ

ನವೆಂಬರ್ 24 ರಿಂದ ಜಾರಿಗೆ ಬರುವಂತೆ, ರೈಲು ಸಂಖ್ಯೆ 20669/20670 ಎಸ್ಎಸ್ಎಸ್ ಹುಬ್ಬಳ್ಳಿ–ಪುಣೆ–ಎಸ್ಎಸ್ಎಸ್ ಹುಬ್ಬಳ್ಳಿ ಟ್ರೈ-ವೀಕ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಿರ್ಲೋಸ್ಕರವಾಡಿ ನಿಲ್ದಾಣದಲ್ಲಿ ನಿಲುಗಡೆ ಒದಗಿಸಲಾಗಿದೆ ಎಂದು ಕೇಂದ್ರ ರೈಲ್ವೆ ತಿಳಿಸಿದೆ.

ರೈಲು ಸಂಖ್ಯೆ 20669 ಎಸ್ಎಸ್ಎಸ್ ಹುಬ್ಬಳ್ಳಿ–ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್ ಬೆಳಿಗ್ಗೆ 09:38 ಗಂಟೆಗೆ ಕಿರ್ಲೋಸ್ಕರವಾಡಿ ತಲುಪಿ, 09:40 ಗಂಟೆಗೆ ಅಲ್ಲಿಂದ ಹೊರಡಲಿದೆ. ರೈಲು ಸಂಖ್ಯೆ 20670 ಪುಣೆ–ಎಸ್ಎಸ್ಎಸ್ ಹುಬ್ಬಳ್ಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಜೆ 05:43 ಗಂಟೆಗೆ ಕಿರ್ಲೋಸ್ಕರವಾಡಿ ತಲುಪಿ, 05:45 ಗಂಟೆಗೆ ಅಲ್ಲಿಂದ ಹೊರಡಲಿದೆ. ಪ್ರಯಾಣಿಕರು ಹೊಸದಾಗಿ ಒದಗಿಸಲಾದ ಈ ನಿಲುಗಡೆಯನ್ನು ಗಮನಿಸಿ, ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

 

PREV
Read more Articles on
click me!

Recommended Stories

ಹೆಲ್ಮೆಟ್ ಕೊಟ್ಟ, ಪಿನ್ ಹೇಳಿದೆ, ಬೈಕ್ ಹತ್ತೋ ಮೊದಲೇ ಹೊರಟು ಬಿಟ್ಟ, ಬೆಂಗ್ಳೂರು ಯುವತಿ ಟ್ಯಾಕ್ಸಿ ಕತೆ
ಬಿಹಾರ, UP ಅಲ್ಲ, ಇದು ನಮ್ಮ UK; ರಸ್ತೆಯೇ ಇಲ್ಲದ 10 ಕೋಟಿ ರೂಪಾಯಿ ವೆಚ್ಚದ ಸೇತುವೆ