
ಬೆಂಗಳೂರು (ನ.21) ರಾಜ್ಯ ರಾಜಕೀಯದಲ್ಲಿ ಮಹತ್ವದ ಚರ್ಚೆಗಳು ನಡೆಯುತ್ತಿದೆ. ಪ್ರಮುಖವಾಗಿ ಮುಖ್ಯಮಂತ್ರಿ ಬದಲಾವಣೆ, ಅಧಿಕಾರ ಬದಲಾವಣೆ, ಸಂಪುಟ ಪುನರ್ ರಚನೆ ಸೇರಿದಂತೆ ಹಲವು ವಿಷಗಳು ಚರ್ಚೆಯಲ್ಲಿದೆ. ನಾಯಕರ ದೆಹಲಿ ಪ್ರವಾಸ, ಎರಡು ಬಣಗಳ ಶಾಸಕರ ಚರ್ಚೆ, ಹೈಕಮಾಂಡ್ ಭೇಟಿಯಿಂದ ರಾಜ್ಯ ರಾಜಕಾರಣದಲ್ಲಿ ಹೊಸ ಗಾಳಿ ಬೀಸುವ ಸುಳಿವು ಸಿಗುತ್ತಿದೆ. ಇದರ ಬೆನ್ನಲ್ಲೇ ಇಂದು ಬೆಂಗಳೂರಿಗೆ ಆಗಮಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಲ್ಲರ ಕೇಂದ್ರಬಿಂದುವಾಗಿದ್ದಾರೆ. ಸಾಲು ಸಾಲು ನಾಯಕರು ಖರ್ಗೆ ಭೇಟಿಗೆ ಕಾಯುತ್ತಿದ್ದಾರೆ. ಇತ್ತ ಡಿಕೆ ಶಿವಕುಮಾರ್ ಹಾಗೂ ಸಹೋದರ ಡಿಕೆ ಸುರೇಶ್ ಇಬ್ಬರು ಖರ್ಗೆ ಭೇಟಿ ನಿಗದಿಯಾಗಿತ್ತು. ಆದರೆ ಡಿಕೆ ಶಿವಕುಮಾರ್ ಖರ್ಗೆ ಭೇಟಿಯಾಗದೇ ಮನೆಗೆ ಮರಳಿದ್ದಾರೆ. ಇದೇ ವೇಳೆ ಮಾಧ್ಯಮಕ್ಕೆ ನೀಡಿದ ಪ್ರತಿಕ್ರಿಯೆ ಇದೀಗ ಭಾರಿ ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯನವೇ ಸಿಎಂ ಎಂದು ಹೇಳಿದ್ದಾರೆ. ದೊಡ್ಡವರು ಹಾಗೇ ಹೇಳಿದ ಮೇಲೆ ಚಿಕ್ಕವರಾದ ನಾವ ನಮ್ರತೆಯಿಂದ ಇರಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸಿದ್ದರಾಮನಯ್ಯನವರೇ ನಾನೇ ಸಿಎಂ ಆಗಿರುತ್ತೇನೆ ಎಂದು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಏನು ಹೇಳಿದ್ದಾರೋ ಅದಕ್ಕೆ ನಾವು ಬದ್ದ, ಹೈಕಮಾಂಡ್ ಏನು ಹೇಳುತ್ತೋ ಬದ್ದ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಸಿದ್ದರಾಮಯ್ಯನವೇ ಸಿಎಂ ಆಗಿರುತ್ತೇನೆ ಎಂದಿದ್ದಾರೆ. ಅವರ ಅಥಾರಿಟಿಯನ್ನು ನಾವು ಯಾವತ್ತೂ ಪ್ರಶ್ನೆ ಮಾಡಲ್ಲ. ರಿಶಫಲ್ ಮಾಡಬೇಡಿ ಎಂದು ನಾವು ಹೇಳಿಲ್ಲ. ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿ ಇರುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ದೊಡ್ಡವರು ಹಾಗೇ ಹೇಳಿದ ಬಳಿಕ ಚಿಕ್ಕವರಾದ ನಾವು ನಮತ್ರೆಯಿಂದ ಇರಬೇಕು ಎಂದಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದರೆ ತಪ್ಪೇನಿದೆ. ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ, ನನಗೂ ಗೊಂದಲ ಇಲ್ಲ, ಸಿಎಂ ಅವರಿಗೂ ಗೊಂದಲ ಇಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮೊನ್ನೆ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ್ದೇನೆ. ಅವಶ್ಯಕತೆ ಇದ್ದರೆ, ಖಂಡಿತ ಭೇಟಿ ಮಾಡುತ್ತೇನೆ. ಕಾಂಗ್ರೆಸ್ ಪಕ್ಷಕ್ಕೆ ಯಾವಾಗೆಲ್ಲ ಹಿರಿಯರ ಸಲಹೆ, ಮಾರ್ಗದರ್ಶನ ಅಗತ್ಯ ಇದೆಯೋ ಆವಾಗೆಲ್ಲ ಖಂಡಿತ ಭೇಟಿ ಮಾಡುತ್ತೇನೆ. ಸುಮ್ನೆ ಊಹಾಪೋಹಾ ಮಾಡಬೇಡಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.