ದೇಶದಲ್ಲೇ ಮಾದರಿ ವಿಧಾನ ಪರಿಷತ್‌ ಮಾಡುವೆ: ಹೊರಟ್ಟಿ

By Kannadaprabha News  |  First Published Feb 15, 2021, 2:19 PM IST

ಪರಿಷತ್‌ನ ಘನತೆ, ಗೌರವ ಹೆಚ್ಚುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವೆ| ಈ ಹಿಂದಿನ ಕಹಿ ಘಟನೆಗಳು ಮರುಕಳಿಸದಂತೆ ಸದನದ ಗೌರವ ಹೆಚ್ಚುಸುವ ಗುರಿ ಹೊಂದಿದ್ದೇನೆ| ತಾಯಿ, ಜನರ ಪುಣ್ಯದಿಂದ ಒಂದು ಉನ್ನತ ಹುದ್ದೆಗೆ ಏರಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ ಹೊರಟ್ಟಿ| 


ಬಾಗಲಕೋಟೆ(ಫೆ.15): ದೇಶದಲ್ಲೇ ಮಾದರಿ ವಿಧಾನ ಪರಿಷತ್‌ ಮಾಡಲು ಪ್ರಯತ್ನಿಸುವೆ ಎಂದು ನೂತನ ಸಭಾಪತಿ ಬಸವರಾಜ್‌ ಹೊರಟ್ಟಿ ಹೇಳಿದ್ದಾರೆ. 

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷತ್‌ನ ಘನತೆ, ಗೌರವ ಹೆಚ್ಚುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವೆ. ಈ ಹಿಂದಿನ ಕಹಿ ಘಟನೆಗಳು ಮರುಕಳಿಸದಂತೆ ಸದನದ ಗೌರವ ಹೆಚ್ಚುಸುವ ಗುರಿ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ. 

Tap to resize

Latest Videos

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಡಿಸಿಎಂ ಕಾರಜೋಳ ಪ್ರತಿಕ್ರಿಯೆ

ಈ ಹಿಂದೆ 7 ತಿಂಗಳ ಸಭಾಪತಿಯಾಗಿದ್ದಾಗ ಅತಿಥಿ ಉಪನ್ಯಾಸಕ ಆಗಿದ್ದೆ. ಇದೀಗ ಪ್ರೀನ್ಸಿಪಲ್‌ ಆಗಿದ್ದೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ದೇಶದಲ್ಲಿಯೇ ಮಾದರಿ ಪರಿಷತ್‌ ಮಾಡಲು ಎಲ್ಲ ರೀತಿಯ ಪ್ರಯತ್ನ ಮಾಡುವೆ. ತಂದೆ, ತಾಯಿ, ಜನರ ಪುಣ್ಯದಿಂದ ಒಂದು ಉನ್ನತ ಹುದ್ದೆಗೆ ಏರಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. 
 

click me!