ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಡಿಸಿಎಂ ಕಾರಜೋಳ ಪ್ರತಿಕ್ರಿಯೆ

By Kannadaprabha News  |  First Published Feb 15, 2021, 1:47 PM IST

ದೇಶಕ್ಕೊಂದು ಸಂವಿಧಾನವಿದೆ. ಅದರ ಆಶಯದಂತೆ ತುಳಿತಕ್ಕೊಳಗಾದವರು, ನಿರ್ಲಕ್ಷ್ಯಕ್ಕೆ ಒಳಗಾದವರು, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದವರನ್ನು ಮೀಸಲಾತಿಗೆ ಸೇರಿಸಬೇಕು| ಬೇರೆ ಜಿಲ್ಲೆಗಳ ಉಸ್ತುವಾರಿ ನನಗೆ ಬೇಡ. ಬಾಗಲಕೋಟೆ ಒಂದೇ ಸಾಕು ಎಂದ ಕಾರಜೋಳ| 


ವಿಜಯಪುರ(ಫೆ.15): ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳ ಬದಲಾವಣೆ ಇಲ್ಲ. ಈ ಬಾರಿಯ ಪೂರ್ಣಾವಧಿವರೆಗೆ ಬಿ.ಎಸ್‌.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತಾರೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ. 

ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ವಿಚಾರ ಇಲ್ಲವೇ ಇಲ್ಲ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ತಮ್ಮ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ ಎಂದರು.
ಮೀಸಲಾತಿ ಹೋರಾಟಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೇಶಕ್ಕೊಂದು ಸಂವಿಧಾನವಿದೆ. ಅದರ ಆಶಯದಂತೆ ತುಳಿತಕ್ಕೊಳಗಾದವರು, ನಿರ್ಲಕ್ಷ್ಯಕ್ಕೆ ಒಳಗಾದವರು, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದವರನ್ನು ಮೀಸಲಾತಿಗೆ ಸೇರಿಸಬೇಕು ಎಂದರು.

Tap to resize

Latest Videos

ದುಷ್ಕರ್ಮಿಗಳಿಂದ ವಿಷಪೂರಿತ ದ್ರವ್ಯ ಸಿಂಪರಣೆ: ವೃದ್ಧೆ ಸಾವು

ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ಬಾಗಲಕೋಟೆ ಜಿಲ್ಲಾ ಉಸ್ತುವಾರಿಯನ್ನು ಮಾತ್ರ ಉಳಿಸಿಕೊಳ್ಳುತ್ತೇನೆ. ಬೇರೆ ಜಿಲ್ಲೆಗಳ ಉಸ್ತುವಾರಿ ನನಗೆ ಬೇಡ. ಬಾಗಲಕೋಟೆ ಒಂದೇ ಸಾಕು ಎಂದರು.
 

click me!