ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋಗಿರುವ ರಮೇಶ್ ಜಾರಕಿಹೊಳಿ ಅಲ್ಲಿಯೂ ಖುಷಿಯಾಗಿಲ್ಲ. ಈ ನಿಟ್ಟಿನಲ್ಲಿ ಪಕ್ಷಾಂತರದ ಬಗ್ಗೆ ಮಾತಾಡುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ ಜಾರಕಿಹೊಳಿಗೆ ಕೈ ಮುಖಂಡರು ತಿರುಗೇಟು ನೀಡಿದ್ದಾರೆ.
ದಾವಣಗೆರೆ (ಫೆ.15): ಕಾಂಗ್ರೆಸ್ಸಿನಿಂದ ಯಾರು ಐದು ಜನ ಶಾಸಕರು ಬರುತ್ತಾರೆಂದು ಹೆಸರು ಹೇಳಲಿ? ಬಿಜೆಪಿಯಲ್ಲಿ ಹ್ಯಾಪಿಯಾಗಿಲ್ಲವೇನೋ, ಅದಕ್ಕೆ ಸರ್ಕಾರವನ್ನು ಬ್ಲ್ಯಾಕ್‌ಮೇಲ್ ಮಾಡಲು ರಮೇಶ ಜಾರಕಿಹೊಳಿ ಹಾಗೆಲ್ಲಾ ಹೇಳಿಕೆ ನೀಡುತ್ತಿರಬಹುದು ಎಂದು ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಪಿ.ರಾಜೀವ್ ಹರಿಹಾಯ್ದರು.
24 ಗಂಟೆಯಲ್ಲಿ 5 ಕಾಂಗ್ರೆಸ್ ಶಾಸಕರ ರಾಜೀನಾಮೆ: ಹೊಸ ಬಾಂಬ್ ಸಿಡಿಸಿದ ಸಚಿವ
ಸೂರಗೊಂಡನಕೊಪ್ಪದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ವೈಯಕ್ತಿಕ ವಿಚಾರಕ್ಕಾಗಿ, ಸಚಿವರಾಗಲು ರಮೇಶ ಜಾರಕಿಹೊಳಿ ಇತರರು ಬಿಜೆಪಿಗೆ ಹೋದರು. ತಾವು ಪಕ್ಷ ತೊರೆದು, ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದರು ಎಂದರು.
ಮತ್ತೆ ಹೊಸ ತಿರುವು ಪಡೆದುಕೊಂಡ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ...
ಯಾರು ಕಾಂಗ್ರೆಸ್ ಅನ್ನು ತೊರೆದು ಬರುತ್ತಾರೆಂಬ ಬಗ್ಗೆ ರಮೇಶ ಜಾರಕಿಹೊಳಿ ಹೆಸರು ಹೇಳಲಿ. ನಾವು ಸಾಕಷ್ಟುಸಲ ಮಾಧ್ಯಮಗಳ ಮೂಲಕ ಹೇಳಿದ್ದೇವೆ. ಸಿದ್ದರಾಮಯ್ಯ ಇರೋವರೆಗೂ ಕಾಂಗ್ರೆಸ್ ತೊರೆಯುವ ಯೋಚನೆ ಮಾಡುವುದಿಲ್ಲ, ಕಾಂಗ್ರೆಸ್ಸಿನಲ್ಲೇ ಇರುತ್ತೇವೆ. ರಮೇಶ ಜಾರಕಿಹೊಳಿ ಯಾರ ಹೆಸರು ಹೇಳಿದ್ದಾರೋ ಗೊತ್ತಿಲ್ಲ. ಹೀಗೆ ಹೇಳುವುದನ್ನು ನೋಡಿದರೆ ಅಲ್ಲಿ ರಮೇಶ ಜಾರಕಿಹೊಳಿ ಹ್ಯಾಪಿಯಾಗಿಲ್ಲ ಅನಿಸುತ್ತೆ ಎಂದು ಹೇಳಿದರು.
ನನ್ನನ್ನು ಸಂಪರ್ಕಿಸಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಜೊತೆ ಸಿದ್ದರಾಮಯ್ಯ ಇದ್ದಾರೆ. ನಮಗೆ ಕಾಂಗ್ರೆಸ್ ಪಕ್ಷ ಗುರುತಿಸಿ, ಬಿ ಫಾರಂ ನೀಡಿದೆ. ಪಕ್ಷದ ಕಾರ್ಯಕರ್ತರು, ಕ್ಷೇತ್ರದ ಮತದಾರರು ನಮಗೆ ಗೆಲ್ಲಿಸಿ ಕಳಿಸಿದ್ದಾರೆ. ಪಕ್ಷಕ್ಕೆ ದ್ರೋಹ ಬಗೆಯುವುದೆಂದರೆ ತಾಯಿಗೆ ದ್ರೋಹ ಬಗೆದಂತೆ, ನಾವು ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.