ಕೆಜಿಎಫ್ (ಅ.18): ಒಂದಡೆ ಕೃಷಿ (Agriculrure) ಬಿಟ್ಟು ಉದ್ಯೋಗಕ್ಕಾಗಿ ನಗರದತ್ತ ಯುವ ಸಮುದಾಯ ವಲಸೆ ಹೋಗುತ್ತಿದ್ದರೆ,ಇನ್ನೊಂದೆಡೆ ನಗರದಲ್ಲಿ ಕೈತುಂಬ ಸಂಬಳ ಪಡೆಯುವ ಯುವಜನ ಕೆಲಸ (Job) ತೊರೆದು ಕೃಷಿಗಿಳಿಯುತ್ತಿದ್ದಾರೆ.
ಮೂಲತಃ ಕೋಲಾರ (Kolar) ಜಿಲ್ಲೆಯಲ್ಲಿ ಪ್ರಪ್ರರ್ಥಮವಾಗಿ ಕೆಜಿಎಫ್ (KGF) ತಾಲೂಕಿನ ಗೊರ್ಲಚಿನ್ನೇನಹಳ್ಳಿಯ ರೈತನ ಮಗನಾದ ಹರೀಶ್‌ರೆಡ್ಡಿ ಬಿ.ಇ.ಪದವಿದರನಾಗಿದ್ದು, ಒಂದು ಎಕರೆ ಜಮೀನಿನಲ್ಲಿ (Land) ಸಿಗಡಿ ಮೀನಿನ (Prawn Fishing) ಕೃಷಿ ಆರಂಬಿಸಿದ್ದಾರೆ, ಪ್ರಥಮವಾಗಿ 10 ಗುಂಟೆ ಜಮೀನಿನಲ್ಲಿ ಸಿಗಡಿ ಕೃಷಿ ಮಾಡಿ 90 ದಿನಗಳಲ್ಲಿ 4 ಲಕ್ಷ ರೂಪಾಯಿಗಳನ್ನು ಸಂಪಾದನೆ (income) ಮಾಡಿ ಸೈ ಎನಿಸಿಕೊಂಡಿದ್ದಾನೆ.
undefined
ಸಿಹಿ ನೀರಿನಲ್ಲಿ (Sweet Water) ಸೀಗಡಿ ಮೀನು ಕೃಷಿ ಮಾಡಿ ಯಶ್ವವಿಯಾಗಿರುವ ಗೊರ್ಲಚಿನ್ನನೇಹಳ್ಳಿಯ ಹರೀಶ್‌ರೆಡ್ಡಿಯವರ ಸಿಗಡಿ ಕೃಷಿ ಹೊಂಡಕ್ಕೆ ಬೆಂಗಳೂರಿನ ಹೆಬ್ಬಾಳದ (Hebbal) ಮೀನುಗಾರಿಗೆ ಸಂಶೋಧನಾ ಕೇಂದ್ರ ಸಲಹೆಗಾರರಾದ ಶಿವಕುಮಾರ್ ಮಾಗಧ ಸಿಗಡಿ ಕೃಷಿ ಮಾಡಿ ಯಶ್ವಿಯಾದ ಹಿನ್ನಲೆಯಲ್ಲಿ ಕ್ಷೇತ್ರೋತ್ಸವ ಕಾರ‍್ಯಕ್ರಮದಲ್ಲಿ ಪ್ರಶಂಸೆ ವ್ಯಕ್ತಪಡಿಸಿದರು.
ಮೀನುಗಾರಿಕೆ ಅಭಿವೃದ್ದಿಗೆ ಮತ್ಸ್ಯ ಸಂಪದ ಯೋಜನೆ ಜಾರಿ
ಮೊದಲನೆ ಸಲ 10 ರಿಂದ 12 ಲಕ್ಷ ರೂಪಾಯಿಗಳ ಬಂಡಾವಳವನ್ನು (Investment) ಹೋಡಬೇಕಾಗುತ್ತದೆ, ನಂತರ ಸಿಗಡಿ ಕೃಷಿಗೆ ಖರ್ಚು ಕಡಿಮೆಯಾಗುತ್ತದೆ, ಮೊದಲನೆ ಸಿಗಡಿ ಕೃಷಿಯಲ್ಲಿ ಕಡಿಮೆ ಲಾಭ ಬರಲಿದ್ದು, ನಂತರ ಮೂರು ತಿಂಗಳುಗೊಮ್ಮೆ 4 ರಿಂದ 5 ಲಕ್ಷ ರೂಪಾಯಿಗಳ ಆದಾಯ ಕಾಣಬಹುದಾಗಿದೆ ಎಂದು ಉಪ ನಿರ್ದೇಶಕರಾದ ಡಾ. ಸಿಎಸ್,ಆನಂತ್ ತಿಳಿಸಿದರು.
ಕೇಂದ್ರ ಸರ್ಕಾರದ ಪ್ರೋತ್ಸಾಹ ಧನ
ಪ್ರಧಾನ ಮಂತ್ರಿಗಳ ಮತ್ಸ ಅಭಿವೃದ್ದಿ ಯೋಜನೆಯಡಿ ( ಸಿಗಡಿ ಮೀನು ಸಕಾಣಿಕೆ ಮಾಡುವ ಮಹಿಳಾ ರೈತರಿಗೆ ಶೇ 65 ರಷ್ಟುಪ್ರೋತ್ಸಾಹ ಧನ (Subsidy) ಸಿಗಲಿದೆ, ಎಸ್ಸಿ ಎಸ್ಟಿ (SC -ST) ಜಾನಂಗದವರಿಗೆ ಶೇ.60 ರಷ್ಟು, ಸಮಾನ್ಯ ವರ್ಗದ ರೈತರಿಗೆ ಶೇ.40 ರಷ್ಟುಪ್ರೋತ್ಸಹ ಧನವನ್ನು ಕೇಂದ್ರ ಸರಕಾರ ನೀಡಲಾಗುತ್ತದೆ, ಕಡಿಮೆ ನೀರಿನ ಸೌಲಭ್ಯ ಹಾಗೂ ಸಣ್ಣ ರೈತರು ಸಿಗಡಿ ಮೀನಿನ ಕೃಷಿ ಮಾಡಿದರೆ ಉತ್ತಮ ಲಾಭ ದೊರೆಯಲಿದೆ ಎಂದು ಡಾ.ಸಿ.ಎಸ್.ಅನಂತ್ ಹೇಳಿದರು.
ಏನಿದು ಯೋಜನೆ
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ( Pradhan Mantri Matsya Sampada Yojana ) ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಯೋಜನೆಯಾಗಿದ್ದು, 2020-2025 ವರೆಗಿನ ಪಂಚವಾರ್ಷಿಕ ಯೋಜನೆಯಾಗಿರುತ್ತದೆ. ಒಳನಾಡು ಮೀನುಗಾರಿಕೆ ಇನ್ನಷ್ಟು ಅಭಿವೃದ್ಧಿ ಪಡಿಸಲು ಉತ್ತಮ ಅವಕಾಶವಿದೆ. ಯೋಜನೆ ಸಮರ್ಪಕವಾಗಿ ಬಳಸಿಕೊಂಡು ಮೀನು ಮರಿ ಉತ್ಪಾದನೆ, ಹೊಸ ತಂತ್ರಜ್ಞಾನ ಅಳವಡಿಕೆ, ಮೀನುಗಾರಿಕೆ ಮೂಲಭೂತ ಸೌಕರ್ಯ ಕಲ್ಪಿಸುವುದು, ಮೀನು ಮಾರುಕಟ್ಟೆಗಳ (Market) ನಿರ್ಮಾಣ, ಮೀನುಗಾರರ ಜೀವನೋಪಾಯ ಹಾಗೂ ಪೌಷ್ಟಿಕತೆಗೆ ಬೆಂಬಲ ನೀಡುವುದು, ಮೀನುಗಾರಿಕಾ ತರಬೇತಿ ನೀಡಲು ಸಾಧ್ಯವಿದೆ
2020-21ನೇ ಸಾಲಿಗೆ ಒಟ್ಟು ರು.3.13 ಕೋಟಿ ಯೋಜನಾ ವೆಚ್ಚದೊಂದಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಮೀನುಮರಿ ಪಾಲನೆ ಪ್ರತಿ ಹೆಕ್ಟೇರ್ ವಿಸ್ತೀರ್ಣಕ್ಕೆ ರು. 11 ಲಕ್ಷವಿದ್ದು ಸಾಮಾನ್ಯ ವರ್ಗದವರಿಗೆ ಶೇ.40 ಹಾಗೂ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡದ ಹಾಗೂ ಮಹಿಳೆಯರಿಗೆ ಶೇ.60 ಸಹಾಯಧನ ಲಭ್ಯವಿದೆ.
ಮೀನುಗಾರಿಕಾ ಬೋಟ್‌ಗೂ ಬಂತು ಉಪ್ಪು ನೀರು ಶುದ್ಧಿ ಯಂತ್ರ!
ಮೀನು ಕೃಷಿಕೊಳ ನಿರ್ಮಾಣ, ಸಾರಯುಕ್ತ ಮಣ್ಣಿನಲ್ಲಿ ಮೀನು ಉತ್ಪಾದನಾ ಕೊಳ ನಿರ್ಮಾಣ, ಮೀನು ಸಾಕಾಣಿಕೆಗೆ ಹೂಡಿಕೆ ಸಹಾಯ, ಬಯೋಪ್ಲಾಕ್ ಕೊಳ ನಿರ್ಮಾಣ, ಸಣ್ಣ ಮತ್ತು ಮಧ್ಯಮ ಗಾತ್ರದ ಅಲಂಕಾರಿಕ ಮೀನು ಉತ್ಪಾದನೆ ಮತ್ತು ಪಾಲನಾ ಕೇಂದ್ರ ನಿರ್ಮಾಣ, ರೀಸಕ್ರ್ಯೂಲೇಟರಿ ಅಕ್ವಕಲ್ಚರ್ ಸಿಸ್ಟಂ ನಿರ್ಮಾಣ, ಜಲಾಶಯಗಳಲ್ಲಿ ಕೇಜ್‌ಗಳ ಸ್ಥಾಪನೆ, ಜಲಾಶಯಗಳಲ್ಲಿ ಪೆನ್‌ಕಲ್ಚರ್ ನಿರ್ಮಾಣ, ಮಂಜುಗಡ್ಡೆ ಉತ್ಪಾದನಾ ಕಾರ್ಖಾನೆ, ಕೋಲ್ಡ್ ಸ್ಟೋರೇಜ್ ನಿರ್ಮಾಣ, ರೆಫ್ರಿಜರೇಟರ್ ವಾಹನ, ಇನ್ಸುಲೇಟೇಡ್ ವಾಹನ, ಮೋಟಾರ್ ಸೈಕಲ್ ಐಸ್ ಬಾಕ್ಸ್ ಖರೀದಿ, ಸೈಕಲ್ ಮತ್ತು ಐಸ್‌ಬಾಕ್ಸ್ ಖರೀದಿ, ಮೀನು ಮಾರಾಟ ಕಿಯೋಸ್ಕ್ ನಿರ್ಮಾಣ, ಮೀನು ಆರೋಗ್ಯ ತಪಾಸಣಾ ಪ್ರಯೋಗಾಲಯಗಳ ಸ್ಥಾಪನೆ, ಮೊಬೈಲ್ ಕ್ಲಿನಿಕ್ ಲ್ಯಾಬ್‌ಗಳು ಹಾಗೂ ಮತ್ಸ್ಯ ಸೇವಾ ಕೇಂದ್ರಗಳ ಸ್ಥಾಪನೆ ಹಾಗೂ ಮೀನುಗಾರರ ಜೀವನೋಪಾಯ ಹಾಗೂ ಪೌಷ್ಟಿಕತೆಗೆ ಒತ್ತು ನೀಡುವುದು, ಮೀನುಗಾರರಿಗೆ ಜೀವ ವಿಮಾ ಸೌಲಭ್ಯ ಕ್ರಿಯಾ ಯೋಜನೆಯಲ್ಲಿ ಕಲ್ಪಿಸಲಾಗಿದೆ.