ಕೆಸರು ಗದ್ದೆಗಳಾದ ಕೋಲಾರದ ರಸ್ತೆಗಳು : ಸಾರ್ವಜನಿಕರಿಗೆ ಸಂಕಷ್ಟ

By Kannadaprabha NewsFirst Published Oct 18, 2021, 2:53 PM IST
Highlights
  • ನಗರದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ರಸ್ತೆಗಳು ಹದಗೆಟ್ಟಿದ್ದು, ಕೆಲವು ರಸ್ತೆಗಳು ಕೆಸರುಗದ್ದೆಯಂತಾಗಿವೆ
  • ರಸ್ತೆಗಳಲ್ಲಿ ಜನರು ಮತ್ತು ವಾಹನಗಳು ಸಂಚರಿಸುವುದೇ ದುಸ್ತರ

ವರದಿ :  ಸತ್ಯರಾಜ್‌ ಜೆ.

 ಕೋಲಾರ (ಅ.18):  ನಗರದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ (Rain) ರಸ್ತೆಗಳು ಹದಗೆಟ್ಟಿದ್ದು, ಕೆಲವು ರಸ್ತೆಗಳು ಕೆಸರುಗದ್ದೆಯಂತಾಗಿವೆ. ಈ ರಸ್ತೆಗಳಲ್ಲಿ ಜನರು ಮತ್ತು ವಾಹನಗಳು (vehicle) ಸಂಚರಿಸುವುದೇ ದುಸ್ತರವಾಗಿದೆ.

ನಗರದಲ್ಲಿ ಕೆಲವು ರಸ್ತೆಗಳ ಅಗಲೀಕರಣ ಕಾಮಗಾರಿ ಅಪೂರ್ಣಗೊಂಡಿದ್ದು, ಈ ಮೊದಲು ಧೂಳಿನಿಂದ ತುಂಬಿದ್ದ ರಸ್ತೆಗಳು ಈಗ ಮಳೆಯಿಂದಾಗಿ ಕೆಸರುಮಯವಾಗಿವೆ.

ಅನುದಾನ ಇದ್ದರೂ ಕೆಲಸ ಸ್ಥಗಿತ

ಅದರಲ್ಲೂ ನಗರದ ಎಂಬಿ ರಸ್ತೆ (MB Road) ಮತ್ತು ಕ್ಲಾಕ್‌ಟವರ್‌ನಿಂದ ಬಂಗಾರಪೇಟೆ (Bangarpete) ಸರ್ಕಲ್‌ವರೆಗಿನ ರಸ್ತೆಗಳನ್ನು ನಾಲ್ಕೈದು ತಿಂಗಳ ಹಿಂದೆ ಕಿತ್ತು ಹಾಕಿದ್ದು ಈವರೆಗೆ ಅಭಿವೃದ್ಧಿ ಕಾಮಗಾರಿ ನಡೆದೇ ಇಲ್ಲ. ಇದರಿಂದಾಗಿ ಈ ರಸ್ತೆಗಳಲ್ಲಿ ಕೆಸರು ತುಂಬಿದ್ದು ಜನತೆ ಇಲ್ಲಿನ ಆಡಳಿತ ವ್ಯವಸ್ಥೆಗೆ ಛೀಮಾರಿ ಹಾಕುತ್ತಿದ್ದಾರೆ. ಈ ರಸ್ತೆಗಳ ಅಗಲೀಕರಣಕ್ಕಾಗಿ ಸರ್ಕಾರದಿಂದ (Government) ಹಣ ಮಂಜೂರಾಗಿದೆ . ಆದರೆ ಕಾಮಗಾರಿ ಗುತ್ತಿಗೆ ಪಡೆದವರು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.

ಧಾರಾಕಾರ ಮಳೆಗೆ ಸಾವಿನ ಗುಂಡಿಗಳಾದ ಬೆಂಗಳೂರು ರಸ್ತೆಗಳು, ಹೆಚ್ಚುತ್ತಿವೆ ಅಪಘಾತ

ನಗರದ ಬಂಗಾರಪೇಟೆ ಸರ್ಕಲ್‌ನಿಂದ ಕ್ಲಾಕ್‌ ಟವರ್‌ವರೆಗೂ ಚರಂಡಿ ಕೆಲಸಗಳು ಇನ್ನೂ ಪೂರ್ಣಗೊಂಡಿಲ್ಲ ಗುತ್ತಿಗೆದಾರರು ತಮಗೆ ಬೇಕಾದಂತೆ ಹಳ್ಳಗಳನ್ನು ತೋಡಿಬಿಟ್ಟಿದ್ದಾರೆ ಕೆಲವು ಕಡೆ ಅಧಂಬರ್ಧ ತೋಡಿ ಬಿಟ್ಟಿರುವುದರಿಂದ ಚರಂಡಿ ನೀರು ರಸ್ತೆಗಳಲ್ಲಿ ಹರಿದಿರುವುದರಿಂದ ರಸ್ತೆಗಳೆಲ್ಲೆಲ್ಲಾ ನೀರು ತುಂಬಿಕೊಂಡು ಜನ ಓಡಾಡದ ಸ್ಥಿತಿ ನಿರ್ಮಾಣಗೊಂಡಿದೆ.

ಅಗತ್ಯಕ್ಕಿಂತ ದೊಡ್ಡದಾದ ಚರಂಡಿ

ಕನಕನ ಮಂದಿರದಿಂದ ಡೂಂ ಲೈಟ್‌ ಸರ್ಕಲ್‌ವರೆಗೆ ರಸ್ತೆಗಳನ್ನು ಜೆಸಿಬಿಗಳಿಂದ (JCB) ಅಗೆಯಲಾಗಿದೆ. ಮಾರ್ಗ ಮಧ್ಯದಲ್ಲಿ ಅಗತ್ಯಕ್ಕಿಂತಲೂ ದೊಡ್ಡದಾದ ಚರಂಡಿಯನ್ನು ನಿರ್ಮಾಣ ಮಾಡುತ್ತಿರುವುದರಿಂದ ಅದನ್ನು ಹತ್ತಿ ಇಳಿಯುವುದೇ ದುಸ್ತರವಾಗಿದೆ. ಕಳೆದ 5 ತಿಂಗಳಿನಿಂದನಿಂದಲೂ ಈ ಚರಂvಡಿ ಕಾಮಗಾರಿ ನಡೆಯುತ್ತಲೇ ಇದೆ.

ಇತ್ತ ಎಂಬಿ ರಸ್ತೆಯ ಸ್ಥಿತಿಯೂ ಅದೇ ರೀತಿ ಇದೆ ಈ ರಸ್ತೆಯಲ್ಲಿ ಒಂದಷ್ಟುಕಡೆ ಜಲ್ಲಿ ಕೆಲಸಗಳನ್ನು ಮುಗಿಸಿರುವುದರು ಬಿಟ್ಟರೆ ಉಳಿದೆಲ್ಲ ಕಡೆ ರಸ್ತೆಗಳನ್ನು ಅಗೆಯಲಾಗಿದೆ ಆದರೆ ರಿಪೇರಿ ಕೆಲಸ ಆಗಿರುವುದಿಲ್ಲ. ಈಗ ನಗರದಲ್ಲಿ ಆಗಿರುವ ಕಾಮಗಾರಿಗಳು ಅತ್ಯಂತ ಕಳಪೆಯಿಂದ ಕೂಡಿದ್ದು ಬೇಕಾಬಿಟ್ಟಿಯಾಗಿ ಕೆಲಸ ಮಾಡಲಾಗುತ್ತಿದೆ ಎಂಬ ಸಾರ್ವಜನಿಕ ಆರೋಪಗಳು ದಟ್ಟವಾಗಿ ಕೇಳಿ ಬರುತ್ತಿವೆ.

ಶಾಸಕ ಶ್ರೀನಿವಾಸಗೌಡರ ಮೌನ

ಹಿಂದೆ ವರ್ತೂರ್‌ ಪ್ರಕಾಶ್‌ (varthoor Prakash) ಕಾಲದಲ್ಲಿ ನಗರದ ರಸ್ತೆಗಳ ಬಗ್ಗೆ ಟೀಕೆ ಮಾಡುತ್ತಿದ್ದ ಶಾಸಕ ಶ್ರೀನಿವಾಸಗೌಡರು (Shrinivas Gowda) ಈಗ ಯಾಕೆ ಸುಮ್ಮನೆ ಇದ್ದಾರೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಕೋಲಾರದಲ್ಲಿರುವ (Kolar) ರಸ್ತೆಗಳನ್ನು ನೋಡಿ ಸಾರ್ವಜನಿಕರು ಟೀಕಿಸುತ್ತಾರೆ ಎಂದು ಹೇಳುತ್ತಿದ್ದ ಶ್ರೀನಿವಾಸಗೌಡ ಈಗ ಮಾತೇ ಆಡುತ್ತಿಲ್ಲವೇಕೆ ಎಂದು ಸಾರ್ವಜನಿಕರು (Publics) ಪ್ರಶ್ನಿಸುತ್ತಿದ್ದಾರೆ.

ಪುಣೆಯ ರಸ್ತೆ ಬದಿಯಲ್ಲಿ ಸಾವಿರಾರು ಕೋಸ್ಮಸ್: ಇಳಿದು ಸೆಲ್ಫಿ ಕ್ಲಿಕ್ಕಿಸ್ತಿದ್ದಾರೆ ಜನ

ಕೋಲಾರದಿಂದ ವಿಜಯಪುರದವರೆಗೆ (Vijayapura) ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿ ಪರಿಸ್ಥಿತಿಯೂ ಇದೇ ಆಗಿದೆ ಇದನ್ನೂ ವಿಜಯಪುರದ ಗುತ್ತಿಗೆದಾರರೊಬ್ಬರು ಕಾಮಗಾರಿ ನಿರ್ವಹಿಸುತ್ತಿದ್ದು ಇದೂ ಕೂಡಾ ಆಮೆ ಗತಿಯಲ್ಲಿ ಸಾಗುತ್ತಿದೆ. ಕಾಮಗಾರಿ ಗುಣಮಟ್ಟಕಳಪೆಯಾಗಿದ್ದು ಈ ಎರಡು ತಿಂಗಳಲ್ಲಿ ಆಗಿರುವ ರಸ್ತೆಗಳು ಅಗಲೇ ಕಿತ್ತು ಬರುತ್ತಿದೆ.

ರಸ್ತೆ ಕಾಮಗಾರಿ ಗುಣಮಟ್ಟಕಳಪೆ

ನಗರದ ಹಳೆಯ ಬಸ್‌ ನಿಲ್ದಾಣದಿಂದ (Bus Stand) ಬಂಗಾರಪೇಟೆ ರಸ್ತೆ ವರೆಗಿನ ರಸ್ತೆ ಕಾಮಗಾರಿ ಗುಣಮಟ್ಟಇರುವುದಿಲ್ಲ, ರಸ್ತೆಯ ಮಧ್ಯ ಭಾಗದಲ್ಲಿ ಅಳವಡಿಸಿರುವ ಒಳಚರಂಡಿ ಮುಚ್ಚಳಗಳು ಈಗಾಗಲೇ ಮುರಿದು ಹಾಳಾಗಿವೆ ಇದರಿಂದ ವಾಹನಗಳು ಓಡಾಡುವುದಕ್ಕೂ ಕಿರಿಕಿರಿ ಉಂಟಾಗುತ್ತಿದೆ ಎಂಬ ದೂರುಗಳು ಹೆಚ್ಚಾಗಿವೆ. ಅಮೃತ್‌ ಸಿಟಿ (Amruth City) ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ಖರ್ಚಾಗಿದೆ ಆದರೆ ಒಳಚರಂಡಿ ವ್ಯವಸ್ಥೆ ಹಾಳಾಗಿದೆ, ಅಧಿಕಾರಿಗಳು (Officers) ಇದನ್ನೆಲ್ಲಾ ನೋಡಿಕೊಂಡು ಮೌನವಾಗಿದ್ದಾರೆ.

 ನಗರದ ಎಂಬಿ ರಸ್ತೆ ಮತ್ತು ಕ್ಲಾಕ್‌ ಟವರ್‌ನಿಂದ ಬಂಗಾರಪೇಟೆ ಸರ್ಕಲ್‌ವರೆಗೆ ನಡೆಯುತ್ತಿರುವ ರಸ್ತೆಯ ಜವಾಬ್ದಾರಿ ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ. ರಸ್ತೆಯ ನಿರ್ಮಾಣ ಕಾರ್ಯದಲ್ಲಿ ವಿಳಂಬ ಆಗುತ್ತಿದೆ ಎನ್ನುವ ದೂರುಗಳು ಇವೆ. ಕೂಡಲೇ ರಸ್ತೆಯ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು.

-ಪ್ರಸಾದ್‌, ನಗರಸಭೆ ಆಯುಕ್ತರು.

click me!