* ರೈತರಿಗೆ ಒತ್ತಡ ಕಡಿಮೆ ಮಾಡಲು ಈ ಕ್ರಮ
* ಸಿಬ್ಬಂದಿ ಕೊರತೆ ನೀಗಿಸಲು 700 ಸಿಬ್ಬಂದಿ ನೇಮಕಕ್ಕೆ ಸರ್ಕಾರ, ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದೆ
* ಸ್ವಾಧೀನ ಪ್ರಕ್ರಿಯೆ ಮುಗಿದಾಕ್ಷಣವೇ ಕಾಮಗಾರಿ ಆರಂಭ
ಧಾರವಾಡ(ಜೂ.22): ಬೀಜ-ಗೊಬ್ಬರ ಕೃತಕ ಅಭಾವ ಸೃಷ್ಟಿಹಾಗೂ ರೈತರಿಗೆ ಬೇಡವಾದ ಗೊಬ್ಬರ ಖರೀದಿಗೆ ಅಗ್ರೋ ಕೇಂದ್ರ ಒತ್ತಡ ಹೇರುವುದು ತಪ್ಪಿಸಲು ಮುಂದಿನ ವರ್ಷದಿಂದ ಸೊಸೈಟಿ ಮೂಲಕವೇ ರೈತರಿಗೆ ಬಿತ್ತನೆ ಬೀಜ-ಗೊಬ್ಬರ ವಿತರಣೆಗೆ ಸರ್ಕಾರ ಕ್ರಮ ವಹಿಸಲಿದೆ ಎಂದು ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯಲ್ಲಿ ಶೇ. 80ರಷ್ಟುಬಿತ್ತನೆಯಾಗಿದೆ. ಶೇ. 20ರಷ್ಟು ಮಾತ್ರ ಬಿತ್ತನೆ ಕ್ಷೇತ್ರ ಉಳಿದಿದೆ. ಸದ್ಯ ರೈತರಿಗೆ ಬೇಕಾಗುವಷ್ಟುಬೀಜ, ಗೊಬ್ಬರ ದಾಸ್ತಾನು ಇದೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದ ಅವರು, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಸಾಕಷ್ಟುಪ್ರಮಾಣದಲ್ಲಿ ಮಳೆ ಸುರಿದಿದೆ. ಜೂನ್ ತಿಂಗಳಲ್ಲಿ ವಾಡಿಕೆ ಮಳೆ ಕ್ಷೀಣಿಸಿದರೂ ಮಂಗಳವಾರದಿಂದ ಮಳೆ ಬರುತ್ತಿದೆ ಎಂದರು.
undefined
ದುಡ್ಡು ಕೊಡ್ತೀನಿ ಅಂದ್ರೂ ಸಿಗ್ತಿಲ್ಲ ಬೂಸ್ಟರ್ ಡೋಸ್..!
ಬೂಸ್ಟರ್ ಡೋಸ್ ನೀಡಿ..
ಆರೋಗ್ಯ ಇಲಾಖೆ ಎರಡನೇ ಹಂತದ ಲಸಿಕೆ ಗುರಿ ಸಾಧಿಸಿದೆ. ಬೂಸ್ಟರ್ ಡೋಸ್ ಸಹ ದಾಸ್ತಾನಿದೆ. ಜನರಿಗೆ ತೊಂದರೆ ಆಗದಂತೆ ಅವಶ್ಯವಿರುವ ಖಾಸಗಿ ಆಸ್ಪತ್ರೆಗಳಿಗೆ ಬೇಡಿಕೆ ಅನುಸಾರ ಪೂರೈಸಲಿದೆ. ಬೂಸ್ಟರ್‌ಗೆ ಖಾಸಗಿ ಆಸ್ಪತ್ರೆ ಆರೋಗ್ಯ ಇಲಾಖೆ ಸಂಪರ್ಕಿಸಲು ತಿಳಿಸಿದರು. ಇನ್ನು, ಕೋವಿಡ್ ಸಂಭಾವ್ಯ 4ನೇ ಅಲೆ ಆಗಮಿಸುತ್ತಿದೆ. ಮುಂಜಾಗೃತವಾಗಿ ಜಿಲ್ಲೆಯಲ್ಲಿ 2,400 ಬೆಡ್ ವ್ಯವಸ್ಥೆ ಮಾಡಿದೆ. ಆಕ್ಸಿಜನ್ ಹಾಗೂ ವೆಂಟಿಲೇಟರ್ ವ್ಯವಸ್ಥೆ ಮಾಡಿಕೊಂಡಿದೆ. ಈ ನಾಲ್ಕನೇ ಅಲೆ ಎದುರಿಸಲು ಆರೋಗ್ಯ ಇಲಾಖೆ ಸರ್ವ ಸನ್ನದ್ಧವಾಗಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಸಿಬ್ಬಂದಿ ನೇಮಕ:
ಕಿಮ್ಸ್‌ನಲ್ಲಿ ಸಿಬ್ಬಂದಿ ಕೊರತೆ ಹಾಗೂ ಇದರಿಂದ ಜನರಿಗೆ ತೊಂದರೆ ಆಗುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ಸಿಬ್ಬಂದಿ ಕೊರತೆ ನೀಗಿಸಲು 700 ಸಿಬ್ಬಂದಿ ನೇಮಕಕ್ಕೆ ಸರ್ಕಾರ, ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದೆ. ಎರಡ್ಮೂರು ತಿಂಗಳಲ್ಲಿ ನೇಮಕ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದರು.
ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಅಗಲೀಕರಣಕ್ಕೆ ಶಂಕು ಸ್ಥಾಪನೆಯಾಗಿ ಐದು ತಿಂಗಳಾದರೂ ಕಾಮಗಾರಿ ವಿಳಂಬವಾಗಿದೆ. ಇದಕ್ಕೆ ಇನ್ನೂ 80 ಎಕರೆ ಭೂಸ್ವಾಧೀನ ಬಾಕಿ ಇರುವುದೇ ಕಾರಣ. ಈ ಸ್ವಾಧೀನ ಪ್ರಕ್ರಿಯೆ ಮುಗಿದಾಕ್ಷಣವೇ ಕಾಮಗಾರಿ ಆರಂಭಿಸಲಾಗುವುದು ಅಂತ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.