ಚೆನ್ನೈ-ಮಂಗಳೂರು-ರಾಮೇಶ್ವರಂ ಏಕಮುಖ ವಿಶೇಷ ರೈಲು, ಈ ಹೊಸ ಮಾರ್ಗಗಳ ಬಗ್ಗೆ ನಿಮಗೆ ಗೊತ್ತೇ?

Gowthami K   | Kannada Prabha
Published : Oct 19, 2026, 07:15 AM IST
Indian Railways

ಸಾರಾಂಶ

ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ದಕ್ಷಿಣ ರೈಲ್ವೆಯು ಚೆನ್ನೈ-ಮಂಗಳೂರು ಮತ್ತು ಮಂಗಳೂರು-ರಾಮೇಶ್ವರಂ ನಡುವೆ ಏಕಮುಖ ವಿಶೇಷ ರೈಲುಗಳನ್ನು ಘೋಷಿಸಿದೆ. ಈ ರೈಲುಗಳು ಅಕ್ಟೋಬರ್ 17 ಮತ್ತು 19 ರಂದು ಸಂಚರಿಸಲಿದ್ದು, ಒಟ್ಟು 21 ಬೋಗಿಗಳನ್ನು ಹೊಂದಿರಲಿವೆ.

ಮಂಗಳೂರು: ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸುವ ಉದ್ದೇಶದಿಂದ ಚೆನ್ನೈ ಎಗ್ಮೋರ್‌ನಿಂದ ಮಂಗಳೂರು ಸೆಂಟ್ರಲ್‌ಗೆ ಹಾಗೂ ಮಂಗಳೂರು ಸೆಂಟ್ರಲ್‌ನಿಂದ ರಾಮೇಶ್ವರಂಗೆ ಏಕಮುಖ ಎಕ್ಸ್‌ಪ್ರೆಸ್ ವಿಶೇಷ ರೈಲುಗಳನ್ನು ಓಡಿಸಲು ದಕ್ಷಿಣ ರೈಲ್ವೆ ಅಧಿಸೂಚನೆ ಹೊರಡಿಸಿದೆ.

ರೈಲು ಸಂಖ್ಯೆ 06142 ಮಂಗಳೂರು ಸೆಂಟ್ರಲ್ - ರಾಮೇಶ್ವರಂ ಎಕ್ಸ್‌ಪ್ರೆಸ್ ವಿಶೇಷ ರೈಲು ಅ.19ರಂದು ಬೆಳಗ್ಗೆ 4.15ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಅದೇ ದಿನ ಸಂಜೆ 7.30 ಗಂಟೆಗೆ ರಾಮೇಶ್ವರಂ ತಲುಪಲಿದೆ.

ಈ ವಿಶೇಷ ರೈಲುಗಳು ಒಟ್ಟು 21 ಬೋಗಿಗಳನ್ನು ಹೊಂದಿರಲಿವೆ. ಇವುಗಳಲ್ಲಿ ಪ್ರಥಮ ದರ್ಜೆ ಎಸಿ, ಎಸಿ ಟು ಟಯರ್, ಎಸಿ ತ್ರಿ ಟಯರ್, ಸ್ಲೀಪರ್ ಕ್ಲಾಸ್, ಸಾಮಾನ್ಯ ದರ್ಜೆ ಬೋಗಿಗಳು, ಲಗೇಜ್ ಕಮ್ ಬ್ರೇಕ್ ವ್ಯಾನ್ ಬೋಗಿಗಳು ಒಳಗೊಂಡಿರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಗಪುರ ದೀಕ್ಷಾಭೂಮಿಗೆ ವಿಶೇಷ ರೈಲು

2026-27ನೇ ಸಾಲಿನಲ್ಲಿ ಅ. 20 (ವಿಜಯದಶಮಿ) ರಂದು ನಾಗಪುರ ದೀಕ್ಷಾಭೂಮಿಯಲ್ಲಿ ನಡೆಯುವ ಧಮ್ಮ ಪ್ರವರ್ತನ ದಿನ ಕಾರ್ಯಕ್ರಮಕ್ಕೆ ಪ್ರತಿ ವರ್ಷದಂತೆ ಈ ವರ್ಷವು ಬೀದರ್ ಜಿಲ್ಲೆಯಿಂದ ಮಹಾರಾಷ್ಟ್ರದ ನಾಗಾಪುರದಲ್ಲಿನ ದೀಕ್ಷಾ ಭೂಮಿಗೆ ಭೇಟಿ ನೀಡಲು ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ. ಬೀದರ್ ಜಿಲ್ಲೆಯಿಂದ ಮಹಾರಾಷ್ಟ್ರದ ನಾಗಪೂರದಲ್ಲಿನ ದೀಕ್ಷಾ ಭೂಮಿಗೆ ಪ್ರಯಾಣ ಬೆಳೆಸಲು ಡಾ. ಬಿ. ಆರ್. ಅಂಬೇಡ್ಕರ್ ಅವರ ಅನುಯಾಯಿಗಳಿಗೆ ಹೋಗಿ ಬರಲು ರೈಲ್ವೆಯ ವ್ವವಸ್ಥೆ ಕಲ್ಪಿಸಲಾಗಿದೆ, ಪ್ರಯಾಣ ಬೆಳೆಸುವವರು ರೈಲು ಸಂಖ್ಯೆ 07081 ಬೀದರ್‌ನಿಂದ ಅಜನಿಗೆ ಅ. 19ರಂದು ಸಂಜೆ 8.30ಗಂಟೆಗೆ ಹೊರಡಲಿದೆ. ರೈಲು ಸಂಖ್ಯೆ 07082 ರೈಲು ಅಜನಿಯಿಂದ ಬೀದರಿಗೆ ಅ.20ರಂದು ರಾತ್ರಿ 11.30 ಗಂಟೆಗೆ ಹೊರಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Read more Articles on
click me!

Recommended Stories

ಮೈಸೂರಲ್ಲಿ 3474 ಡ್ರೋನ್‌ ಬಳಸಿ ನವಿಲಿನ ವಿನ್ಯಾಸ, ದಸರಾ ಶೋ ಗಿನ್ನೆಸ್‌ ದಾಖಲೆ
ಪಾವಗಡದ 25 ಕೆರೆಗೆ ಮೇ ಅಂತ್ಯಕ್ಕೆ ಭದ್ರಾ ಮೇಲ್ದಂಡೆ ನೀರು: ಸಚಿವ ರಘುಮೂರ್ತಿ ಭರವಸೆ