ಸೌಜನ್ಯ ಕೇಸ್‌ ಮರುತನಿಖೆ: ಬ್ಯಾಗ್‌ ತುಂಬಾ 14 ವರ್ಷಗಳ ಹೋರಾಟದ ದಾಖಲೆ ತಂದ ಮಟ್ಟಣ್ಣವರ್‌

Kannadaprabha News   | Kannada Prabha
Published : Nov 24, 2026, 06:37 AM IST
Soujanya case re investigation Girish Mattannavar

ಸಾರಾಂಶ

ಸೌಜನ್ಯ ಅ೧ತ್ಯಾ೧ಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ನಡೆಸುತ್ತಿರುವ ಮಂಗಳೂರು ಎಸ್‌ಐಟಿ ಕಚೇರಿಗೆ ಹೋರಾಟಗಾರ ಗಿರೀಶ್‌ ಮಟ್ಟಣ್ಣವರ್‌ ಹಲವು ಪ್ರಮುಖ ದಾಖಲೆಗಳನ್ನು ಸಲ್ಲಿಸಿದ್ದಾರೆ. ನೋಟಿಸ್ ಹಿನ್ನೆಲೆಯಲ್ಲಿ ಈ ದಾಖಲೆ ನೀಡಲಾಗಿದ್ದು, ಎಸ್‌ಐಟಿ ತನಿಖೆಯ ಬಗ್ಗೆ ಸಂಪೂರ್ಣ ನಂಬಿಕೆಯಿದೆ ಎಂದು ಅವರು ತಿಳಿಸಿದ್ದಾರೆ.

ಮಂಗಳೂರು (ನ.24): ಸೌಜನ್ಯ ಅ೧ಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ನಡೆಸುತ್ತಿರುವ ಎಸ್‌ಐಟಿ ಕಚೇರಿಗೆ ಸೌಜನ್ಯ ಪರ ಹೋರಾಟಗಾರ ಗಿರೀಶ್‌ ಮಟ್ಟಣ್ಣವರ್‌(Girish Mattannavar) ಸೋಮವಾರ ಬ್ಯಾಗ್‌ ತುಂಬ ದಾಖಲೆಗಳನ್ನು ಮಂಗಳೂರು ಎಸ್‌ಐಟಿ ಕಚೇರಿ(Mangaluru SIT office)ಗೆ ಸಲ್ಲಿಸಿದರು.

ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿಗೆ ಎಸ್‌ಐಟಿ ನೋಟಿಸ್

ಮಟ್ಟಣ್ಣವರ್‌ಗೆ ದಾಖಲೆ ಸಲ್ಲಿಸುವಂತೆ ಎಸ್‌ಐಟಿ ನೋಟಿಸ್‌ ನೀಡಿತ್ತು. ಹೀಗಾಗಿ ಹಲವು ಕಡತ ಹಾಗೂ ಪತ್ರಿಕಾ ವರದಿಗಳನ್ನು ಗಿರೀಶ್ ಕಚೇರಿಗೆ ತಂದಿದ್ದಾರೆ. ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ(Mahesh shetty timarody)ಗೂ ಎಸ್‌ಐಟಿ ನೋಟಿಸ್‌ ನೀಡಿತ್ತು.

ಸೌಜನ್ಯ ಹೋರಾಟದ ವೇಳೆ ನೀಡಿರುವ ಹೇಳಿಕೆಗಳ ಆಧಾರದಲ್ಲಿ ನೊಟೀಸ್ ನೀಡಲಾಗಿತ್ತು, ಹಿಂದಿನ ತನಿಖೆ, ತನಿಖಾಧಿಕಾರಿಗಳು ಅಥವಾ ಪ್ರಕರಣದ ಕುರಿತು ಇವರು ಮಾಡಿರುವ ನಿರ್ದಿಷ್ಟ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುವ ಸಾಧ್ಯತೆ ಇದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇವರು ಸಾರ್ವಜನಿಕವಾಗಿ ವ್ಯಕ್ತಪಡಿಸಿರುವ ಕೆಲವು ಮಾಹಿತಿಗಳ ಮೂಲ ಪರಿಶೀಲನೆಯ ಸಾಧ್ಯತೆಯೂ ಇದೆ.

90 ದಿನ ಕಾಲಾವಕಾಶದಲ್ಲಿ ತನಿಖೆ ಮಾಡಲು ಸಾಧ್ಯವಿಲ್ಲ

ಮಾಧ್ಯಮದ ಜೊತೆ ಮಾತನಾಡಿದ ಮಟ್ಟಣ್ಣವರ್‌, 14 ವರ್ಷದಿಂದ ಸೌಜನ್ಯ ನ್ಯಾಯಕ್ಕಾಗಿ ಹೋರಾಟ ಮಾಡಿದ್ದೇವೆ. ನನ್ನ ಬಳಿ ಇದ್ದ ದಾಖಲೆಗಳನ್ನು ಹಾಗೂ ಸಂಪೂರ್ಣವಾಗಿ ವಿವರವನ್ನು ಅಧಿಕಾರಿಗಳಿಗೆ ನೀಡಿದ್ದೇನೆ. ತನಿಖಾಧಿಕಾರಿಗಳು ಸಣ್ಣ ಎಳೆಯನ್ನೂ ಬಿಡದೆ ತನಿಖೆ ಮಾಡುತ್ತಿದ್ದಾರೆ. ಎಸ್‌ಐಟಿ ತನಿಖೆ ಬಗ್ಗೆ ಸಂಪೂರ್ಣ ನಂಬಿಕೆಯಿದೆ ಎಂದರು.

90 ದಿನ ಕಾಲಾವಕಾಶದಲ್ಲಿ ತನಿಖೆ ಮಾಡಲು ಸಾಧ್ಯವಿಲ್ಲ, ಆದ್ದರಿಂದ ಹೆಚ್ಚುವರಿ ಸಮಯ ತೆಗೆದುಕೊಂಡರೂ ನಮ್ಮ ಆಕ್ಷೇಪ ಇಲ್ಲ ಎಂದು ಹೇಳಿ

PREV
Read more Articles on
click me!

Recommended Stories

ಅಮೆರಿಕದಲ್ಲಿ ವಿಶ್ವಮಟ್ಟದ ಸ್ಪರ್ಧೆಯಲ್ಲಿ ಶಿರಸಿ ವ್ಯಕ್ತಿಗೆ ₹9 ಕೋಟಿ ಬಹುಮಾನ!
ಮೇಕೆದಾಟು ಯೋಜನೆಯಲ್ಲಿ ಮಹತ್ವದ ಬೆಳವಣಿಗೆ: ಪರಿಸರ ಪರಿಣಾಮಗಳ ಅಧ್ಯಯನಕ್ಕೆ ಕೇಂದ್ರ ವನ್ಯಜೀವಿ ಮಂಡಳಿ ಒಪ್ಪಿಗೆ