ಕೋಲಾರದಲ್ಲಿ ಮತ್ತೆ ಐ ಫೋನ್ ಘಟಕ ಆರಂಭ : ಬಿಗಿ ಭದ್ರತೆ

By Kannadaprabha NewsFirst Published Dec 16, 2020, 7:06 AM IST
Highlights

ಕೋಲಾರದಲ್ಲಿ ಧ್ವಂಸವಾಗಿದ್ದ ಐ ಫೋನ್ ಬಿಡಿ ಭಾಗಗಳ ಘಟಕ ಮತ್ತೆ ಆರಮಭವಾಗುತ್ತಿದೆ. ಈ ನಿಟ್ಟಿನಲ್ಲಿ ಭಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. 

ಕೋಲಾರ (ಡಿ.16) : ನರಸಾಪುರ ಕೈಗಾರಿಕಾ ವಲಯದಲ್ಲಿರುವ ಐಫೋನ್‌ ಬಿಡಿಭಾಗ ತಯಾರಿಸುವ ವಿಸ್ಟ್ರಾನ್‌ ಕಂಪನಿ ಒಂದು ವಾರದಲ್ಲಿ ಉತ್ಪಾದನೆ ಕಾರ್ಯ ಆರಂಭಿಸಲು ಮುಂದಾಗಿದೆ. ಡಿ.12 ರಂದು ಕಾರ್ಮಿಕರು ನಡೆಸಿದ ದಾಂಧಲೆಯಿಂದ ವಿಸ್ಟ್ರಾನ್‌ ಕಂಪನಿಯಲ್ಲಿ ಅಪಾರ ಹಾನಿಯಾಗಿತ್ತು.

ಪುನಃ ಕಂಪನಿ ಆರಂಭವಾಗುತ್ತೋ ಇಲ್ವೋ ಎನ್ನುವ ಆತಂಕ ಸಾವಿರಾರು ಕಾರ್ಮಿರಲ್ಲಿತ್ತು. ಈ ಮಧ್ಯೆ ಮಂಗಳವಾರ ಆ್ಯಪಲ್‌ ಕಂಪನಿಯು ತಮ್ಮದೇ ಅಧಿಕಾರಿಗಳ ತಂಡವೊಂದನ್ನು ನರಸಾಪುರದ ವಿಸ್ಟ್ರಾನ್‌ ಕಂಪನಿಗೆ ಕಳಿಸಿದ್ದು ತನಿಖೆ ಆರಂಭಿಸಿದೆ. ತಂಡದಲ್ಲಿ 59 ಮಂದಿ ಇದ್ದು ಪೊಲೀಸ್‌ ಬಿಗಿ ಭದ್ರತೆಯಲ್ಲಿ ತನಿಖೆ ನಡೆಸಲಾಗುತ್ತಿದೆ. ಈ ನಡುವೆ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ ಮತ್ತೆ 10 ಮಂದಿ ಕಾರ್ಮಿಕರನ್ನು ಬಂಧಿಸಿದ್ದಾರೆ.

ಕೋಲಾರ ಐಫೋನ್‌ ಘಟಕ ಧ್ವಂಸ : 120 ಮಂದಿ ಜೈಲಿಗೆ ...

ಕಾರ್ಮಿಕರ ಆತಂಕ ನಿವಾರಣೆ:  ದಾಂಧಲೆಯಿಂದ .100 ಕೋಟಿಗೂ ಹೆಚ್ಚಿನ ಪ್ರಮಾಣದ ಹಾನಿಯಾದ ಹಿನ್ನೆಲೆಯಲ್ಲಿ ವಿಸ್ಟ್ರಾನ್‌ ಕಂಪನಿ ಮರು ಆರಂಭವಾಗುವ ಬಗ್ಗೆ ಅನುಮಾನಗಳು ಮೂಡಿದ್ದವು. ಆದರೆ, ಸೋಮವಾರದಿಂದಲೇ ಕರ್ತವ್ಯಕ್ಕೆ ಹಾಜರಾಗುವಂತೆ ಕಂಪನಿಯ ನೌಕರರಿಗೆ ಸಂದೇಶ ಕಳುಹಿಸಲಾಗಿತ್ತು. ಅದರಂತೆ ಕೆಲಸಕ್ಕೆ ನೌಕರರು ಹಾಜರಾಗಿದ್ದಾರೆ. ಮುಂದಿನ ಒಂದು ವಾರದೊಳಗೆ ಒಂದು ಲೈನ್‌ನಲ್ಲಿ ಐ-ಫೋನ್‌ ಬಿಡಿ ಭಾಗ ಉತ್ಪಾದನೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ ಮತ್ತೆ 10 ಮಂದಿ ಕಾರ್ಮಿಕರನ್ನು ಬಂಧಿಸಿದ್ದಾರೆ.

click me!