ಚಿಕ್ಕಬಳ್ಳಾಪುರ ಜಿಲ್ಲೆಗೆ ಸಚಿವ ಸುಧಾಕರ್ ಗುಡ್ ನ್ಯೂಸ್

By Kannadaprabha News  |  First Published Sep 1, 2021, 12:47 PM IST
  •  ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಮಾಡುವ ಪ್ರಸ್ತಾಪಕ್ಕೆ ಜೀವ ಬಂದಿದೆ
  • ಜಿಲ್ಲೆಗೆ ಇದು ನ್ಯಾಯಯುತವಾಗಿ ಸಿಗಬೇಕಿದ್ದು ಪ್ರತ್ಯೇಕ ಹಾಲು ಒಕ್ಕೂಟ ರಚನೆ ಶೀಘ್ರ ನೆರವೇರಲಿದೆ 
  • ಆರೋಗ್ಯ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ಮಾಹಿತಿ

 ಚಿಕ್ಕಬಳ್ಳಾಪುರ (ಸೆ.01): ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಮಾಡುವ ಪ್ರಸ್ತಾಪಕ್ಕೆ ಜೀವ ಬಂದಿದೆ. ಮುಖ್ಯಮಂತ್ರಿಗಳು ಇದಕ್ಕೆ ಮನಸ್ಸು ಮಾಡಿದ್ದಾರೆ. ಇದು ಜಿಲ್ಲೆಗೆ ಇದು ನ್ಯಾಯಯುತವಾಗಿ ಸಿಗಬೇಕಿದ್ದು ಪ್ರತ್ಯೇಕ ಹಾಲು ಒಕ್ಕೂಟ ರಚನೆ ಶೀಘ್ರ ನೆರವೇರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪ್ರತ್ಯೇಕ ಹಾಲು ಒಕ್ಕೂಟ ರಚನೆಗೆ ವಿರೋಧಿಸುತ್ತಿರುವ ಕೋಚಿಮುಲ್‌ ಅಧ್ಯಕ್ಷ ಹಾಗೂ ಮಾಲೂರು ಶಾಸಕ ನಂಜೇಗೌಡ ವಿರುದ್ಧ ಸುಧಾಕರ್‌ ಕಿಡಿಕಾರಿದರು.

Latest Videos

ಯಾರು ನಂಜೇಗೌಡ?

ಕೋಚಿಮುಲ್‌ ಪ್ರತ್ಯೇಕ ಮಾಡುವ ಸಂಬಂಧಿಸಿದಂತೆ ಪ್ರತ್ಯೇಕ ಮಾಡದಂತೆ ಕೋಚಿಮುಲ್‌ ಅಧ್ಯಕ್ಷ ನಂಜೇಗೌಡ ಸಿಎಂ ಬಳಿಗೆ ನಿಯೋಗ ತೆರಳುತ್ತಾರೆಂಬ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಗರಂ ಆದ ಸಚಿವ ಸುಧಾಕರ್‌, ಯಾರು ಎಲ್ಲಿಗೆ ಬೇಕಾದರೂ ಹೋಗಲು ಸ್ವತಂತ್ರರಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಚಿಮುಲ್‌ ಕೊಡಬಾರದು ಎಂದು ನಿಯೋಗ ಹೋಗುತ್ತಾರಾ. ಹೂ ಈಸ್‌ ಹಿ(ಯಾರವರು), ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಗೆ ಪ್ರತ್ಯೇಕ ಆಗಬೇಕು. ಯರ್ರೀ ಈ ನಂಜೇಗೌಡರು ಎಂದರು.

ಕೋವಿಡ್ 3 ನೇ ಅಲೆ ಭೀತಿ; ಮಕ್ಕಳಿಗಾಗಿ 'ಆರೋಗ್ಯ ನಂದನ' ಯೋಜನೆ ಜಾರಿ

 ಕೆಜಿಎಫ್‌ ಶಿಕ್ಷಣ ಸಂಸ್ಥೆ ವಿರುದ್ದ ಕ್ರಮ :  ಕೆಜಿಎಫ್‌ ನ ಶಿಕ್ಷಣ ಸಂಸ್ಥೆಯಲ್ಲಿ 32 ವಿದ್ಯಾರ್ಥಿಗಳಿಗೆ ಕೋವಿಡ್‌ ಸೋಂಕು ತಗುಲಿದೆ. ಈ ಎಲ್ಲ ವಿದ್ಯಾರ್ಥಿಗಳಿಗೆ ಕೇರಳದಿಂದ ಬಂದವರಾಗಿದ್ದಾರೆ. ನಾಳೆ ಸಂಸ್ಥೆಗೆ ಹೋಗಿ ಸಂಸ್ಥೆಯ ಮೇಲೂ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ಕೇರಳದಿಂದ ಬಂದಾಗಲೇ ಅವರ ನೆಗೆಟಿವ್‌ ವರದಿ ಪಡೆಯಬೇಕಿತ್ತು. ಇದು ಸಂಸ್ಥೆಯ ಜವಾಬ್ದಾರಿಯಾಗಿದ್ದು, ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದರು.

ಕೆಲವರು ತಮ್ಮ ವಿರುದ್ಧ ಟೀಕೆ, ಆರೋಪ ಮಾಡಿರುವುದನ್ನು ಗಮನಿಸಿದ್ದೇನೆ. ಅವುಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಮತ ನೀಡಿ ಸಚಿವನಾಗಲು ಕಾರಣರಾದ ಮತದಾರರ ಸೇವೆ ಮಾಡುವುದಷ್ಟೇ ತಮ್ಮ ಆಶಯ. ಬೆಂಗಳೂರಿಗೆ ಉಪನಗರವಾಗಿ ಚಿಕ್ಕಬಳ್ಳಾಪುರವನ್ನು ಅಭಿವೃದ್ಧಿ ಪಡಿಸುವುದು ತಮ್ಮ ಕನಸು. ಮುಂದಿನ ದಿನಗಳಲ್ಲಿ ಜಿಲ್ಲೆ ಮಾದರಿ ಜಿಲ್ಲೆಯಾಗಿ ಅಭಿವೃದ್ಧಿ ಹೊಂದಲಿದೆ.

ಡಾ.ಕೆ.ಸುಧಾಕರ್‌, ಆರೋಗ್ಯ ಸಚಿವ

click me!