ಸಚಿವ ಚವ್ಹಾಣ ಶೂ ಕೈಯಲ್ಲಿ ತಂದುಕೊಟ್ಟ ಕಾರ್ಯಕರ್ತ: ವ್ಯಾಪಕ ಟೀಕೆ

Kannadaprabha News   | Asianet News
Published : Sep 01, 2021, 12:19 PM ISTUpdated : Sep 01, 2021, 12:41 PM IST
ಸಚಿವ ಚವ್ಹಾಣ ಶೂ ಕೈಯಲ್ಲಿ ತಂದುಕೊಟ್ಟ ಕಾರ್ಯಕರ್ತ: ವ್ಯಾಪಕ ಟೀಕೆ

ಸಾರಾಂಶ

*   ಕೊಪ್ಪಳ ಪ್ರವಾಸ ವೇಳೆ ನಡೆದ ಘಟನೆ *  ಶೂಗಳನ್ನು ಕೈಯಲ್ಲಿ ಹಿಡಿದುಕೊಂಡು ಬಂದು ಸಚಿವರಿಗೆ ಕೊಟ್ಟ ಪ್ರಭು ಎನ್ನುವ ಕಾರ್ಯಕರ್ತ  *  ಇದ್ಯಾವುದನ್ನು ಅಸಹ್ಯ ಎಂದು ಪರಿಗಣಿಸದ  ಸಚಿವರು

ಕೊಪ್ಪಳ(ಸೆ.01): ಪಶುಸಂಗೋಪನಾ ಇಲಾಖೆಯ ಸಚಿವ ಪ್ರಭು ಚವ್ಹಾಣ ಅವರ ಶೂಗಳನ್ನು ಕಾರ್ಯಕರ್ತನೋರ್ವ ಕೈಯಲ್ಲಿ ತಂದು ಕೊಟ್ಟಿದ್ದಲ್ಲದೇ ಅವರು ಹಾಕಿಕೊಳ್ಳಲು ಸಹಾಯ ಮಾಡಿದ ಘಟನೆ ಕೊಪ್ಪಳ ತಾಲೂಕಿನ ಬಹದ್ದೂರುಬಂಡಿಯಲ್ಲಿ ನಡೆದಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.

ಬಹದ್ದೂರುಬಂಡಿ ಬಳಿ ಇರುವ ಬಂಜಾರ ಸಮಾಜದ ಗುರು ಹಾಥಿರಾಮ ಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆಯಲ್ಲಿ ಹೋಮ ಹವನ ಮಾಡಲಾಯಿತು. ಈ ವೇಳೆಯಲ್ಲಿ ಸಚಿವರು ತಮ್ಮ ಶೂಗಳನ್ನು ದೂರ ಬಿಟ್ಟಿದ್ದರು.

ಸಾವಿರ ಕೋಟಿ ವೆಚ್ಚ​ದಲ್ಲಿ ಪಶುಲೋಕ: ಸಚಿವ ಚವ್ಹಾಣ

ಪೂಜಾ ಕೈಂಕರ್ಯಗಳನ್ನು ಮುಗಿಸಿ ತೆರಳುವಾಗ ಸಚಿವರು ತಮ್ಮ ಶೂಗಳಿಗಾಗಿ ಹುಡುಕಾಟ ಮಾಡುತ್ತಿದ್ದರು. ಈ ವೇಳೆಯಲ್ಲಿ ಪ್ರಭು ಎನ್ನುವ ಕಾರ್ಯಕರ್ತ ಅವುಗಳನ್ನು ಕೈಯಲ್ಲಿ ಹಿಡಿದುಕೊಂಡು ಬಂದು, ಸಚಿವರು ಇದ್ದಲ್ಲಿಗೆ ಕೊಟ್ಟಿದ್ದು ಅಲ್ಲದೆ ಹಾಕಿಕೊಳ್ಳಲು ಸಹಾಯ ಮಾಡಿದರು. ಇದ್ಯಾವುದನ್ನು ಸಚಿವರು ಅಸಹ್ಯ ಎಂದು ಪರಿಗಣಿಸಲೇ ಇಲ್ಲ. ಸಹಜ ಎನ್ನುವಂತೆಯೇ ಇದ್ದರೇ ವಿನಃ ಯಾಕೆ ತಂದಿರಿ ಎಂದೂ ಸಹ ಹೇಳಲಿಲ್ಲ.
 

PREV
click me!

Recommended Stories

ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ
ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್