ಸಚಿವರು ಸುಧಾಕರ್ ಹೊಸ ಬಾಂಬ್ ಸಿಡಿಸಿದ್ದಾರೆ. ವಿಪಕ್ಷ ಮುಖಂಡರ ಪಕ್ಷ ಸೇರ್ಪಡೆಗೆ ಮುಹೂರ್ತವನ್ನು ಫಿಕ್ಸ್ ಮಾಡಿದ್ದಾರೆ
ಶಿಡ್ಲಘಟ್ಟ (ಅ.29): ರಾಜ್ಯ ವಿಧಾನ ಸಭೆಯ ಎರಡೂ ಉಪಚುನಾವಣ ಫಲಿತಾಂಶಗಳ ನಂತರ ರಾಜ್ಯದ ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳು ಆಗಲಿದೆ ಎಂದು ರಾಜ್ಯ ಆರೋಗ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸುಧಾಕರ್ ತಿಳಿಸಿದರು
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಗಾಗಲೇ ಆರ್‌ಆರ್ ನಗರ ವಿಧಾನ ಸಭಾ ಕ್ಷೇತ್ರದ ಫಲಿತಾಂಶಗಳು ನಿಚ್ಚಳವಾಗಿದ್ದು ಚುನಾವಣಾ ಫಲಿತಾಂಶಕ್ಕೂ ಮುಂಚೆಯೇ ವಿರೋಧಿ ಮುಖಂಡರು ಶಸ್ತ್ರ ತ್ಯಾಗ ಮಾಡಿದ್ದಾರೆ, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆಗೆ ಹೆಚ್ಚು ಗಮನ ನೀಡಲಿದ್ದು ನವೆಂಬರ್ 3 ರ ನಂತರ ಬಿಜೆಪಿ ಪಕ್ಷಕ್ಕೆ ಸೇರ್ಪಯಾಗುವರ ದಂಡೇ ಹರಿದು ಬರಲಿದ್ದು ಎಂದರು.
ಶಿರಾ ಬೈ ಎಲೆಕ್ಷನ್: ಕೇಸರಿ ಮತಬೇಟೆ, ಟಗರು ಕ್ಯಾಂಪೇನ್, ದಳಪತಿ ಪ್ರಚಾರ
ಮುಂಬರುವ ದಿನಗಳಲ್ಲಿ ಅದರಲ್ಲೂ ಹಳೇ ಮೈಸೂರು ಭಾಗಗಳಲ್ಲಿ ಪಕ್ಷದ ಸಂಘಟನೆಗೆ ಹೆಚ್ಚು ಗಮನ ಹರಿಸಲಾಗವುದೆಂದರು, ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅವಕಾಶ ದೊರೆತಲ್ಲಿ ನಗರಸಭೆಯಲ್ಲಿ ಬಿಜೆಪಿ ದ್ವಜ ಹಾರಲಿದೆ ಎಂದರು.