ಚುನಾವಣೆಯಲ್ಲಿ ಗೋವಿಂದ ಕಾರಜೋಳ ಅವರ ಪುತ್ರ ಸೋತಿದ್ದರಿಂದ ನನ್ನ ವಿರುದ್ಧ ಸೇಡಿನ ರಾಜಕಾರಣ, ಅಭಿವೃದ್ಧಿಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ದೂರಿದ ನಾಗಠಾಣ ಶಾಸಕ ದೇವಾನಂದ ಚವ್ಹಾಣ| ಹಿಂದೆ ಕೊಟ್ಟ ಅನುದಾನವನ್ನು ಬಿಜೆಪಿ ತಡೆಹಿಡಿದಿದೆ|
ವಿಜಯಪುರ(ಅ.29): ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ನಾಗಠಾಣ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗೆ ಅಡಚಣೆ ಮಾಡಿ, ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ನಾಗಠಾಣ ಶಾಸಕ ದೇವಾನಂದ ಚವ್ಹಾಣ ಆರೋಪಿಸಿದ್ದಾರೆ.
ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ದಲಿತ ಸಮುದಾಯದ ಗೋವಿಂದ ಕಾರಜೋಳ ಅವರು ಡಿಸಿಎಂ ಆಗಿರುವುದು ಖುಷಿ. ಆದರೆ, ಚುನಾವಣೆಯಲ್ಲಿ ಅವರ ಪುತ್ರ ಸೋತಿದ್ದರಿಂದ ನನ್ನ ವಿರುದ್ಧ ಸೇಡಿನ ರಾಜಕಾರಣ, ಅಭಿವೃದ್ಧಿಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
undefined
ವಿಜಯಪುರ: ಹೆತ್ತವರ ಮುಂದೆಯೇ ಸೇತುವೆ ಮೇಲಿಂದ ನದಿಗೆ ಹಾರಿ ಪ್ರಾಣಬಿಟ್ಟ ಯುವತಿ
ಕೊರೋನಾ ಹಾಗೂ ಪ್ರವಾಹ ಕ್ಷೇತ್ರಕ್ಕೆ ಬಹಳ ಹಾನಿ ಮಾಡಿದ್ದು, ರಾಜ್ಯದಲ್ಲಿ ನಾಗಠಾಣ ಕ್ಷೇತ್ರದ್ದೇ ಅತಿ ಹೆಚ್ಚು ಹಾನಿಯಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ನಾಗಠಾಣ ಕ್ಷೇತ್ರದ ಅಭಿವೃದ್ಧಿಯ ಕೆಲಸ ಸಾಕಷ್ಟು ಆಗಿದ್ದವು. ಹಿಂದೆ ಕೊಟ್ಟ ಅನುದಾನವನ್ನು ಬಿಜೆಪಿ ತಡೆಹಿಡಿದಿದೆ ಎಂದು ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.