ಶೀಘ್ರ ಮುಂದಿನ ರಾಜಕೀಯ ನಡೆ ಪ್ರಕಟಿಸುವೆ ಎಂದ್ರು ಕೈ ಮುಖಂಡ

Kannadaprabha News   | Asianet News
Published : Aug 21, 2020, 10:43 AM IST
ಶೀಘ್ರ ಮುಂದಿನ ರಾಜಕೀಯ ನಡೆ ಪ್ರಕಟಿಸುವೆ ಎಂದ್ರು ಕೈ ಮುಖಂಡ

ಸಾರಾಂಶ

ಈಗಾಗಲೇ ರಾಜ್ಯದಲ್ಲಿ ಕೆಲ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿದೆ. ಇದೇ ಸಂದರ್ಭದಲ್ಲಿ ಕೈ ಮುಖಂಡರೋರ್ವರು ಶೀಘ್ರ ತಮ್ಮ ಮುಂದಿನ ನಡೆ ಪ್ರಕಟಿಸುವುದಾಗಿ ಹೇಳಿದ್ದಾರೆ.

ಮಧುಗಿರಿ (ಆ.21):  ರಾಜಕೀಯದಲ್ಲಿ ಯಾರು ಸನ್ಯಾಸಿಗಳಲ್ಲ. ಎಲ್ಲರಿಗೂ ಆಸೆ ಆಕಾಂಕ್ಷೆಗಳು ಇರುತ್ತವೆ. ಆ.27 ರಂದು ಮಾಜಿ ಶಾಸಕ ದಿ.ಬಿ. ಸತ್ಯನಾರಾಯಣ ಅವರ ಪುಣ್ಯತಿಥಿ ಇದ್ದು, ಅದು ಮುಗಿದ ಬಳಿಕ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಬಗ್ಗೆ ರಾಜಕೀಯ ಚಟುವಟಿಕೆಗಳು ಗರಿಗೆದರಲಿವೆ ಎಂದು ಮಾಜಿ ಶಾಸಕ ಕೆ.ಎನ್‌.ರಾಜಣ್ಣ ತಿಳಿಸಿದ್ದಾರೆ.

ಬಿಜೆಪಿ ಸೇರೋದು ಖಚಿತ ಎಂದ್ರು ಜೆಡಿಎಸ್ ಮಾಜಿ ಶಾಸಕ...

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ.27ಕ್ಕೆ ಬಿ.ಸತ್ಯನಾರಾಯಣ ಅವರ ತಿಥಿ ಮುಗಿದ ಬಳಿಕ ಶಿರಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ನಡೆಯಲಿವೆ. ಅಲ್ಲಿರುವ ನಮ್ಮ ಪಕ್ಷದ ಸ್ನೇಹಿತರ ಅಭಿಪ್ರಾಯ ಕ್ರೋಢೀಕರಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಶಿರಾ ಕ್ಷೇತ್ರಕ್ಕೆ ಬೈ ಎಲೆಕ್ಷನ್‌ ನಡೆಯುವ ನಿರೀಕ್ಷೆಯಿದೆ. ಇದರ ಬಗ್ಗೆ ಈಗ ಹೆಚ್ಚು ಮಾತನಾಡದೇ ಅವರ ತಿಥಿ ಮುಗಿದ ನಂತರ ಮುಂದಿನ ನಡೆ ಬಗ್ಗೆ ಪ್ರಕಟಿಸುವುದಾಗಿ ಸ್ಪಷ್ಟಪಡಿಸಿದರು.

ರಂಗೇರಿದ ತುಮಕೂರು ರಾಜಕಾರಣ: ಸಂಚಲನ ಮೂಡಿಸಿದ ರಾಜಣ್ಣ ನಡೆ...

ನಮ್ಮ ತಾಲೂಕಲ್ಲೂ ಕೂಡ ಸರ್ಕಾದ ಕಾರ್ಯಕ್ರಮಗಳು ಜನರ ನಿರೀಕ್ಷೆಗೆ ಅನುಗುಣವಾಗಿ ನಡೆದಿಲ್ಲ. ಮತ್ತೆ ಮುಂದಿನ ದಿನಗಳಲ್ಲಿ ನಾನು ಗೆದ್ದರೆ ತಾಲೂಕಿನ 54 ಕೆರೆಗಳಿಗೆ ಎತ್ತಿನಹೊಳೆ ನೀರು ತುಂಬಿಸುವುದು. ಏಕಶಿಲಾ ಬೆಟ್ಟಕ್ಕೆ ರೋಪ್‌ವೇ ಅಳವಡಿಸಿ ಪ್ರವಾಸೋದ್ಯಮ ತಾಣ ಮಾಡುವುದು. ನಿರುದ್ಯೋಗಿ ಯುವ ಜನಾಂಗಕ್ಕೆ ಸ್ಥಳೀಯವಾಗಿ ಗಾರ್ಮೆಂಟ್ಸ್‌ ಮಾಡಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಮಳವಳ್ಳಿ -ಪಾವಗಡ ಕೆಶಿಪ್‌ ರಸ್ತೆಗೆ ಅಳವಡಿಸಿರುವ ಟೋಲ್‌ ಅವೈಜ್ಞಾನಿಕ, ಇದನ್ನು ಸವೀರ್‍ಸ್‌ ರಸ್ತೆ ಮಾಡಿ ಟೋಲ್‌ ಅಳವಡಿಸಲಿ ನಮ್ಮ ಅಭ್ಯಂತರವಿಲ್ಲ. ಆದರೂ ಈ ತಾಲೂಕುಗಳು ಅತ್ಯಂತ ಹಿಂದುಳಿದ ಪ್ರದೇಶವಾದ್ದರಿಂದ ನಾನು ಮತ್ತೆ ಗೆದ್ದರೆ ಟೋಲ್‌ ರದ್ದು ಪಡಿಸುವುದಾಗಿ ತಿಳಿಸಿದರು.

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು