ಶೀಘ್ರವೇ ರಾಜ್ಯ ಈ ಜಿಲ್ಲೆಗೆ ಬರಲಿದೆ ಕೊರೋನಾ ಲಸಿಕೆ

By Kannadaprabha NewsFirst Published Nov 4, 2020, 2:27 PM IST
Highlights

ಶೀಘ್ರವೇ ರಾಜ್ಯದ ಈ ಜಿಲ್ಲೆಗೆ ಮಹಾಮಾರಿ ಕೊರೋನಾ ಲಸಿಕೆ ಬರಲಿದೆ. ಈ ಬಗ್ಗೆ ಈಗಾಗಲೇ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. 

ಹಾಸನ (ನ.04):  ಕೊರೋನಾ ಲಸಿಕೆ ಶೀಘ್ರದಲ್ಲೇ ಬರಲಿದ್ದು, ಅದನ್ನು ಜಿಲ್ಲೆಗೆ ತರಲು ಹಾಗೂ ಶೇಖರಿಸಲು ಎಲ್ಲ ಅಗತ್ಯ ಕ್ರಮಗಳನ್ನು ವಹಿಸಿ ಎಂದು ಜಿಲ್ಲಾಧಿ​ಕಾರಿ ಆರ್‌. ಗಿರೀಶ್‌ ಅವರು ಅ​ಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾ​ಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆರೋಗ್ಯ ಇಲಾಖೆಯ ಅ​ಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಲಸಿಕೆ ಶೇಖರಣೆಗೆ ಸೂಕ್ತರೀತಿಯಲ್ಲಿ ಕೊಠಡಿ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರಲ್ಲದೆ, ಕೇಂದ್ರ ಸರ್ಕಾರದ ಆದೇಶದಂತೆ ಮೊದಲನೇ ಹಂತದಲ್ಲಿ ಇದನ್ನು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಗಳಿಗೆ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಕೊರೋನ ಸೋಂಕು ಪ್ರಕರಣಗಳನ್ನು ಕಡಿಮೆ ಮಾಡಲು ಇನ್ನೂ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ವಿಟಮಿನ್‌ ಮಾತ್ರೆಗಳ ವಿತರಣೆ ಸೇರಿದಂತೆ, ಹಾಸನಾಂಬ ದೇವಿಯ ಉತ್ಸವಕ್ಕೆ ಅಳವಡಿಸಲಾಗುತ್ತಿರುವ ಲೈಟಿಂಗ್‌ ವ್ಯವಸ್ಥೆಯಲ್ಲಿ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಕೊರೋನ ಪರೀಕ್ಷೆ ಮಾಡಿಸಿಕೊಳ್ಳುವಂತೆ ಜಾಗೃತಿ ಹಾಗೂ ಪ್ರೇರಣೆ ಮಾಡುವಂತೆ ಜಿಲ್ಲಾ​ಕಾರಿ ತಿಳಿಸಿದರು.

ಮಹಾಮಾರಿಗೆ ಸಿಕ್ತು ಬ್ರಹ್ಮಾಸ್ತ್ರ : ಈ ಲಸಿಕೆಯಿಂದ ತಡೆಯಬಹುದು ಕೊರೋನಾ .

ಸರ್ಕಾರಿ ನೌಕರರು ಹೆಚ್ಚಾಗಿ ಸಾರ್ವಜನಿಕರ ಸಂಪರ್ಕಕ್ಕೆ ಬರುವುದರಿಂದ ತಿಂಗಳಿಗೆ ಎರಡು ಬಾರಿ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವಂತೆ ಆದೇಶಿಸಿದರಲ್ಲದೆ, ನಗರದ ಕೃಷಿ ಮಾರುಕಟ್ಟೆಯ ವರ್ತಕರು 15 ದಿನಕ್ಕೊಮ್ಮೆ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್‌.ಸಿ.ಹೆಚ್‌ ಅ​ಕಾರಿ ಹಾಗೂ ಕೋವಿಡ್‌ ವ್ಯಾಕ್ಸಿನ್‌ ಜಿಲ್ಲಾ ನೋಡಲ್‌ ಅ​ಕಾರಿಗಳಾದ ಕಾಂತರಾಜು ಅವರು ಮಾತನಾಡಿ ಜಿಲ್ಲೆಯಲ್ಲಿ ಪೋಲಿಯೋ ಸೇರಿದಂತೆ ಇತರೆ ವ್ಯಾಕ್ಸಿನೇಷನ್‌ಗಳ ವರದಿ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಆಯಾ ತಾಲ್ಲೂಕಿನ ತಾಲ್ಲೂಕು ಆರೋಗ್ಯ ಅ​ಕಾರಿಗಳು ಈ ಬಗ್ಗೆ ಹೆಚ್ಚು ಗಮನಹರಿಸಿ ಚುಚ್ಚು ಮದ್ದು ಕುರಿತಾಗಿ ಸೂಕ್ತ ವರದಿ ನೀಡಲು ಆದೇಶಿಸುವಂತೆ ಜಿಲ್ಲಾ​ಕಾರಿಯವರಲ್ಲಿ ಮನವಿ ಮಾಡಿದರು.

click me!