ಕಲಬುರಗಿ: ಬೈಕ್‌ಗಳ ಮುಖಾಮುಖಿ ಡಿಕ್ಕಿ, ನಾಲ್ಕು ಜನರ ದುರ್ಮರಣ

By Kannadaprabha News  |  First Published Nov 4, 2020, 2:19 PM IST

ಎರಡು ಬೈಕ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿ|  ಕಲಬುರಗಿ ಜಿಲ್ಲೆಯ ನಾಲವಾರ ಸಮೀಪದ ಲಾಡ್ಲಾಪುರ ಗ್ರಾಮದ ಬಳಿ ನಡೆದ ಘಟನೆ| ಹೆದ್ದಾರಿಯಲ್ಲಿ ಎರಡೂ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್‌ ಜಾಮ್‌| 


ಶಹಾಬಾದ (ಕಲಬುರಗಿ)(ನ.04): ನಾಲವಾರ ಸಮೀಪದ ಲಾಡ್ಲಾಪುರ ಗ್ರಾಮದ ಬಳಿಯ ರಾಷ್ಟೀಯ ಹೆದ್ದಾರಿ ಸಂಖ್ಯೆ 150 ರಲ್ಲಿ ಎರಡು ಬೈಕುಗಳು ಸಂಜೆ 7 ಗಂಟೆಗೆ ಸುಮಾರಿಗೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಮೂರು ಜನ ಮೃತ ಪಟ್ಟಿದ್ದು, ಓರ್ವ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. 

ಇಬ್ಬರಿಗೆ ತೀವ್ರ ಗಾಯವಾಗಿದೆ. ಎರಡು ಬೈಕ್‌ ಮೇಲೆ ಮೂರು ಜನ ಸವಾರರು ಇದ್ದು, ವೇಗವಾಗಿ ಬೈಕ ಓಡಿಸುತ್ತಿದ್ದಾಗ ಪರಿಣಾಮ ಲಾಡ್ಲಾಪುರ ಗ್ರಾಮದ ಬಸಣ್ಣ (32), ಅಲ್ಲೂರ ಗ್ರಾಮದ ದೇವೆಂದ್ರ(50), ಮಲ್ಲಪ್ಪ ರಾಯಪ್ಪ(35) ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. 

Tap to resize

Latest Videos

ಕೋವಿಡ್‌ನಿಂದ ಶಾಲೆ ಬಂದ್: ಕೂಲಿ ಕೆಲಸಕ್ಕೆ ಹೊರಟ ಮಕ್ಕಳು, ಬಾಲ್ಯ ವಿವಾಹ ಹೆಚ್ಚಳ

ಲಾಡ್ಲಾಪುರ ಗ್ರಾಮದ ಮರೆಪ್ಪ (50) ತೀವ್ರ ಗಾಯಗೊಂಡಿದ್ದರಿಂದ ವಾಡಿ ಆಸ್ಪತ್ರೆಗೆ ಚಿಕಿತ್ಸೆಗೆ ತೆಗೆದುಕೊಂಡು ಹೋದಾಗ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾನೆ. ಹಣಮಂತ ಲಾಡ್ಲಾಪುರ, ಕಾಶೀನಾಥ ಅಲ್ಲೂರ ಅವರು ತೀವ್ರ ಗಾಯಗೊಂಡಿದ್ದು, ಅವರನ್ನು ವಾಡಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಕಲಬುರಗಿಗೆ ಸಾಗಿಸಲಾಗಿದೆ. ಬೈಕ್‌ ಮುಖಾಮುಖಿ ಡಿಕ್ಕಿಯಾಗಿ ಸಾವು ಸಂಭವಿಸಿದ್ದರಿಂದ ಸಂಜೆ ಹೆದ್ದಾರಿಯಲ್ಲಿ ಹೆಚ್ಚಿನ ವಾಹನ ಸಂಚಾರ ಇರುವದರಿಂದ ಟ್ರಾಫಿಕ್‌ ಜಾಮ್‌ ಉಂಟಾಗಿ ಸುಮಾರು ಎರಡು ಗಂಟೆಕಾಲ ಪೋಲಿಸರು, ಲಾಡ್ಲಾಪುರ ಗ್ರಾಮಸ್ಥರು ಟ್ರಾಫಿಕ್‌ ತೆರವುಗೊಳಿಸುವಲ್ಲಿ ಶ್ರಮಿಸಬೇಕಾಯಿತು.

ಘಟನಾ ಸ್ಥಳಕ್ಕೆ ವಾಡಿ ಪಿಎಸ್‌ಐ ವಿಜಯಕುಮಾರ ಬಾವಗಿ ಸಿಬ್ಬಂದಿಯೊಂದಿಗೆ ಧಾವಿಸಿ, ಗ್ರಾಪಂ. ಮಾಜಿ ಅಧ್ಯಕ್ಷ ಸಾಬಣ್ಣ ಆನೇಮಿ, ಲಾಡ್ಲಾಪುರ ಗ್ರಾಮಸ್ಥರ ಸಹಕಾರದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದು, ಟ್ರಾಫಿಕ್‌ ತೆರವುಗೊಳಿಸಿದ್ದಾರೆ. 
 

click me!