ನಗರದಲ್ಲಿ ಶೀಘ್ರ ಕಾವೇರಿ ನೀರಿನ ದರ ಏರಿಕೆ

Kannadaprabha News   | Asianet News
Published : Feb 08, 2020, 08:06 AM IST
ನಗರದಲ್ಲಿ ಶೀಘ್ರ  ಕಾವೇರಿ ನೀರಿನ ದರ ಏರಿಕೆ

ಸಾರಾಂಶ

ಕಳೆದ ಆರು ವರ್ಷಗಳಿಂದ ನೀರಿನ ದರ ಪರಿಷ್ಕರಣೆಯಾಗಿಲ್ಲ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಶೀಘ್ರ ನೀರಿನ ದರ ಏರಿಕೆಯಾಗುವ ಸಾಧ್ಯತೆ ಇದೆ.

ಬೆಂಗಳೂರು [ಫೆ.08]:  ಬೆಂಗಳೂರು ಜಲಮಂಡಳಿಯು ಇದೀಗ ಕಾವೇರಿ ನೀರಿನ ದರ ಏರಿಕೆ ಸಂಬಂಧ ಸಿದ್ಧಪಡಿಸಿರುವ ಮೂರು ಪ್ರಸ್ತಾವನೆಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಮೂರು ಪ್ರಸ್ತಾವನೆ ಪೈಕಿ ಒಂದಕ್ಕೆ ಶೀಘ್ರದಲ್ಲೇ ಅನುಮೋದನೆ ನೀಡುವ ಸಾಧ್ಯತೆಯಿದೆ.

ಈ ಹಿಂದೆ ಮಂಡಳಿಯಲ್ಲಿ ನೀರಿನ ದರ ಏರಿಕೆ ಸಂಬಂಧ ಒಂದು ಪ್ರಸ್ತಾವನೆ ಸಿದ್ಧಪಡಿಸಿದ್ದು, ಈಗಿನ ದರಕ್ಕಿಂತ ಶೇ.10 ರಿಂದ 20ರಷ್ಟುದರ ಏರಿಸಲು ಉ​ದ್ದೇ​ಶಿ​ಸಿತ್ತು. ಆ​ದರೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ದರ ಪರಿಷ್ಕರಿಸಬೇಕು ಎನ್ನುವ ಕಾರಣಕ್ಕೆ ಮಂಡಳಿ ಸಭೆಯಲ್ಲಿ ಈ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿರಲಿಲ್ಲ. ನಂತರ ಮತ್ತೆ ಪ್ರಸ್ತಾವ ಸಿದ್ಧಪಡಿಸಲು ಸೂಚಿಸಲಾಗಿತ್ತು. ಹೀಗಾಗಿ ಅಧಿಕಾರಿಗಳು ಮೂರು ಬಗೆಯ ಪ್ರಸ್ತಾವಗಳನ್ನು ಸಿದ್ಧಪಡಿಸಿದ್ದರು. ಇದೀಗ ಆ ಮೂರು ಪ್ರಸ್ತಾವನೆಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈ ಮೂರರ ಪೈಕಿ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗುವ ಒಂದು ಪ್ರಸ್ತಾವಕ್ಕೆ ಸರ್ಕಾರ ಅನುಮೋದನೆ ನೀಡುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ಜಲಮಂಡಳಿಯು ವಿವಿಧ ಯೋಜನೆಗಳಿಗಾಗಿ ಮಾ​ಡಿ​ರು​ವ ಎಲ್ಲ ಬಗೆಯ ಸಾಲ ತೀರಿಸುವ ಹಾಗೂ ನಿರ್ವಹಣಾ ವೆಚ್ಚ ಭರಿಸುವ ದರ ಪರಿಷ್ಕರಣೆಯನ್ನು ಮೊದಲ ಪ್ರಸ್ತಾವ ಒಳಗೊಂಡಿದೆ. ಹಣಕಾಸು ಸಂಸ್ಥೆಗಳಿಂದ ಮಾತ್ರ ಪಡೆದ ಸಾಲಗಳನ್ನು ತೀರಿಸುವ ದರ ಪರಿಷ್ಕರಣೆಯನ್ನು ಎರಡನೇ ಪ್ರಸ್ತಾವ ಒಳಗೊಂಡಿದೆ. ಮೂರನೇ ಪ್ರಸ್ತಾವವು ನಿರ್ವಹಣಾ ವೆಚ್ಚವನ್ನು ಮಾತ್ರ ಭರಿಸುವ ದರ ಪರಿಷ್ಕರಣೆ ಹೊಂದಿದೆ. ಈ ಮೂರರ ಪೈಕಿ ಯಾವುದೇ ಪ್ರಸ್ತಾವನೆಗೆ ಅನುಮೋದನೆ ನೀಡಿದರೂ ಸಾರ್ವಜನಿಕರಿಗೆ ದರ ಏರಿಕೆ ಬಿಸಿ ತಟ್ಟಲಿದೆ.

ಈ ಬಾರಿ ಬೆಂಗಳೂರಿಗೆ ಇಲ್ಲ ನೀರಿನ ಸಮಸ್ಯೆ...

ದರ ಏರಿಕೆ ಅನಿವಾರ್ಯ :  ಕಳೆದ ಆರು ವರ್ಷಗಳಿಂದ ನೀರಿನ ದರ ಪರಿಷ್ಕರಣೆಯಾಗಿಲ್ಲ. ಈ ಅವಧಿಯಲ್ಲಿ ಹಲವು ಬಾರಿ ವಿದ್ಯುತ್‌ ದರ ಏರಿಕೆಯಾಗಿದೆ. ನೌಕರರ ವೇತನ, ಭತ್ಯೆಗಳು, ನಿರ್ವಹಣೆ ವೆಚ್ಚಗಳು ಹೆಚ್ಚಳವಾಗಿವೆ. ಜಲಮಂಡಳಿಯು ಪ್ರತಿ ತಿಂಗಳು ಸುಮಾರು .100 ಕೋಟಿ ನೀರಿನ ಶುಲ್ಕ ಸಂಗ್ರಹ ಮಾಡಿದರೆ, ಈ ಪೈಕಿ ಶೇ.60 ರಷ್ಟುವಿದ್ಯುತ್‌ ಶುಲ್ಕಕ್ಕೆ ಹೋಗುತ್ತದೆ. ಉಳಿದ ಶೇ.40ರಷ್ಟರಲ್ಲಿ ನೌಕರರ ವೇತನ, ನಿರ್ವಹಣೆಗೆ ಸರಿದೂಗುತ್ತಿದೆ. ಅಲ್ಲದೆ, ಜಲಮಂಡಳಿಯು ವಿವಿಧ ಯೋಜನೆಗಳನ್ನು ರೂಪಿಸಿದ್ದು, ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿದೆ. ಈ ಎಲ್ಲ ಕಾರಣಗಳಿಂದ ನೀರಿನ ದರ ಏರಿಕೆ ಅನಿವಾರ್ಯವಾಗಿದೆ ಎಂದು ಜಲಮಂಡಳಿ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

PREV
click me!

Recommended Stories

ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!
ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!