BBMPಗೆ ಮತ್ತಷ್ಟುಕಗ್ಗಂಟಾದ ವಾಲಿದ ಕಟ್ಟಡ ತೆರವು ಕಾರ್ಯ!

Kannadaprabha News   | Asianet News
Published : Feb 08, 2020, 07:54 AM IST
BBMPಗೆ ಮತ್ತಷ್ಟುಕಗ್ಗಂಟಾದ ವಾಲಿದ ಕಟ್ಟಡ ತೆರವು ಕಾರ್ಯ!

ಸಾರಾಂಶ

ಹೆಬ್ಬಾಳ ವ್ಯಾಪ್ತಿಯ ಕೆಂಪಾಪುರದ ಜಿ.ರಾಮಯ್ಯಲೇಔಟ್‌ನಲ್ಲಿ ವಾಲಿರುವ ಐದು ಅಂತಸ್ತಿನ ಕಟ್ಟಡ ತೆರವು ಕಾರ್ಯ ಬಿಬಿಎಂಪಿಗೆ ಕಷ್ಟದಾಯಕವಾಗಿ ಪರಿಣಮಿಸಿದೆ. ಸುರಕ್ಷಿತವಾಗಿ ಈ ಕಟ್ಟಡ ನೆಲಸಮ ಮಾಡಲು ಪಕ್ಕದಲ್ಲಿದ್ದ ಸಣ್ಣ ಕಟ್ಟಡವೊಂದನ್ನು ಶುಕ್ರವಾರ ನೆಲಸಮ ಮಾಡಲಾಗಿದೆ.

ಬೆಂಗಳೂರು(ಫೆ.08): ಹೆಬ್ಬಾಳ ವ್ಯಾಪ್ತಿಯ ಕೆಂಪಾಪುರದ ಜಿ.ರಾಮಯ್ಯಲೇಔಟ್‌ನಲ್ಲಿ ವಾಲಿರುವ ಐದು ಅಂತಸ್ತಿನ ಕಟ್ಟಡ ತೆರವು ಕಾರ್ಯ ಬಿಬಿಎಂಪಿಗೆ ಕಷ್ಟದಾಯಕವಾಗಿ ಪರಿಣಮಿಸಿದೆ. ಸುರಕ್ಷಿತವಾಗಿ ಈ ಕಟ್ಟಡ ನೆಲಸಮ ಮಾಡಲು ಪಕ್ಕದಲ್ಲಿದ್ದ ಸಣ್ಣ ಕಟ್ಟಡವೊಂದನ್ನು ಶುಕ್ರವಾರ ನೆಲಸಮ ಮಾಡಲಾಗಿದೆ.

ರಾಹುಲ್‌ ಎಂಬುವರಿಗೆ ಸೇರಿದ ಕಟ್ಟಡ ವಾಲಿದ್ದು, ಈ ಕಟ್ಟಡದ ಸುತ್ತಮುತ್ತಲೂ ಬಹುಮಹಡಿ ವಸತಿ ಕಟ್ಟಡಗಳು ಹಾಗೂ ಸಣ್ಣ ಪುಟ್ಟಮನೆಗಳು ಇರುವುದರಿಂದ ಯಂತ್ರಗಳನ್ನು ಬಳಸಿ ಕಟ್ಟಡ ಕೆಡವದೆ ಮೇಲ್ಭಾಗದಿಂದ ಒಂದೊಂದೇ ಮಹಡಿಯನ್ನು ತೆರವುಗೊಳಿಸುವ ಕಾರ್ಯ ಆರಂಭಿಸಾಗಿತ್ತು. ಬಿಬಿಎಂಪಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಜ್ಞರಿಗೆ ಸುರಕ್ಷಿತ ರೀತಿಯಲ್ಲಿ ಕಟ್ಟಡ ಕೆಡವಲು ಜವಾಬ್ದಾರಿ ವಹಿಸಿದೆ. ವಿಪತ್ತು ನಿರ್ವಹಣಾ ತಂಡದವರು ಗುರುವಾರದಿಂದಲೇ ಕಟ್ಟಡ ತೆರವು ಕಾರ್ಯ ಆರಂಭಿಸಿದ್ದರು. ಆದರೆ, ಹೆಚ್ಚಿನ ಪ್ರಮಾಣದ ತೆರವು ಕಾರ್ಯ ನಡೆಸಲಾಗಿರಲಿಲ್ಲ.

ಹೆಸರಿಗಷ್ಟೇ ಠಾಣೆ; ಗಸ್ತು ವಾಹನವೂ ಇಲ್ಲ, ಸಿಬ್ಬಂದಿಯೂ ಇಲ್ಲ..!

ಶುಕ್ರವಾರ ಕೂಡ ತೆರವು ಕಾರ್ಯ ಆರಂಭಿಸಿದರಾದರೂ ನಿರೀಕ್ಷಿಸಿದಷ್ಟುತೆರವು ಸಾಧ್ಯವಾಗಿಲ್ಲ. ಅಕ್ಕಪಕ್ಕ ಹೆಚ್ಚಿನ ಪ್ರಮಾಣದಲ್ಲಿ ಮನೆಗಳಿರುವುದು ತೆರವು ಕಾರ್ಯ ವೇಗಗೊಳಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಾಲಿರುವ ಕಟ್ಟಡದ ಪಕ್ಕದಲ್ಲಿ ಚಂಗಲಾಲ್‌ ಎಂಬುವರಿಗೆ ಸೇರಿದ 10/15 ವಿಸ್ತೀರ್ಣದ ಶೆಡ್‌ ಮಾದರಿಯ ಮನೆಯೊಂದನ್ನು ಕೂಡ ತೆರವುಗೊಳಿಸಲಾಗಿದೆ.

ಇದರ ಜತೆಗೆ ಪಕ್ಕದಲ್ಲಿರುವ ಖಾಲಿ ನಿವೇಶನದಲ್ಲಿ ರಾಶಿಗಟ್ಟಲೆ ಮರಳು ತಂದು ಸುರಿಯಲಾಗಿದೆ. ಮಾಹಿತಿ ಪ್ರಕಾರ, ಈ ಕಟ್ಟಡವನ್ನು ಯಂತ್ರ ಬಳಸದೆ ತೆರವುಗೊಳಿಸಲು ತಿಂಗಳುಗಟ್ಟಲೆ ಸಮಯ ಬೇಕಾಗುತ್ತದೆ. ಹಾಗಾಗಿ ಯಂತ್ರ ಬಳಸಿ ಖಾಲಿ ನಿವೇಶನವಿರುವ ಮರಳು ರಾಶಿಯ ಕಡೆಗೆ ಕಟ್ಟಡ ಬೀಳಿಸುವ ಲೆಕ್ಕಾಚಾರವನ್ನು ಅಧಿಕಾರಿಗಳು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಶುಕ್ರವಾರ ನಿರೀಕ್ಷಿಸಿದಷ್ಟುತೆರವು ಕಾರ್ಯ ಸಾಧ್ಯವಾಗಿಲ್ಲ. ಶನಿವಾರದಿಂದ ತೆರವು ಕಾರ್ಯಾಚರಣೆ ಚುರುಕುಗೊಳ್ಳಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

PREV
click me!

Recommended Stories

ವಿಧಾನಸಭೆಯಲ್ಲಿ 'ಉತ್ತರ ಕರ್ನಾಟಕ' ವಿವಾದ: ಶಿವಲಿಂಗೇಗೌಡರ ಮಾತುಗಳಿಗೆ ಗರಂ ಆದ ಯತ್ನಾಳ್, ಗ್ಯಾರಂಟಿ, ಗುಂಡಿ ವಿಚಾರಕ್ಕೆ ಜಟಾಪಟಿ!
ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್! ಏನಿದು ಪ್ರಕರಣ?