ತಾಯಿ ನಿಧನರಾದ ಕೆಲವೇ ಗಂಟೆಯೊಳಗಾಗಿ ಪುತ್ರನೂ ನಿಧನ| ಹಾವೇರಿ ನಗರದಲ್ಲಿ ನಡೆ ಘಟನೆ| ತಾಯಿ ಕಮಲಮ್ಮ ಬಸಯ್ಯ ಹಿರೇಮಠ ಮಂಗಳವಾರ ರಾತ್ರಿ ನಿಧನರಾಗಿದ್ದು, ಬುಧವಾರ ಬೆಳಗ್ಗೆ ಅವರ ಮಗ ಕುಮಾರಸ್ವಾಮಿ ಬಸಯ್ಯ ಹಿರೇಮಠ ಸಾವು|
ಹಾವೇರಿ(ಜೂ.18): ತಾಯಿ ನಿಧನರಾದ ಕೆಲವೇ ಗಂಟೆಯೊಳಗಾಗಿ ಮಗನೂ ನಿಧನರಾದ ಘಟನೆ ನಗರದಲ್ಲಿ ಬುಧವಾರ ಸಂಭವಿಸಿದೆ.
ನಗರದ ವರ್ತಕರಾಗಿದ್ದ ಕುಮಾರಸ್ವಾಮಿ ಹಿರೇಮಠ ಅವರ ತಾಯಿ ಕಮಲಮ್ಮ ಬಸಯ್ಯ ಹಿರೇಮಠ (93) ಮಂಗಳವಾರ ರಾತ್ರಿ ನಿಧನರಾಗಿದ್ದು, ಬುಧವಾರ ಬೆಳಗ್ಗೆ ಅವರ ಮಗ ಕುಮಾರಸ್ವಾಮಿ ಬಸಯ್ಯ ಹಿರೇಮಠ (62) ನಿಧನರಾಗಿದ್ದಾರೆ. ತಾಯಿ ಹಾಗೂ ಮಗ ಇಬ್ಬರ ಅಂತ್ಯಸಂಸ್ಕಾರವನ್ನು ಒಟ್ಟಿಗೆ ಬುಧವಾರ ಸಂಜೆ ನೆರವೇರಿಸಲಾಯಿತು.
ಡೆಡ್ಲಿ ವೈರಸ್ ಕಾಟ: ಹಾವೇರಿ ಸಾಹಿತ್ಯ ಸಮ್ಮೇಳನಕ್ಕೂ ಕೊರೋನಾ ಕರಿನೆರಳು..!
ಕಮಲಮ್ಮ ಅವರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಕುಮಾರಸ್ವಾಮಿ ಅವರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ.
#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್