ಅನಾ​ರೋ​ಗ್ಯ​ಪೀ​ಡಿತ ತಂದೆ​ಯನ್ನು ಲಾಡ್ಜ್‌​ನಿಂದ ಎಳೆದು ತಂದು ರಸ್ತೆ​ಯಲ್ಲಿ ಬಿಟ್ಟು ಪುತ್ರ ಪರಾ​ರಿ!

By Kannadaprabha NewsFirst Published Jun 30, 2020, 7:24 AM IST
Highlights

ಪುತ್ರನೋರ್ವ ಅನಾ​ರೋ​ಗ್ಯ​ಪೀ​ಡಿತ ತಂದೆಯನ್ನು ಲಾಡ್ಜ್‌ನಿಂದ ಬೆತ್ತಲೆಯಾಗಿ ಎಳೆದುತಂದು ರಸ್ತೆಬದಿಯಲ್ಲಿ ಬಿಟ್ಟು ಪರಾರಿಯಾಗಿರುವ ಘಟನೆ ದೇರಳಕಟ್ಟೆಯಲ್ಲಿ ನಡೆದಿದೆ.

ಉಳ್ಳಾ​ಲ(ಜೂ.30): ಮಾನಸಿಕ ಅಸ್ವಸ್ಥ ಪುತ್ರನೋರ್ವ ಅನಾ​ರೋ​ಗ್ಯ​ಪೀ​ಡಿತ ತಂದೆಯನ್ನು ಲಾಡ್ಜ್‌ನಿಂದ ಬೆತ್ತಲೆಯಾಗಿ ಎಳೆದುತಂದು ರಸ್ತೆಬದಿಯಲ್ಲಿ ಬಿಟ್ಟು ಪರಾರಿಯಾಗಿರುವ ಘಟನೆ ದೇರಳಕಟ್ಟೆಯಲ್ಲಿ ನಡೆದಿದೆ.

ಮಾನವೀಯತೆ ಮೆರೆದ ಲಾಡ್ಜ್ ಮಾಲೀಕರು ಹಾಗೂ ಸಿಬ್ಬಂದಿ ರೋಗಿಗೆ ಶುಶ್ರೂಷೆ ನೀಡಿ ಮರಳಿ ಲಾಡ್ಜ್‌ ರೂಮಿ​ನಲ್ಲಿ ಮಲ​ಗಿ​ಸಿದ್ದಾರೆ. ನಗರದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಅಟೆಂಡರ್‌ ಆಗಿರುವ ಬಜಪೆ ನಿವಾಸಿ ವೃದ್ಧ ಆರೋಗ್ಯ ಸಮಸ್ಯೆಯಿಂದ ದೇರಳಕಟ್ಟೆಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಂಡು 15 ದಿನಗಳಿಂದ ಆಸ್ಪತ್ರೆ ಎದುರಿನ ಲಾಡ್ಜ್‌ನಲ್ಲಿ ಇದ್ದುಕೊಂಡು ಚಿಕಿತ್ಸೆ ಮುಂದುವರಿಸಿದ್ದರು.

SSLC ಪರೀಕ್ಷೆಗೆ ಮಕ್ಕಳನ್ನು ಸಾಗಿಸುತ್ತಿದ್ದ ರಿಕ್ಷಾ ಪಲ್ಟಿ: ನಾಲ್ವರಿಗೆ ಗಾಯ

ಈ ಸಂದರ್ಭ ಅವರ ಜತೆಗೆ ಪುತ್ರ ಕೂಡ ಇದ್ದ. ಈ ಹಿಂದೆ ಮಾನಸಿಕವಾಗಿ ಬಳಲುತ್ತಿದ್ದ ಪುತ್ರನನ್ನು ತಂದೆಯೇ ನೋಡಿಕೊಳ್ಳುತ್ತಿದ್ದರು. ಬಳಿಕ ಅವರೇ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಪಡೆ​ಯು​ತ್ತಿ​ದ್ದಾರೆ. ಇವರ ಇಬ್ಬರು ಪುತ್ರರು ಮುಂಬೈನಲ್ಲಿದ್ದು, ತಂದೆಯ ಅನಾರೋಗ್ಯದ ವಿಷಯ ತಿಳಿದು ಜೂನ್‌ 22ಕ್ಕೆ ಮಂಗ​ಳೂ​ರಿಗೆ ಬಂದಿದ್ದು, ಏಳು ದಿನ​ಗ​ಳಿಂದ ಕ್ವಾರೈಂಟ​ನ್‌​ಲ್ಲಿದ್ದು, ಮಂಗ​ಳ​ವಾರ ದೇರ​ಳ​ಕ​ಟ್ಟೆಗೆ ಆಗ​ಮಿ​ಸುವ​ವ​ರಿ​ದ್ದರು.

ಜುಲೈ, ಆಗಸ್ಟಲ್ಲಿ ಮಹಾಸ್ಫೋಟ; ವಾರಕ್ಕೆ 2 ದಿನ ಲಾಕ್‌ಡೌನ್?: 6 ತಿಂಗಳು ಇದೇ ಸ್ಥಿತಿ

ಈ ನಡುವೆ ತಂದೆಯ ಜತೆಗಿದ್ದ ಪುತ್ರ ಲಾಡ್ಜ್‌ನ ಒಂದನೇ ಮಹಡಿಯಿಂದ ತಂದೆಯ ಕಾಲುಗಳನ್ನು ಹಿಡಿದು ಎಳೆದುಕೊಂಡು ಬಂದಿದ್ದಾನೆ. ಈ ವೇಳೆ ಅವರು ತೊಟ್ಟಿದ್ದ ಲುಂಗಿ ಮತ್ತು ಮೂತ್ರಕ್ಕಾಗಿ ಹಾಕಲಾಗಿದ್ದ ಪೈಪ್‌ಗಳು ಕಳಚಿಹೋಗಿದೆ. ರಸ್ತೆಬದಿಯಲ್ಲಿ ಅನಾಥ ಸ್ಥಿತಿಯಲ್ಲಿ ಬಿಟ್ಟು ಪುತ್ರ ಪರಾರಿಯಾದ ಬಳಿಕ ಸ್ಥಳೀಯರಾದ ಶಾಜಿದ್‌, ದೀಪಕ್‌ ಕುಮಾರ್‌ ಮತ್ತು ಲುಲು ಲಾಡ್ಜ್‌ನ ಮಾಲೀಕರಾದ ಖಲೀಲ್‌ ಅವರು ವಾಪಸ್‌ ರೂಮಿಗೆ ಕರೆ​ದು​ಕೊಂಡು ಹೋಗಿ ಶುಶ್ರೂಷೆ ನೀಡಿದ್ದಾರೆ.

click me!