SSLC ಪರೀಕ್ಷೆಗೆ ಮಕ್ಕಳನ್ನು ಸಾಗಿಸುತ್ತಿದ್ದ ರಿಕ್ಷಾ ಪಲ್ಟಿ: ನಾಲ್ವರಿಗೆ ಗಾಯ

By Kannadaprabha News  |  First Published Jun 30, 2020, 7:18 AM IST

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮಕ್ಕಳನ್ನು ಸಾಗಿಸುತ್ತಿದ್ದ ರಿಕ್ಷಾ ಪಲ್ಟಿಯಾದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಪಾಣೆಮಂಗಳೂರು ಸಮೀಪದ ಶಂಭೂರಿನಲ್ಲಿ ಸೋಮವಾರ ನಡೆದಿದೆ.


ಬಂಟ್ವಾಳ(ಜೂ.30): ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮಕ್ಕಳನ್ನು ಸಾಗಿಸುತ್ತಿದ್ದ ರಿಕ್ಷಾ ಪಲ್ಟಿಯಾದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಪಾಣೆಮಂಗಳೂರು ಸಮೀಪದ ಶಂಭೂರಿನಲ್ಲಿ ಸೋಮವಾರ ನಡೆದಿದೆ.

ಶಂಭೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಗಾಯಗೊಂಡವರಾಗಿದ್ದು, ಈ ಪೈಕಿ ವಿದ್ಯಾರ್ಥಿ ಅಕ್ಷಿತ್‌ಗೆ ತೀವ್ರ ತರದ ಗಾಯಗಳಾಗಿದೆ. ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಶಂಭೂರು ಪ್ರೌಢಶಾಲೆಯ ವಿದ್ಯಾರ್ಥಿಗಳು ಪಾಣೆಮಂಗಳೂರು ಶಾರದಾ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

Latest Videos

undefined

ಜುಲೈ, ಆಗಸ್ಟಲ್ಲಿ ಮಹಾಸ್ಫೋಟ; ವಾರಕ್ಕೆ 2 ದಿನ ಲಾಕ್‌ಡೌನ್?: 6 ತಿಂಗಳು ಇದೇ ಸ್ಥಿತಿ

ಘಟನೆಯಲ್ಲಿ ಗಾಯಗೊಂಡಿರುವ ಮೂವರು ವಿದ್ಯಾರ್ಥಿಗಳು ಮೂವರು ವಿದ್ಯಾರ್ಥಿನಿಯರಿಗೆ ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿ ತಿಳಿಸಿದ್ದಾರೆ. ಶಂಭೂರು ಬಳಿಯ ಚಚ್‌ರ್‍ ಸಮೀಪ ನಾಯಿಯೊಂದು ರಿಕ್ಷಾಕ್ಕೆ ಅಡ್ಡಬಂದ ಪರಿಣಾಮ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಮಗುಚಿಬಿದ್ದಿದೆ ಎನ್ನಲಾಗಿದೆ. ಘಟನೆಯಲ್ಲಿ ರಿಕ್ಷಾ ಚಾಲಕನಿಗೂ ಸಣ್ಣಪುಟ್ಟಗಾಯಗಳಾಗಿದೆ.

click me!