ತಾಯಿ ಮೃತಪಟ್ಟ ಕ್ಷಣದಲ್ಲೇ ಪುತ್ರನೂ ಸಾವು

Kannadaprabha News   | Asianet News
Published : Feb 26, 2020, 11:39 AM IST
ತಾಯಿ ಮೃತಪಟ್ಟ ಕ್ಷಣದಲ್ಲೇ ಪುತ್ರನೂ ಸಾವು

ಸಾರಾಂಶ

ಪುತ್ರ ಕೋಮಾದಲ್ಲಿದ್ದಾನೆ ಎಂಬ ಸುದ್ದಿ ತಿಳಿದ ತಾಯಿ ಆಘಾತದಿಂದ ಮೃತಪಟ್ಟರೆ, ಇದಾದ ಕೆಲವೇ ಕ್ಷಣದಲ್ಲಿ ಪುತ್ರನೂ ಇಹಲೋಕ ತ್ಯಜಿಸಿದ ಘಟನೆ ಮಂಗಳೂರು ನಗರದ ಕಾಪ್ರಿಗುಡ್ಡದಲ್ಲಿ ಭಾನುವಾರ ಸಂಭವಿಸಿದೆ.  

ಮಂಗಳೂರು(ಫೆ.26): ಪುತ್ರ ಕೋಮಾದಲ್ಲಿದ್ದಾನೆ ಎಂಬ ಸುದ್ದಿ ತಿಳಿದ ತಾಯಿ ಆಘಾತದಿಂದ ಮೃತಪಟ್ಟರೆ, ಇದಾದ ಕೆಲವೇ ಕ್ಷಣದಲ್ಲಿ ಪುತ್ರನೂ ಇಹಲೋಕ ತ್ಯಜಿಸಿದ ಘಟನೆ ಮಂಗಳೂರು ನಗರದ ಕಾಪ್ರಿಗುಡ್ಡದಲ್ಲಿ ಭಾನುವಾರ ಸಂಭವಿಸಿದೆ.

ಕಾಪ್ರಿಗುಡ್ಡದ ದಿ.ಬಾಜಿಲ್‌ ಡಿಸೋಜಾ ಅವರ ಪತ್ನಿ ಜೂಲಿಯಾನ ಡಿಸೋಜಾ (84) ಅವರ ಪುತ್ರ ನೋಬರ್ಟ್‌ ಡಿಸೋಜಾ (58) ಚಿಕಿತ್ಸೆಗೆ ಸ್ಪಂದಿಸದೆ ಕೋಮಾ ಸ್ಥಿತಿಯಲ್ಲಿದ್ದರು. ಈ ಸುದ್ದಿ ತಿಳಿದ ಜೂಲಿಯಾನ ಡಿಸೋಜಾ ಅವರು ಆಘಾತದಿಂದ ಮೃತಪಟ್ಟಿದ್ದಾರೆ.

ದಿವ್ಯಾಂಗ ವಿದ್ಯಾರ್ಥಿನಿ ಮೇಲೆ 60ರ ಮುದುಕನಿಂದ ನಿರಂತರ ಅತ್ಯಾಚಾರ..!

ಕೆಲವು ತಿಂಗಳ ಹಿಂದೆ ನೋರ್ಬರ್ಟ್‌ ಡಿಸೋಜಾ ಅವರು ಕೆಳಗೆ ಬಿದ್ದು ತಲೆಗೆ ಗಂಭೀರವಾದ ಏಟಾಗಿತ್ತು. ಬಳಿಕ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 15 ದಿನಗಳ ಹಿಂದೆ ಅವರ ತಲೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಅದರಿಂದ ಅವರು ಚೇತರಿಸಿಕೊಳ್ಳಲಾಗದೇ ಕೋಮಾ ಸ್ಥಿತಿಗೆ ಹೋಗಿದ್ದರು. 

ತನ್ನ ಪುತ್ರ ನೋಬರ್ಟ್‌ನ ಆಘಾತಕಾರಿ ಸುದ್ದಿಯನ್ನು ಕೇಳಿದ ತಾಯಿ ಜೂಲಿಯಾನ ಡಿ ಸೋಜಾ ಅವರು ಮೃತಪಟ್ಟಿದ್ದರು. ತಾಯಿ ಮೃತಪಟ್ಟನಿಮಿಷಗಳ ಅಂತರದಲ್ಲಿ ಪುತ್ರ ಇಹಲೋಕ ತ್ಯಜಿಸಿದರು.

PREV
click me!

Recommended Stories

ರೈತ, ಆಟೋ ಚಾಲಕರ ಹೆಣ್ಮಕ್ಕಳಿಗೆ ಗವಿಮಠದಿಂದ ಫ್ರೀ ಕಾಲೇಜು, ಹಾಸ್ಟೆಲ್‌
ಆತಂಕದ ವಿಷಯ: ಬೆಂಗಳೂರಿನಲ್ಲಿ 11 ವರ್ಷದ ಮಕ್ಕಳಿಗೂ ಡ್ರಗ್ಸ್‌ ಚಟ!