ತಾಯಿ ಅಂತ್ಯ ಸಂಸ್ಕಾರ ಮುಗಿಸಿ ಬಂದ ಮಗನೂ ಸಾವು

Suvarna News   | Asianet News
Published : Feb 07, 2021, 01:40 PM IST
ತಾಯಿ ಅಂತ್ಯ ಸಂಸ್ಕಾರ ಮುಗಿಸಿ ಬಂದ ಮಗನೂ ಸಾವು

ಸಾರಾಂಶ

ತಾಯಿಯ ಅಂತ್ಯಸಂಸ್ಕಾರ ಮುಗಿಸಿ ಬಂದ ಬಳಿಕ ಮಗನೂ ಸಾವಿಗೀಡಾದ ಘಟನೆಯೊಂದು ನಡೆದಿದೆ. ತೀವ್ರ ಅಸ್ವಸ್ಥರಾಗಿ ಅಸುನೀಗಿದ್ದಾರೆ. 

ಹಾಸನ (ಫೆ.07):  ಮರಣ ಹೊಂದಿದ್ದ ತಾಯಿ ಅಂತ್ಯಸಂಸ್ಕಾರ ಮುಗಿಸಿ ಬಂದ ನಂತರ ಮಗನೂ ಸಾವನ್ನಪ್ಪಿದ್ದಾನೆ.

ಈ ದಾರುಣ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರಿನಲ್ಲಿ ನಡೆದಿದೆ. 

ವಯೋಸಹಜ ಕಾಯಿಲೆ ಯಿಂದ ಬಳಲುತ್ತಿದ್ದ 75 ವರ್ಷದ ತಾಯಿ ಗೌರಮ್ಮ ಸಾವನ್ನಪ್ಪಿದ್ದರು. ಅನಾರೋಗ್ಯ ಹಿನ್ನೆಲೆ ಒಂದು ವಾರದಿಂದ  ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಗೌರಮ್ಮನ ಮಗ ಗಣೇಶ್  ಚಿಕಿತ್ಸೆ ಪಡೆಯುತ್ತಿದ್ದರು. ತಾಯಿ ಮರಣ ಹೊಂದಿದ ಹಿನ್ನೆಲೆ ಅಂತ್ಯಸಂಸ್ಕಾರ ನಡೆಸಲು ಮಗ ತೆರಳಿದ್ದರು.  ಅಂತ್ಯ ಸಂಸ್ಕಾರ ನಡೆಸಿ ಮನೆಗೆ ವಾಪಸ್ಸಾದ  53 ವರ್ಷದ ಗಣೇಶ್ ದಿಡೀರ್ ತೀವ್ರ ಅಸ್ವಸ್ಥರಾಗಿದ್ದರು. 

ಬಾಗಲಕೋಟೆ: ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ, ಅಬಕಾರಿ ನಿರೀಕ್ಷಕನ ವಿರುದ್ಧ FIR ...

ಕೂಡಲೇ ಅರಕಲಗೂಡು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಗಣೇಶ್  ಸಾವನ್ನಪ್ಪಿದ್ದಾರೆ. 

ಒಂದು ದಿನದ ಅಂತರದಲ್ಲಿ ತಾಯಿ- ಮಗ ಇಬ್ಬರೂ ಸಾವನ್ನಪ್ಪಿದ್ದು, ಕುಟುಂಬದವರು ಕಂಗಾಲಾಗಿದ್ದಾರೆ.

PREV
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ