ಸುರಕ್ಷತೆ ಮತ್ತು ವಿದ್ಯುದ್ದೀಕರಣ ಕಾಮಗಾರಿ ಹಿನ್ನೆಲೆ: ಕೆಲವು ರೈಲುಗಳ ಸಂಚಾರ ರದ್ದು

Published : May 18, 2025, 10:29 PM IST
ಸುರಕ್ಷತೆ ಮತ್ತು ವಿದ್ಯುದ್ದೀಕರಣ ಕಾಮಗಾರಿ ಹಿನ್ನೆಲೆ: ಕೆಲವು ರೈಲುಗಳ ಸಂಚಾರ ರದ್ದು

ಸಾರಾಂಶ

ಸಕಲೇಶಪುರ -ಸುಬ್ರಹ್ಮಣ್ಯ ರೋಡ್ ಮಾರ್ಗದಲ್ಲಿ ಜೂನ್ 1 ರಿಂದ ನವೆಂಬರ್ 1, 2025 ರವರೆಗೆ ಸುರಕ್ಷತೆ ಮತ್ತು ರೈಲ್ವೆ ವಿದ್ಯುದ್ದೀಕರಣ ಕಾಮಗಾರಿ ನಡೆಯಲಿರುವ ಕಾರಣದಿಂದಾಗಿ ಕೆಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. 

ಬೆಂಗಳೂರು (ಮೇ.18): ಸಕಲೇಶಪುರ -ಸುಬ್ರಹ್ಮಣ್ಯ ರೋಡ್ ಮಾರ್ಗದಲ್ಲಿ ಜೂನ್ 1 ರಿಂದ ನವೆಂಬರ್ 1, 2025 ರವರೆಗೆ ಸುರಕ್ಷತೆ ಮತ್ತು ರೈಲ್ವೆ ವಿದ್ಯುದ್ದೀಕರಣ ಕಾಮಗಾರಿ ನಡೆಯಲಿರುವ ಕಾರಣದಿಂದಾಗಿ ಕೆಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಮೇ 31 ರಿಂದ ನವೆಂಬರ್ 1, 2025 ರವರೆಗೆ ಶನಿವಾರಗಳಂದು ಸಂಚರಿಸುವ ಯಶವಂತಪುರ-ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16539) ರದ್ದಾಗಲಿದೆ. ಅದೇ ರೀತಿ, ಜೂನ್ 1 ರಿಂದ ನವೆಂಬರ್ 2, 2025 ರವರೆಗೆ ಭಾನುವಾರಗಳಂದು ಸಂಚರಿಸುವ ಮಂಗಳೂರು ಜಂಕ್ಷನ್-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16540) ಸಹ ರದ್ದಾಗಲಿದೆ.

ಜೂನ್ 1 ರಿಂದ ಅಕ್ಟೋಬರ್ 30, 2025 ರವರೆಗೆ ಮಂಗಳವಾರ, ಗುರುವಾರ ಮತ್ತು ಭಾನುವಾರಗಳಂದು ಸಂಚರಿಸುವ ಯಶವಂತಪುರ-ಮಂಗಳೂರು ಜಂಕ್ಷನ್ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16575) ರದ್ದಾಗಲಿದೆ. ಇದರ ಜೊತೆಗೆ, ಜೂನ್ 2, 2025 ರಿಂದ ಅಕ್ಟೋಬರ್ 31, 2025 ರವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಸಂಚರಿಸುವ ಮಂಗಳೂರು-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16576) ಸಹ ರದ್ದಾಗಲಿದೆ.

ಹಾಲಿನ ದರ ಹೆಚ್ಚಳವೇ ರೈತರಿಗೆ ಆರ್ಥಿಕತೆಯ ಬಲ: ಸಚಿವ ಕೆ. ವೆಂಕಟೇಶ್

ಇದಲ್ಲದೆ, ಜೂನ್ 2 ರಿಂದ ಅಕ್ಟೋಬರ್ 31, 2025 ರವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಸಂಚರಿಸುವ ಯಶವಂತಪುರ-ಕಾರವಾರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16515) ಹಾಗೂ ಜೂನ್ 3, 2025 ರಿಂದ ನವೆಂಬರ್ 1, 2025 ರವರೆಗೆ ಮಂಗಳವಾರ, ಗುರುವಾರ ಮತ್ತು ಶನಿವಾರಗಳಂದು ಸಂಚರಿಸುವ ಕಾರವಾರ-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16516) ರೈಲುಗಳ ಸಂಚಾರವನ್ನು ಸಹ ರದ್ದುಗೊಳಿಸಲಾಗಿದೆ.

PREV
Read more Articles on
click me!

Recommended Stories

ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌
ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ