ಕಾವಿ ವೇಷ ಹಾಕಿಕೊಂಡ ಕೆಲವರಿಂದ ಅಧರ್ಮ: ಶ್ರೀ ವಿಷಾದ

By Kannadaprabha News  |  First Published Oct 31, 2022, 5:11 AM IST

ಕಾವಿ ವೇಷ ತೊಟ್ಟಕೆಲವರಿಂದ ಮಠ ಮಾನ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಸಂದೇಶ ಬರುವಂತಾಗಿರುವುದು ಬಹಳ ನೋವಿನ ಸಂಗತಿ ಎಂದು ಬಾಳೆಹೊನ್ನೂರು ಮಠದ ರಂಭಾಪುರಿ ವೀರಸಿಂಹಾಸನಾಧೀಶ್ವರ ಜಗದ್ಗುರು ರೇಣುಕ ಡಾ.ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು ವಿಷಾದಿಸಿದರು.


 ತುರುವೇಕೆರೆ (ಅ.31):  ಕಾವಿ ವೇಷ ತೊಟ್ಟಕೆಲವರಿಂದ ಮಠ ಮಾನ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಸಂದೇಶ ಬರುವಂತಾಗಿರುವುದು ಬಹಳ ನೋವಿನ ಸಂಗತಿ ಎಂದು ಬಾಳೆಹೊನ್ನೂರು ಮಠದ ರಂಭಾಪುರಿ ವೀರಸಿಂಹಾಸನಾಧೀಶ್ವರ ಜಗದ್ಗುರು ರೇಣುಕ ಡಾ.ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು ವಿಷಾದಿಸಿದರು.

ಪಟ್ಟಣದ ಹೊರಪೇಟೆಯ ಶ್ರೀ ಕೋಡಿ ಬಸವೇಶ್ವರ ದ (Temple)  ಆವರಣದಲ್ಲಿ ನಿರ್ಮಿಸಿರುವ ಜಗದ್ಗುರು ರೇಣುಕಾಚಾರ್ಯ ಶಿಲಾಮಂಟಪ ಲೋಕಾರ್ಪಣಾ ಕಾರ್ಯಕ್ರಮದ ಸಲುವಾಗಿ ಭಾನುವಾರ ನಡೆದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.

Tap to resize

Latest Videos

(Religous) ರಂಗ ಬಿಟ್ಟರೆ ಎಲ್ಲ ರಂಗಗಳು ಕಲುಷಿತಗೊಂಡಿದೆ. ಇಡೀ ಜಗತ್ತಿಗೆ ಒಳ್ಳೆಯದಾಗುವುದಾದರೆ ಧರ್ಮದಿಂದ ಮಾತ್ರ ಎಂಬ ನಂಬಿಕೆಯಲ್ಲಿ ಬಾಳಬೇಕು. ವ್ಯಕ್ತಿಗಿಂತ ಸಮಾಜ ದೊಡ್ಡದು, ಸಮಾಜಕ್ಕೆ ಧರ್ಮಕ್ಕಿಂತ ರಾಷ್ಟ್ರ ದೊಡ್ಡದು, ರಾಷ್ಟ್ರದಲ್ಲಿ ಸೌಹಾರ್ಧತೆಯಿಂದ ಬಾಳಿದರೆ ಮಾತ್ರ ನಮ್ಮ ಧರ್ಮ ಉಳಿಯಲಿದೆ. ಜಾತಿ, ಜಾತಿಗಳ ಹೆಸರಿನಲ್ಲಿ ನಮ್ಮ ಸಮಾಜ ಕಲುಷಿತಗೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಾನವನು ವಿದ್ಯೆ, ಸಂಪತ್ತುಗಳಿಸುವಾಗ ನಾವು ಭೂಮಿ ಮೇಲೆ ಬಾಳಿ ಬದುಕುತ್ತಿದ್ದೇವೆ ಎಂಬ ಆಶಾ ಭಾವನೆ ಇಟ್ಟುಕೊಂಡು ಬಾಲ್ಯದಲ್ಲಿ ವಿದ್ಯೆ, ಯೌವ್ವನದಲ್ಲಿ ದುಡಿಮೆ, ಸಂಪತ್ತುಗಳಿಸಿ ಜೀವನ ನಡೆಸುತ್ತಾನೆ. ನಾವು ಹೇಳಿದ ಮಾತಿನಂತೆ ಆಚರಿಸಿಕೊಂಡು ಬಂದರೆ ಮಾತ್ರ ನಿಜವಾದ ಧರ್ಮ. ಇಂದು ಸಮಾಜ ಕಲುಷಿತಗೊಂಡು ಅಸ್ತವ್ಯಸ್ತವಾಗಿ ಕಾಣುತ್ತಿದೆ. ಸಾಮರಸ್ಯದ ಕೊರತೆ ಹೆಚ್ಚಾಗುತ್ತಿದೆ. ಮಕ್ಕಳಿಗೆ ಮೂಲ ಧರ್ಮವಾಗಿರುವ ಆದರ್ಶವನ್ನು ಮರೆಯುತ್ತಿದ್ದಾರೆ. ಬುದ್ದಿವಂತರಾದ ತಂದೆ ತಾಯಂದಿರು ಸಹ ತಾನು ಹುಟ್ಟಿದ ಧರ್ಮ ಸಂಸ್ಕೃತಿಯ ಪರಿಪಾಠವನ್ನು ಮಕ್ಕಳಿಗೆ ನೀಡದೇ ಮಕ್ಕಳನ್ನು ಡಾಕ್ಟರ್‌, ಎಂಜಿನಿಯರ್‌ ಆಗಬೇಕು ಎನ್ನುತ್ತಾರೆ ಹೊರೆತು ಉತ್ತಮ ಸಮಾಜ ಪ್ರೇಮಿ, ರಾಷ್ಟ್ರ ಪ್ರೇಮಿಯಾಗಲಿ ಎನ್ನುವುದಿಲ್ಲ. ಸಕಲ ಜೀವಿಯ ಜೊತೆ ಪ್ರೀತಿಯಿಂದ ಬಾಳಲಿ ಎಂದು ಹೇಳುವುದಿಲ್ಲ ಎಂದು ಶ್ರೀ ಹೇಳಿದರು.

ಪಟ್ಟಣದಲ್ಲಿ ವರ್ಷದಲ್ಲಿ ಒಂದು ದಿನ ರೇಣುಕಾ ಜಯಂತಿ ಆಚರಿಸಿ ಹಾಗೂ ಇಷ್ಟಲಿಂಗಪೂಜೆಯನ್ನು ಆಚರಿಸಬೇಕು ಎಂದು ಸಲಹೆ ನೀಡಿದ ರಂಭಾಪುರಿ ಶ್ರೀಗಳು ಕಾಡಸಿದ್ದೇಶ್ವರ ಸ್ವಾಮಿಗಳು ಜಗದ್ಗುರು ರೇಣುಕಾಚಾರ್ಯರ ಶಿಲಾಮಂಟಪದ ಲೋಕಾರ್ಪಣಾ ಕಾರ್ಯವನ್ನು ಉತ್ತಮವಾಗಿ ನೆರವೇರಿಸಿದ್ದಾರೆ. ಮುಂಬರುವ ದಿನಗಳಲ್ಲಿ ನಡೆಯುವ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ತಾವು ಭಾಗವಹಿಸುವುದಾಗಿ ರಂಭಾಪುರಿ ಶ್ರೀಗಳು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ಆಸರ ಆಸ್ಪತ್ರೆಯಿಂದ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಭಕ್ತರು ಹಾಗೂ ಸಾರ್ವಜನಿಕರು ಸದುಪಯೋಗ ಪಡೆದುಕೊಂಡರು.

ಕಾಡಸಿದ್ದೇಶ್ವರ ಮಠದ ಕರಿವೃಷಭದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮಿಗಳು ಆಶೀರ್ವಚನ ನೀಡಿದರು. ಶಾಸಕ ಮಸಾಲಜಯರಾಮ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಹುಕ್ಕೆರಿ ಮಠದ ಚಂದ್ರಶೇಖರ ಸ್ವಾಮೀಜಿ, ಬೇಬಿಮಠದ ತ್ರಿನೇತ್ರ ಮಹಂತ ಶಿವಯೋಗ ಸ್ವಾಮೀಜಿ, ಮಾಚಗೊಂಡನಹಳ್ಳಿ ಮಠದ ಇಮ್ಮಡಿ ಬಸವರಾಜು ಸ್ವಾಮೀಜಿ, ಬೆಂಗಳೂರು ರೇಣುಕಾ ವಿದ್ಯಾಸಂಸ್ತೆಯ ಡಾ.ವೇದಮೂರ್ತಿ, ಬೆಂಗಳೂರು ಜಿಲ್ಲೆಯ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಗುರುಸ್ವಾಮಿ, ಹೋಮಿಯೋಪತಿ ತಜ್ಞ ಡಾ. ಬಿ.ಟಿ.ರುದ್ರೇಶ್‌, ಆಸರ ಆಸ್ಪತ್ರೆಯ ಡಾ.ಜಗದೀಶ್‌, ಸಮಾಜದ ಮುಖಂಡರಾದ ವಕೀಲ ಉದಯಶಂಕರ್‌, ಗುರುಚನ್ನಬಸವಯ್ಯ, ಶಿವಾನಂದ್‌, ಸುನಿಲ್‌ ಕುಮಾರ್‌, ನಟೇಶ್‌, ಮಹೇಶ್‌, ಡಾ.ರುದ್ರಯ್ಯ ಹಿರೇಮಠ್‌, ಮಹಾಲಿಂಗಯ್ಯ, ಚಂದ್ರಶೇಖರ್‌ ಸೇರಿದಂತೆ ಹಲವಾರು ಸಮಾಜದ ಮುಖಂಡರು ಇದ್ದರು.

ಕಾವಿ ವೇಷ ಹಾಕಿಕೊಂಡ ಕೆಲವರಿಂದ ಅಧರ್ಮ: ಶ್ರೀ ವಿಷಾದ

ಕಾವಿ ವೇಷ ಹಾಕಿಕೊಂಡ ಕೆಲವರಿಂದ ಅಧರ್ಮ: ಶ್ರೀ ವಿಷಾದ

ಸೌಹಾರ್ಧತೆಯಿಂದ ಬಾಳಿದರೆ ಮಾತ್ರ ಧರ್ಮ ಉಳಿಯಲಿದೆ

ಧಾರ್ಮಿಕ ರಂಗ ಬಿಟ್ಟರೆ ಎಲ್ಲ ರಂಗಗಳು ಕಲುಷಿತಗೊಂಡಿದೆ

click me!