'ಕೆಲವರು ಟ್ರೆಡಿಷನಲ್‌ಗಾಗಿ ಗುಳೆ ಹೋಗ್ತಾರೆ' ಭೀಕರ ಬರಗಾಲ ಪರಿಶೀಲನೆ ವೇಳೆ ಉಪಮುಖ್ಯಮಂತ್ರಿ ಪರಮೇಶ್ವರ ಹೇಳಿಕೆ

Published : Oct 08, 2026, 08:34 PM IST
Dr G Parameswar controversial statement

ಸಾರಾಂಶ

ಕೊಪ್ಪಳದಲ್ಲಿ ಬರಗಾಲ ಪರಿಶೀಲನೆ ವೇಳೆ ಗೃಹಸಚಿವ ಡಾ.ಜಿ ಪರಮೇಶ್ವರ ಅವರು ಜನರು ಟ್ರೆಡಿಷನಲ್‌ಗಾಗಿ ಗುಳೆ ಹೋಗುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಂತರ ಇದು ಕಾಫಿ ತೋಟಕ್ಕೆ ಹೋಗುವ ಸಂಪ್ರದಾಯದ ಬಗ್ಗೆ ಹೇಳಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಹೇಳಿಕೆಯನ್ನು ಬಿಜೆಪಿ ನಾಯಕರು ತೀವ್ರವಾಗಿ ಟೀಕಿಸಿದ್ದಾರೆ.

ಕೊಪ್ಪಳ: ಬರಗಾಲ ಪರಿಶೀಲನೆ ವೇಳೆ ಗೃಹಸಚಿವ ಡಾ.ಜಿ ‍ಪರಮೇಶ್ವರ (Dr G Parameshwar) ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಡವರು, ರೈತರು ಗುಳೆ ಹೋಗುವ ಗಂಭೀರ ಸಮಸ್ಯೆಗೆ ಉತ್ತರಿಸುವ ವೇಳೆ ಕೆಲವರು ಟ್ರೆಡಿಷನಲ್‌ಗಾಗಿ ಗುಳೇ ಹೋಗ್ತಾರೆ ಎಂದು ‍ಪರಮೇಶ್ವರ ಹೇಳಿದ್ದಾರೆ.

ಕೊಪ್ಪಳದಲ್ಲಿ ಬರಗಾಲ ಪರಿಶೀಲನೆ ಸಭೆಯಲ್ಲಿ ‍ಪರಮೇಶ್ವರ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೆಲವರು ರಾಜ್ಯದಲ್ಲಿ ಗುಳೆ ಹೋಗತ್ತಿದ್ದಾರೆ. 40 ರಿಂದ 45 ವರ್ಷದವರು ಕೆಲಸಕ್ಕೆ ಹೋಗಿದ್ದಾರೆ. ಕೆಲವರು ಕಬ್ಬು ಕಡಿಯೋಕೆ ಹೋಗಿದ್ದಾರೆ. ಕೆಲವರು ಗೋವಾ ಬೆಂಗಳೂರು ಕಡೆ ಕೆಲಸಕ್ಕೆ ಹೋಗಿದ್ದಾರೆ. ಕೆಲವರು ಟ್ರೆಡಿಷನಲ್ ಗಾಗಿ ಹೋಗ್ತಾರೆ. ಅಂತರವನ್ನು ನೀವು ತಡೆಯೋಕೆ ಆಗಲ್ಲ ಎಂದು ಉಪಮುಖ್ಯಮಂತ್ರಿಗಳು ಹೇಳಿದ್ದಾರೆ.

ನೀವು ಏನೇ ಮಾಡಿದರೂ ಅವರನ್ನು ನಿಲ್ಲಸೋಕೆ ಆಗಲ್ಲ. ಅವರನ್ನು ಬಿಟ್ಟ ಬಿಡಿ ಎಂದು ಅಧಿಕಾರಿಗಳಿಗೆ ‍ಪರಮೇಶ್ವರ ಸಲಹೆ ನೀಡಿದ್ದಾರೆ. ಆದರೆ ಜಾಸ್ತಿ ಜನ ಗುಳೇ ಹೋಗದಂತೆ ನೀವು ನೊಡಕೋಬೇಕು. ಹಳ್ಳಿಗಳಲ್ಲಿ ವಯಸ್ಸಾದವರು ಇದ್ದಾರೆ. ಅವರಿಗೆ ಕೆಲಸ ಮಾಡೋಕೆ ಆಗಲ್ಲ. ವಯಸ್ಸಿದ್ದವರೂ ದುಡಿಯೋಕೆ ಹೋಗಿ ಬಿಟ್ಟಿದ್ದಾರೆ. ಯುವಕರನ್ನು ನಾವು ಆಚೆ ಹೋಗದಂತೆ ತಡಿಬೇಕು. ವಿಬಿಜಿ ರಾಮ್ ಜಿಯಲ್ಲಿ ಕೆಲಸ ಕೊಡಬೇಕು. ಕೆಲ ಕಡೆ ಅಧಿಕಾರಿಗಳು ಒಂದು ತಿಂಗಳು ಆದರೂ ಸಂಬಳ ಕೊಟ್ಟಿಲ್ಲ. ನೀವು ಕೆಲಸ ಮಾಡಿಸಿಕೊಂಡು ಕೂಲಿ ಕೊಡಲ್ಲ ಅಂದರೆ ಅವರೇನು ಮಾಡಬೇಕು. ಅವರಿಗೆ ಹಣ ಕೊಟ್ರೆ ಸಮಸ್ಯೆ ಆಗಲ್ಲ ಎಂದು ಸಚಿವರು ಹೇಳಿದ್ದಾರೆ.

ಪರಂ ಸ್ಪಷ್ಟನೆ

ಟ್ರೆಡಿಷನಲ್‌ಗಾಗಿ ಗುಳೆ ಹೋಗ್ತಾರೆ ಎಂಬ ವಿಚಾರ ವಿವಾದ ಆಗುತ್ತಿದ್ದಂತೆಯೇ ಸಮಜಾಯಿಸಿ ನೀಡಿದ್ದಾರೆ. ಕೆಲವರು ಸಾಮಾನ್ಯವಾಗಿ ಕಾಫಿತೋಟಕ್ಕೆ ಹೋಗ್ತಾರೆ‌. ನಾನು ಅದನ್ನು ಹೇಳಿದ್ದೇನೆ. ಟ್ರೆಡಿಷನಲ್ ಅಂದ್ರೆ ಸಂಪ್ರದಾಯಿಕವಾಗಿ ಹೋಗ್ತಾರೆ ಅಂತಾ ಹೇಳಿದೀನಿ. ನಾನ ಹೇಳಿದ್ದು,ಅರ್ಥ ಮಾಡಕೊಳ್ಳಿ. ಲಂಬಾಣಿ ಸಮುದಾಯ, ವರ್ಷಕ್ಕೊಮ್ಮೆ ಕಾಫಿತೋಟಕ್ಕೆ ಹೋಗ್ತಾರೆ. ಅದು ಸಂಪ್ರದಾಯ,ದುಡಿಮೆಯೇ ಸಂಪ್ರದಾಯ. ಅವರಿಗೆ ನಾನು ಆ ಅರ್ಥದಲ್ಲಿ ಹೇಳಿದ್ದೇನೆ ಎಂದು ‍ಪರಮೇಶ್ವರ ಸ್ಪಷ್ಟನೆ ನೀಡಿದರು.

ಬರ ಪರಿಶೀಲನೆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ತಾವು ಇವತ್ತು ಏನೆಲ್ಲ ಕ್ರಮ ತೆಗೆದುಕೊಂಡೆ ಎಂದು ಬರೆದುಕೊಂಡಿದ್ದಾರೆ. ಇಂದು ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಬರ ಪರಿಸ್ಥಿತಿ ಹಾಗೂ ಬರ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನಾ ಸಭೆ ನಡೆಸಿದೆ.

ಎರಡೂ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಲಭ್ಯತೆ, ಜಾನುವಾರುಗಳಿಗೆ ಮೇವಿನ ವ್ಯವಸ್ಥೆ, ಜನರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಪ್ಪಿಸಲು ಸ್ಥಳೀಯವಾಗಿ ಉದ್ಯೋಗಾವಕಾಶ ಕಲ್ಪಿಸುವುದು ಹಾಗೂ ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ರೈತರಿಗೆ ಅಗತ್ಯ ನೆರವು ಒದಗಿಸುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಸೂಕ್ತ ನಿರ್ದೇಶನಗಳನ್ನು ನೀಡಿದೆ.

ಬರ ಪರಿಸ್ಥಿತಿಯಿಂದ ಜನಸಾಮಾನ್ಯರು ಹಾಗೂ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕದಂತೆ ಮುನ್ನೆಚ್ಚರಿಕೆ ವಹಿಸಿ, ಅಗತ್ಯ ಪರಿಹಾರ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸೂಚಿಸಿದೆ.

ಸಭೆಯಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್‌ ತಂಗಡಗಿ, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಕೊಪ್ಪಳ ಜಿಲ್ಲಾಧಿಕಾರಿಗಳಾದ ಸುರೇಶ್ ಹಿಟ್ನಾಳ್, ರಾಯಚೂರು ಜಿಲ್ಲಾಧಿಕಾರಿಗಳಾದ ಪೂವಿತಾ, ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಒ ವರ್ಣೀತ್ ನೇಗಿ ಹಾಗೂ ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ ಈಶ್ವರ್ ಕುಮಾರ್ ಕಾಂದೂ ಉಪಸ್ಥಿತರಿದ್ದರು ಎಂದು ಬರೆದುಕೊಂಡಿದ್ದಾರೆ.

ಇತ್ತ ‍ಪರಮೇಶ್ವರ ಅವರ ಹೇಳಿಕೆ ಬಿಜೆಪಿ ನಾಯಕರಿಗೆ ಆಹಾರ ಆಗಿದೆ. ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಈ ಕಾರಣಕ್ಕೆ ಜನ ಗುಳೆ ಹೋಗ್ತಿದ್ದಾರೆ. ಆದೆ ಅದನ್ನು ಮಾನ್ಯ ಉಪಮುಖ್ಯಮಂತ್ರಿಗಳು ಲಘುವಾಗಿ ತೆಗೆದುಕೊಂಡು ಏನೇನೋ ಮಾತನ್ನಾಡುತ್ತಾರೆ ಎಂದಿದ್ದಾರೆ.

PREV
Read more Articles on
click me!

Recommended Stories

ಪರಪ್ಪನ ಅಗ್ರಹಾರ ಜೈಲಿನಿಂದಲೇ ಕೋರ್ಟ್‌ ದಾರಿ ತಪ್ಪಿಸಿದ ಕಿಲ್ಲಿಂಗ್‌ ಸ್ಟಾರ್‌ ದರ್ಶನ್‌, ಸೆಷನ್ಸ್‌ ಕೋರ್ಟ್‌ ಬೇಸರ
SSLC, ದ್ವಿತೀಯ PU ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ; ಈ ಬಾರಿ ಪರೀಕ್ಷೆಗಳು ಯಾವಾಗ ಆರಂಭ?