ರಾಮದುರ್ಗ: ಕಲುಷಿತ ನೀರು ಸೇವಿಸಿ ಕೆಲವರಿಗೆ ಕಿಡ್ನಿ ಸಮಸ್ಯೆ, ಬಾಗಲಕೋಟೆಯಲ್ಲಿ ಚಿಕಿತ್ಸೆ

By Kannadaprabha News  |  First Published Oct 30, 2022, 10:30 AM IST

ಕೆಲವರಿಗೆ ಕಿಡ್ನಿ ಸಮಸ್ಯೆ ಉಂಟಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆಗೆ ಕಳುಹಿಸಲಾಗಿದೆ


ರಾಮದುರ್ಗ(ಅ.30): ಕಲುಷಿತ ನೀರು ಸೇವಿಸಿ ವಾಂತಿ-ಭೇದಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೆಲವರು ಬಿಡುಗಡೆಯಾಗಿದ್ದು, ಇನ್ನೂ ಕೆಲವರಿಗೆ ಕಿಡ್ನಿ ಸಮಸ್ಯೆ ಉಂಟಾಗಿ ಬಾಗಲಕೋಟೆ ಕುಮಾರೇಶ್ವರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮೃತಪಟ್ಟು, 170ಕ್ಕೂ ಅಧಿಕ ಜನರು ವಾಂತಿ-ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇವರಲ್ಲಿ ಕೆಲವರಿಗೆ ಕಿಡ್ನಿ ಸಮಸ್ಯೆ ಉಂಟಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆಗೆ ಕಳುಹಿಸಲಾಗಿದೆ. 13 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ಒಬ್ಬರಿಗೆ ಆಪರೇಷನ್‌ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Tap to resize

Latest Videos

ಬೆಳಗಾವಿ: ಕಲುಷಿತ ನೀರು ಕುಡಿದು 2 ಸಾವು, 94 ಮಂದಿ ಅಸ್ವಸ್ಥ

ಶನಿವಾರ ಶಾಸಕ ಮಹಾದೇವಪ್ಪ ಯಾದವಾಡ ಅವರು ಮೃತಪಟ್ಟಶಿವಪ್ಪ ಯಂಡಿಗೇರಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್‌ ಮಲ್ಲಿಕಾರ್ಜುನ ಹೆಗ್ಗನ್ನವರ, ಪ್ರವೀಣ ಸಾಲಿ, ಗ್ರಾಪಂ ಅಧ್ಯಕ್ಷ ಭೀಮಪ್ಪ ದೊಡಮನಿ, ಜಾನಪ್ಪ ಹಕಾಟಿ, ಗೌಡಪ್ಪಗೌಡ ಪಾಟೀಲ, ಬಸಲಿಂಗಪ್ಪ ಹರಗುಟಗಿ, ಹಣಮಂತ ಅಂಗಡಿ, ಬಸುರಡ್ಡಿ ಜಾಯಿ, ಲಕ್ಷ್ಮಣ ಸಂಕದಾಳ, ಬಸಪ್ಪ ಬಟಕುರ್ಕಿ, ಗ್ರಾಪಂ ಸದಸ್ಯರು ಶೇಖಪ್ಪ ಕಾಯಿ, ಮಂಜು ಬಲ್ಕಿ, ವೈದ್ಯರಾದ ಮಂಜುನಾಥ ಭಜಂತ್ರಿ, ವೈದ್ಯಕೀಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಅಶೋಕ ಪಟ್ಟಣ ಭೇಟಿ:

ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿದ್ದವರ ಆಸ್ಪತ್ರೆಗೆ ಶನಿವಾರ ಮಾಜಿ ಶಾಸಕ, ಕೆಪಿಸಿಸಿ ಉಪಾಧ್ಯಕ್ಷ ಅಶೋಕ ಪಟ್ಟಣ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಹೂರ ಹಾಜಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಿ ಬಿ ರಂಗನಗೌಡ್ರ, ಯೂಥ್‌ ಕಾಂಗ್ರೆಸ್‌ ಅಧ್ಯಕ್ಷ ವಿಜಯಕುಮಾರ ರಾಠೋಡ, ನಗರ ಯೂಥ್‌ ಕಾಂಗ್ರೆಸ್‌ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಮಹಾಂತೇಶ ಉಮತಾರ, ಅರ್ಜುನ ಸಿಂಗಾಡಿ, ಗೋವಿಂದರಡ್ಡಿ ಜಾಯಿ, ಬಸವರಾಜ್‌ ಜಾಯಿ, ಮಹಮ್ಮದ ಆಶೀಮ್‌ ಹಾಜಿ, ರಮೇಶ ಬಂಡಿವಡ್ಡರ, ಆನಂದ ಲಮಾಣಿ, ರವಿ ನೆಲಗುಡ್ಡ, ಕೃಷ್ಣ ರಾಠೋಡ ಇತರರು ಇದ್ದರು.
 

click me!