ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದ ಘಟನೆ
ಚಿಕ್ಕಮಗಳೂರು(ಅ.30): 14 ವರ್ಷದ ಬಾಲಕಿಯೊಬ್ಬಳು ಸಾವಿನಲ್ಲೂ ಸಾರ್ಥಕತೆ ಮೆರೆದ ಘಟನೆ ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಿನ್ನೆ(ಶನಿವಾರ) ನಡೆದಿದೆ. ಮೂಡಿಗೆರೆ ಪಟ್ಟಣದ ವೈಷ್ಣವಿ (14) ಹೃದಯಾಘಾತದಿಂದ ಸಾವನ್ನಪ್ಪಿದ್ದಳು. ಮೃತ ಬಾಲಕಿ ವೈಷ್ಣವಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಮೃತಪಟ್ಟ ತಕ್ಷಣ ಕಣ್ಣು ದಾನ ಮಾಡಲು ಕುಟುಂಬಸ್ಥರು ಮುಂದಾಗಿದ್ದರು. ಮೃತ ಬಾಲಕಿ ಕಣ್ಣು ದಾನ ಮಾಡಲು ಮುಂದಾದ್ರೂ ಕೂಡ ಪಡೆಯಲು ಹಿಂದೇಟು ಆಸ್ಪತ್ರೆಯವರು ಬಂದಿರಲಿಲ್ಲ. ತಡರಾತ್ರಿಯಾದ್ರೂ ಕಣ್ಣು ದಾನ ಪಡೆಯಲು ಬಾರದ ಹಿನ್ನಲೆಯಲ್ಲಿ ಅಧಿಕಾರಿಗಳು ಹಾಗೂ ಸಂಸ್ಥೆಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್ ರಾಜ್‌ಕುಮಾರ್
ಸ್ಥಳಿಯರ ಆಕ್ರೋಶದ ನಂತರ ಆಸ್ಪತ್ರೆಯ ತಂಡ ಆಗಮಿಸಿತ್ತು. ತಡರಾತ್ರಿ ಜನಾಕ್ರೋಶದ ನಡುವೆಯೂ ನೇತ್ರಾದಾನ ಮಾಡಲಾಗಿದೆ.