ಸನಾತನ ಧರ್ಮದ ಬಗ್ಗೆ ಕೆಲವರಿಗೆ ಸರಿಯಾಗಿ ಗೊತ್ತಿಲ್ಲ: ರಾಯರೆಡ್ಡಿ

Published : Sep 17, 2023, 08:26 AM IST
ಸನಾತನ ಧರ್ಮದ ಬಗ್ಗೆ ಕೆಲವರಿಗೆ ಸರಿಯಾಗಿ ಗೊತ್ತಿಲ್ಲ: ರಾಯರೆಡ್ಡಿ

ಸಾರಾಂಶ

ಸನಾತನ ಧರ್ಮವೆಂದರೆ ಪುರಾತನ, ಶಾಶ್ವತ ಧರ್ಮವೆಂದರ್ಥ. ಇದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಮಾತನಾಡುತ್ತಿರುವುದು ಸರಿಯಲ್ಲ. ಯಾರೋ ಒಬ್ಬ ರಾಜಕಾರಣಿ ಸನಾತನ ಧರ್ಮ ಕುರಿತು ಮಾತನಾಡಿದ ಎನ್ನುವ ವಿಷಯವನ್ನೇ ದೊಡ್ಡದಾಗಿ ಎಲ್ಲೆಡೆ ವ್ಯಾಪಕವಾಗಿ ಅರ್ಥವಿಲ್ಲದ ರೀತಿಯಲ್ಲಿ ಚರ್ಚೆ ನಡೆಸುತ್ತಿರುವುದು ಸರಿಯಲ್ಲ. ನಾನು ಯಾವ ಜಾತಿ, ಧರ್ಮಕ್ಕೆ ಸೇರಿದವನಲ್ಲ; ಮನುಷ್ಯ ಜಾತಿಗೆ ಸೇರಿದ್ದೇನೆ: ಶಾಸಕ ಬಸವರಾಜ ರಾಯರೆಡ್ಡಿ 

ಯಲಬುರ್ಗಾ(ಸೆ.17): ಸನಾತನ ಧರ್ಮದ ಬಗ್ಗೆ ಯಾರಿಗೂ ಸರಿಯಾಗಿ ಗೊತ್ತಿಲ್ಲ. ಏನೇನೋ ಮಾತಾಡ್ತಾರೆ. ನಾನು ಎಲ್ಲ ಧರ್ಮಗಳ ಬಗ್ಗೆ ಸಾಕಷ್ಟು ಓದಿಕೊಂಡಿದ್ದೇನೆ. ಯಾರಾದರೂ ಬಂದು ಆಯಾ ಧರ್ಮಗಳ ಬಗ್ಗೆ ಕೇಳಲಿ, ನಿರರ್ಗಳವಾಗಿ ಮಾತನಾಡುವೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

ಪಟ್ಟಣದ ಬಯಲು ರಂಗಮಂದಿರದಲ್ಲಿ ಶನಿವಾರ ತಾಲೂಕಾಡಳಿತ, ಯಲಬುರ್ಗಾ ಮತ್ತು ಕುಕನೂರ ಕುಳುವ ಮಹಾಸಂಘಗಳ ತಾಲೂಕು ಘಟಕಗಳ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ಕಾಯಕಯೋಗಿ ಶಿವಶರಣ ನುಲಿಯ ಚಂದಯ್ಯನವರ 916ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಸರ್ಕಾರದಲ್ಲಿ ಹಣದ ಕೊರತೆ ಇದೆಯಾ?: ಕಾಂಗ್ರೆಸ್‌ ಶಾಸಕ ರಾಯರೆಡ್ಡಿ ಹೇಳಿದ್ದಿಷ್ಟು

ಸನಾತನ ಧರ್ಮವೆಂದರೆ ಪುರಾತನ, ಶಾಶ್ವತ ಧರ್ಮವೆಂದರ್ಥ. ಇದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಮಾತನಾಡುತ್ತಿರುವುದು ಸರಿಯಲ್ಲ. ಯಾರೋ ಒಬ್ಬ ರಾಜಕಾರಣಿ ಸನಾತನ ಧರ್ಮ ಕುರಿತು ಮಾತನಾಡಿದ ಎನ್ನುವ ವಿಷಯವನ್ನೇ ದೊಡ್ಡದಾಗಿ ಎಲ್ಲೆಡೆ ವ್ಯಾಪಕವಾಗಿ ಅರ್ಥವಿಲ್ಲದ ರೀತಿಯಲ್ಲಿ ಚರ್ಚೆ ನಡೆಸುತ್ತಿರುವುದು ಸರಿಯಲ್ಲ. ನಾನು ಯಾವ ಜಾತಿ, ಧರ್ಮಕ್ಕೆ ಸೇರಿದವನಲ್ಲ; ಮನುಷ್ಯ ಜಾತಿಗೆ ಸೇರಿದ್ದೇನೆ ಎಂದರು.

ಕೆಲವರು ಜಾತಿ, ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ದೇಶ, ರಾಜ್ಯದ ಸಮಗ್ರ ಅಭಿವೃದ್ಧಿಗೆ ಮಾರಕವಾಗಲಿದೆ. ಇಂತಹ ಜಾತಿ ವ್ಯವಸ್ಥೆ ನಿಮೂರ್ಲನೆಗೆ ಎಲ್ಲರೂ ಮುಂದಾಗಬೇಕು. ಯಾವ ಬಸವಾದಿ ಶರಣರು ಜಾತಿ ಧರ್ಮದ ಹೆಸರಿನಿಂದ ಬಂದವರಲ್ಲ. ಅವರು ತಮ್ಮ ಕಾಯಕದ ಮೂಲಕ ಸಮಾಜದ ಮೌಢ್ಯ ನಿರ್ಮೂಲನೆ ಮಾಡಿ ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ. ಬಸವಾದಿ ಶರಣರು ಜಾತ್ಯಾತೀತ ಸಮಾಜ ಕಟ್ಟಬೇಕೆನ್ನುವ ಕನಸು ಹೊಂದಿದ್ದರು. ಆದರೆ ಎಲ್ಲ ವರ್ಗದವರು ಜಾತಿ, ಧರ್ಮದ ಹೆಸರಿನಲ್ಲಿ ಶರಣರ ಜಯಂತಿಗಳನ್ನು ಮಾಡುತ್ತಿರುವುದು ಸರಿಯಲ್ಲ. ಜಾತಿ ವ್ಯವಸ್ಥೆ ನಿಮೂರ್ಲನೆಗೆ ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಸಮುದಾಯದವರು ಹೆಚ್ಚು ಶಿಕ್ಷಣವಂತರಾದಾಗ ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಎಲ್ಲರೂ ಶಿಕ್ಷಣ ಪಡೆಯಬೇಕು ಎಂದರು.

ಕುಳುವ ಸಮಾಜದ ತಾಲೂಕಾಧ್ಯಕ್ಷ ಡಾ.ಶೇಖರ ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದಕುಮಾರ ಏಕಲವ್ಯ ಹಾಗೂ ರಾಷ್ಟ್ರೀಯ ಸಂಚಾಲಕ ಪಲ್ಲವಿ ಮತ್ತು ಮಲ್ಲಿಕಾರ್ಜುನ ಮಾನ್ಪಡೆ ಮಾತನಾಡಿದರು.
ಅತಿಥಿಗಳಾಗಿ ಗಣ್ಯರಾದ ಬಸವಲಿಂಗಪ್ಪ ಭೂತೆ, ವೀರನಗೌಡ ಬಳೂಟಗಿ, ಯಂಕಣ್ಣ ಯರಾಶಿ, ರಾಮಣ್ಣ ಭಜಂತ್ರಿ, ಹನುಮಂತಗೌಡ ಪಾಟೀಲ, ಮಂಜುನಾಥ ಕಡೇಮನಿ, ಬಸವರಾಜ ಉಳ್ಳಾಗಡ್ಡಿ, ಆದರ್ಶ ಯಲ್ಲಪ್ಪ, ಮುಖ್ಯಾಧಿಕಾರಿ ನಾಗೇಶ, ಪಪಂ ಸದಸ್ಯರಾದ ಹನುಮಂತ ಭಜಂತ್ರಿ, ರೀಯಾಜ್ ಖಾಜಿ, ರೇವಣೆಪ್ಪ ಹಿರೇಕುರಬರ, ವಿರುಪಾಕ್ಷಪ್ಪ ಭಜಂತ್ರಿ, ನೀಲಕಂಠಪ್ಪ ಮಸ್ಕಿ, ಸುಭಾಷ ಭಜಂತ್ರಿ, ಹುಲಗಪ್ಪ ಬಂಡಿವಡ್ಡರ, ಬಸವರಾಜ ಭಜಂತ್ರಿ ಮತ್ತಿತರರು ಇದ್ದರು.

PREV
Read more Articles on
click me!

Recommended Stories

ಮಹಿಳೆ ಬಲಿ ಪಡೆದ ಚಿರತೆ ಕೊನೆಗೂ ಸೆರೆ, ದಾಳಿ ಮಾಡಿದ ಅದೇ ಸ್ಥಳದಲ್ಲೇ ಕಾರ್ಯಾಚರಣೆ
ಕುಕ್ಕೆ ದೇಗುಲದ ತೆರಿಗೆ ವಿವಾದ ತೆರೆ, ನೋಟಿಸ್‌ ಬೆನ್ನಲ್ಲೇ ಗ್ರಾಮ ಪಂಚಾಯತ್‌ಗೆ 2.67 ಕೋಟಿ ಪಾವತಿಸಿದ ಆಡಳಿತ ಮಂಡಳಿ