ಲಾಕ್‌ಡೌನ್‌ ಸಂಕಷ್ಟ: 3000 ಕೋಳಿ ದಫನ ಮಾಡಿದ ಕುಕ್ಕುಟೋದ್ಯಮಿ ಆತ್ಮಹತ್ಯೆ

By Kannadaprabha News  |  First Published Apr 23, 2020, 7:21 AM IST

ವ್ಯವಹಾರದಲ್ಲಿ ನಷ್ಟದಿಂದ ಕೋಳಿ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಕೋಳಿ ಸಾಕಣೆ ವೆಚ್ಚವನ್ನು ಭರಿಸಲಾಗದೆ 2 ಲಕ್ಷ ರು. ಮೌಲ್ಯದ 3000 ಕೋಳಿಗಳನ್ನು ಧಪನ ಮಾಡಿದ್ದರು.


ಡುಪಿ(ಏ.23): ಅಮಾಸೆಬೈಲು ಗ್ರಾಮದ ಬೊಳ್ಮನೆ ಎಂಬಲ್ಲಿ ವ್ಯವಹಾರದಲ್ಲಿ ನಷ್ಟದಿಂದ ಕೋಳಿ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ. ಗಣೇಶ ನಾಯ್ಕ (37) ಮೃತರು.

ಅವರು ಕೋಳಿ ಪಾರಂ ನಡೆಸುತ್ತಿದ್ದು, ಲಾಕ್‌ಡೌನ್‌ ನಂತರ ಕೋಳಿಗಳ ಆಹಾರ ಸರಬರಾಜು ಆಗಿರಲಿಲ್ಲ. ಈ ಬಗ್ಗೆ ಕೋಳಿ ಪೂರೈಸಿದ ಕಂಪನಿಯವರನ್ನು ಕೇಳಿದಾಗ ಅವರು ಕೋಳಿಗಳನ್ನು ಧಪನ ಮಾಡುವಂತೆ ತಿಳಿಸಿದ್ದು, ಅದರಂತೆ ಗಣೇಶ ನಾಯ್ಕ ಅವರು ಕೋಳಿ ಸಾಕಣೆ ವೆಚ್ಚವನ್ನು ಭರಿಸಲಾಗದೆ 2 ಲಕ್ಷ ರು. ಮೌಲ್ಯದ 3000 ಕೋಳಿಗಳನ್ನು ಧಪನ ಮಾಡಿದ್ದರು.

Latest Videos

undefined

ಕೊರೋನಾ ವಾರಿಯರ್‌ಗೆ ಜೀವ ಬೆದರಿಕೆ..!

ಆದರೆ ಈಗ ವ್ಯವಹಾರದಲ್ಲಿ ನಷ್ಟಆಗಿದ್ದರಿಂದ ಮನನೊಂದು ಮಂಗಳವಾರ ಸಂಜೆ ಬೊಳ್ಮನೆ ಕ್ರಾಸ್‌ ಬಳಿ ಸರ್ಕಾರಿ ಕಾಡಿನಲ್ಲಿ ನೈಲಾನ್‌ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಅವರ ತಮ್ಮ ದಿನೇಶ್‌ ನೀಡಿದ ದೂರಿನಂತೆ ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]

click me!