'ಕೆಲವರು ಟ್ರೆಡಿಷನ್‌ಗೆ ಗುಳೇ ಹೋಗ್ತಾರೆ' ಹೇಳಿಕೆಗೆ ಡಿಸಿಎಂ ಡಾ ಜಿ ಪರಮೇಶ್ವರ್ ಸ್ಪಷ್ಟನೆ

Kannadaprabha News   | Kannada Prabha
Published : Oct 09, 2026, 08:20 AM IST
DCM Dr G Parameshwara statement

ಸಾರಾಂಶ

ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದಾಗಿ ಜನರು ಉದ್ಯೋಗ ಅರಸಿ ಗುಳೆ ಹೋಗುತ್ತಿದ್ದಾರೆ. ಕೆಲವರು ಸಾಂಪ್ರದಾಯಿಕವಾಗಿ ಗುಳೆ ಹೋದರೆ, ಉಳಿದವರನ್ನು ತಡೆಯಲು ಸ್ಥಳೀಯವಾಗಿ ಉದ್ಯೋಗ ಕಲ್ಪಿಸುವಂತೆ ಡಿಸಿಎಂ ಡಾ. ಜಿ.ಪರಮೇಶ್ವರ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೊಪ್ಪಳ (ಅ.9): ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದಾಗಿ ಹಲವರು ಉದ್ಯೋಗ ಅರಸಿ ಗುಳೆ ಹೋಗುತ್ತಿದ್ದಾರೆ. 40–45 ವರ್ಷದವರು ಕೆಲಸಕ್ಕಾಗಿ, ಕೆಲವರು ಕಬ್ಬು ಕಟಾವು ಮಾಡಲು ಹಾಗೂ ಇನ್ನು ಕೆಲವರು ಬೆಂಗಳೂರು, ಗೋವಾ ಸೇರಿದಂತೆ ವಿವಿಧೆಡೆ ಉದ್ಯೋಗಕ್ಕಾಗಿ ಗುಳೆ ಹೋಗುವುದು ಸಂಪ್ರದಾಯವಾಗಿದೆ ಎಂದಿದ್ದ ಡಿಸಿಎಂ ಪರಮೇಶ್ವರ್ ಅವರು ವಿರೋಧ ವ್ಯಕ್ತವಾಗುತ್ತಿದ್ದಂತೆ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

ತಪ್ಪು ತಿಳ್ಕೊಬೇಡಿ ನಾ ಹೇಳಿದ್ದು ಹಂಗಲ್ಲ ಎಂದ ಡಿಸಿಎಂ

ಟ್ರೆಡಿಷನ್ ಎಂದರೆ ನೀವು ತಪ್ಪಾಗಿ ಅರ್ಥೈಸಬೇಡಿ, ಬರ ಇಲ್ಲದೆ ಇದ್ದರೂ ನಮ್ಮಲ್ಲಿಯೂ ಕಾಫಿ ತೋಟ, ಕಬ್ಬು ಕಡಿಯುವುದಕ್ಕಾಗಿ ಪ್ರತಿ ವರ್ಷವೂ ಗುಳೆ ಹೋಗುತ್ತಾರೆ. ಅದನ್ನೇ ಸಾಂಪ್ರದಾಯಿಕ ಗುಳೆ ಎಂದಿದ್ದೇನೆ ಎಂದು ಡಾ। ಜಿ.ಪರಮೇಶ್ವರ್‌ ಸ್ಪಷ್ಟನೆ ನೀಡಿದ್ದಾರೆ.

ಕೊಪ್ಪಳಕ್ಕೆ ಭೇಟಿ ನೀಡಿದ್ದ ವೇಳೆ ಹೇಳಿದ್ದೇನು?

ಗುರುವಾರ ನಡೆದ ಬರ ಪರಿಸ್ಥಿತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೆಲವರು ಟ್ರೆಡಿಷನ್ನಾಗಿ ಗುಳೆ ಹೋಗುತ್ತಾರೆ. ಅವರನ್ನು ಏನೇ ಮಾಡಿದರೂ ತಡೆಯಲು ಸಾಧ್ಯವಿಲ್ಲ. ಅಂಥವರನ್ನು ಬಿಟ್ಟುಬಿಡಿ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಳೆ ಹೋಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಗ್ರಾಮಗಳಲ್ಲಿ ವಯೋವೃದ್ಧರು ಉಳಿದಿದ್ದು, ಅವರಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ದುಡಿಯುವ ವಯಸ್ಸಿನವರೂ ಕೆಲಸ ಅರಸಿ ಹೊರಗೆ ತೆರಳಿದ್ದಾರೆ. ಯುವಕರು ಹೊರ ರಾಜ್ಯ ಅಥವಾ ಜಿಲ್ಲೆಗಳಿಗೆ ಗುಳೆ ಹೋಗದಂತೆ ಸ್ಥಳೀಯವಾಗಿಯೇ ಉದ್ಯೋಗ ಕಲ್ಪಿಸಬೇಕು ಎಂದರು.

ವಿಬಿ ಜಿ ರಾಮ್‌ ಜಿ ಯೋಜನೆಯಡಿ ಕೆಲಸ ನೀಡಿ

ವಿಬಿ ಜಿ ರಾಮ್‌ ಜಿ ಯೋಜನೆಯಡಿ ಕೆಲಸ ನೀಡಬೇಕು. ಕೆಲವು ಕಡೆಗಳಲ್ಲಿ ಕೆಲಸ ಮಾಡಿಸಿಕೊಂಡು ಒಂದು ತಿಂಗಳಾದರೂ ಕೂಲಿ ಪಾವತಿಯಾಗಿಲ್ಲ ಎಂಬ ದೂರುಗಳಿವೆ. ಕೆಲಸ ಮಾಡಿಸಿಕೊಂಡು ಕೂಲಿ ನೀಡದಿದ್ದರೆ ಕಾರ್ಮಿಕರು ಏನು ಮಾಡಬೇಕು? ಅವರಿಗೆ ಸಮಯಕ್ಕೆ ಸರಿಯಾಗಿ ಹಣ ಪಾವತಿಸಿದರೆ ಸಮಸ್ಯೆ ಆಗುವುದಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿದರು.

PREV
Read more Articles on
click me!

Recommended Stories

ಮೈಸೂರು ದಸರಾ: ಆನೆ ಮೇಲಿದ್ದ 600 ಕೆಜಿ ಮರದ ಅಂಬಾರಿ ಅರ್ಧಕ್ಕೆ ಕೆಳಗಿಳಿಸಿದ ಸಿಬ್ಬಂದಿ; ಕಾರಣ ರಿವೀಲ್
Attibele petrol bunk fire: ಅತ್ತಿಬೆಲೆ ಪೆಟ್ರೋಲ್ ಬಂಕ್‌ಗೆ ಜಾಗ್ವಾರ್ ಕಾರು ಡಿಕ್ಕಿ; ಇಡೀ ಬಂಕೇ ಭಸ್ಮ!