ಪ್ರೀತಿಸಿದ ಯುವತಿ ತಂದೆಗೆ ಗುಂಡೇಟು : ಯೋಧ ಅರೆಸ್ಟ್

By Web Desk  |  First Published May 25, 2019, 12:17 PM IST

ಪ್ರೀತಿ ವಿಚಾರವಾಗಿ ಮಾತಿನ ಚಕಮಕಿ ನಡೆದು ಯುವತಿ ತಂದೆಗೆ ಶೂಟ್ ಮಾಡಿದ ಯೋಧನನ್ನು ಬಂಧಿಸಲಾಗಿದೆ. 


ದಾವಣಗೆರೆ : ಪ್ರೀತಿಯ ವಿಚಾರವಾಗಿ ವ್ಯಕ್ತಿಯೊಬ್ಬನ ಮೇಲೆ ಯೋಧನೋರ್ವ ಗುಂಡು ಹಾರಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.  

ಹೊನ್ನಾಳಿ ತಾಲೂಕಿನ ಬಿದರಘಟ್ಟೆ ಗ್ರಾಮದ ಯೋಧ ದೇವರಾಜ್ ಅದೇ ಗ್ರಾಮದ ಪ್ರಕಾಶ್ ಎನ್ನುವರ ಮಗಳನ್ನು‌ ಪ್ರೀತಿಸುತ್ತಿದ್ದರು. 

Tap to resize

Latest Videos

ರಜೆ ಮೇಲೆ ಗ್ರಾಮಕ್ಕೆ ಬಂದಿದ್ದ ವೇಳೆ ಯೋಧ ದೇವರಾಜ್  ಹಾಗೂ ಯುವತಿಯ ತಂದೆಯ ನಡುವೆ ಮಾತಿನ ಚಕಮಕಿ ನಡೆದಿದೆ.  ಈ ವೇಳೆ ಕೋಪಗೊಂಡು ಯುವತಿಯ ತಂದೆ ಪ್ರಕಾಶ್ ಮೇಲೆ ಯೋಧ ಗುಂಡು ಹಾರಿಸಿದ್ದಾರೆ. 

ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ಪ್ರಕಾಶ್  ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ.

 ಈ ಘಟನೆ ಬಳಿಕ ಹೊನ್ನಾಳಿ ಪೊಲೀಸರು ಯೋಧನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

click me!