ಬಾಗಲಕೋಟೆಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ: ಸಚಿವ ಸಿ.ಸಿ. ಪಾಟೀಲ ಧ್ವಜಾರೋಹಣ

By Suvarna News  |  First Published Nov 1, 2022, 5:48 PM IST

ಮುಳುಗಡೆ ನಗರಿ ಬಾಗಲಕೋಟೆಯಲ್ಲಿ  67ನೇ ಕನ್ನಡ ರಾಜ್ಯೋತ್ಸವವನ್ನ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ  ರಾಜ್ಯೋತ್ಸವ ನಿಮಿತ್ತ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಧ್ವಜಾರೋಹಣ ನೇರವೇರಿಸಿದರು.


ಬಾಗಲಕೋಟೆ: ಮುಳುಗಡೆ ನಗರಿ ಬಾಗಲಕೋಟೆಯಲ್ಲಿ  67ನೇ ಕನ್ನಡ ರಾಜ್ಯೋತ್ಸವವನ್ನ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ  ರಾಜ್ಯೋತ್ಸವ ನಿಮಿತ್ತ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಧ್ವಜಾರೋಹಣ ನೇರವೇರಿಸಿದರು.

ನಂತರ ಸಚಿವರು ಪರೇಡ್  ಗೌರವ ವಂದನೆ ಸ್ವೀಕರಿಸಿದರು. ಈ ಮಧ್ಯೆ ಕನ್ನಡ ರಾಜ್ಯೋತ್ಸವ ಹಿನ್ನೆಲೆ ನವನಗರದ ಪ್ರಮುಖ ರಸ್ತೆಯಲ್ಲಿ ಕಲಾತಂಡಗಳ ಮೆರವಣಿಗೆಯು ಜನರ ಮನಸೂರೆಗೊಂಡಿತು. ನಂತರ ವಿವಿಧ ಶಾಲೆಯ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

Tap to resize

Latest Videos

undefined

ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ಕ್ರಮ

ಇನ್ನು ಧ್ವಜಾರೋಹಣ (Flag Hosting) ನೇರವೇರಿಸಿದ ನಂತರ ಸಚಿವರು ಮಾತನಾಡಿ, ಲೋಕೋಪಯೋಗಿ ಇಲಾಖೆಯಿಂದ ಜಿಲ್ಲೆಯಲ್ಲಿ ಗ್ರಾಮೀಣ ರಸ್ತೆಯಿಂದ ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಒಟ್ಟು 565 ಕಿ ಮೀ ಹಾಗೂ ಜಿಲ್ಲಾ ಮುಖ್ಯ ರಸ್ತೆಯಿಂದ ರಾಜ್ಯ ಹೆದ್ದಾರಿಗಳನ್ನಾಗಿ  (National Highway) ಒಟ್ಟು 210 ಕಿ ಮೀ ಉದ್ದದ ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. 237 ಕೋಟಿ ರೂ. ಅನುದಾನದಲ್ಲಿ 319 ಕಿ.ಮೀ ರಾಜ್ಯ ಹೆದ್ದಾರಿ (State Highway) ಹಾಗೂ ಜಿಲ್ಲಾ ಮುಖ್ಯ ರಸ್ತೆಗಳನ್ನು ಸುಧಾರಣೆಗೊಳಿಸಲಾಗುತ್ತದೆ ಎಂದರು‌.

ಮುಳುಗಡೆಯ 3ನೇ ಹಂತ ಶೀಘ್ರ ಅಭಿವೃದ್ಧಿ

ಇದೇ ವೇಳೆ ಬಾಗಲಕೋಟೆ (Bagalkote) ನವನಗರದ (Navanagara) ಹಂತ -3 ರಲ್ಲಿ ಒಟ್ಟು 1,678 ಎಕರೆ ಜಮೀನಿನಲ್ಲಿ 11 ಸೆಕ್ಟರ್ ಗಳನ್ನು ಅಭಿವೃದ್ಧಿಪಡಿಸಿ, ಮೂಲಭೂತ ಸೌಕರ್ಯ ಒದಗಿಸಲು ಟೆಂಡರ್ ಕರೆಯಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಮುಳುಗಡೆ ಮುಖ್ಯ ಸಂತ್ರಸ್ತರಿಗೆ, ಬಾಡಿಗೆದಾರರಿಗೆ ವಯಸ್ಕ ಮಕ್ಕಳಿಗೆ ಹೀಗೆ ಒಟ್ಟು 2128 ಹಕ್ಕು ಪತ್ರಗಳ ವಿತರಣೆ ಮಾಡಲಾಗಿದೆ ಎಂದು ಸಚಿವರಾದ ಸಿ ಸಿ ಪಾಟೀಲ ಹೇಳಿದರು. ಹೀಗೆ ಜಿಲ್ಲೆಯಲ್ಲಿ ವಿವಿದ ಯೋಜನೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದರು. 

ಉಸ್ತುವಾರಿಯಾಗಿ ಜಿಲ್ಲೆಗೆ ನಿರಂತರ ಹಾಜರಿ
ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಚಿವರಾದ ಸಿ ಸಿ ಪಾಟೀಲ (CC Patil) ಮಾತನಾಡಿ,ಜಿಲ್ಲಾ ಉಸ್ತುವಾರಿ ಆಗಿ, ಬರುವುದು ವಿಳಂಬ ಆಗಿದೆ ನಿಜ, ಆದ್ರೆ ನಾನೇನು ಸುಳ್ಳು ಹೇಳಲ್ಲ. ಮುಂದಿನ ದಿನಗಳಲ್ಲಿ ಆ ಭಾವನೆಯನ್ನು ನಾನು ಹೊಡೆದಾಕುತ್ತೇನೆ. ನವೆಂಬರ್ 8 ಅಥವಾ 10 ರಂದು ಕೆಡಿಪಿ ಸಭೆ ಮಾಡುತ್ತೇನೆ. ತಿಂಗಳಲ್ಲಿ ಕನಿಷ್ಠ ಎರಡು ಬಾರಿ ಜಿಲ್ಲೆಗೆ ಬರುತ್ತೇನೆ ಎಂದು ಭರವಸೆ ನೀಡಿದರು.

ರೈತರ ಸಮಸ್ಯೆ ಇತ್ಯರ್ಥಕ್ಕೆ ಶೀಘ್ರ ಸಭೆ
ಇದೇ ಸಮಯದಲ್ಲಿ,ಕಬ್ಬು ಬೆಳೆಗಾರರ ಸಮಸ್ಯೆ ವಿಚಾರವಾಗಿ ಮಾತನಾಡಿ, ಉನ್ನತ ಮಟ್ಟದಲ್ಲಿ ಈ ವಿಷಯ ಚರ್ಚೆ ಆಗಬೇಕು. ಕಬ್ಬು ಬೆಳೆಗಾರರ ಜೊತೆಗೆ ಚರ್ಚೆ ಕೂಡಾ ಮಾಡುತ್ತೇನೆ. ರೈತರ ಮನವಿ, ಬೇಡಿಕೆಗಳನ್ನು ತೆಗೆದುಕೊಂಡು ಸಕ್ಕರೆ ಸಚಿವ, ಸಿಎಂ ಜೊತೆಗೆ ಚರ್ಚೆ ಮಾಡಿ, ಸಮಸ್ಯೆ ಪರಹಾರ ಮಾಡಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದರು. ಭ್ರಷ್ಟಾಚಾರದ ಬಗ್ಗೆ ಸಿದ್ದರಾಮಯ್ಯ ಬಿಜೆಪಿಗರು ಒಬ್ಬರಿಗೊಬ್ಬರು ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ. ತನಿಖೆ ನಡೆಯುತ್ತದೆಯೋ ಅಥವಾ ಹೀಗೆ ಮುಂದುವರೆಯಿತ್ತೋ ಇದಕ್ಕೆ ತಾರ್ಕಿಕ ಅಂತ್ಯ ಯಾವಾಗ ಎಂಬ ಪ್ರಶ್ನೆಗೆ, ಚುನಾವಣೆಯಲ್ಲಿ ಜನರು ತಾರ್ಕಿಕ ಅಂತ್ಯ ಕೊಡುತ್ತಾರೆ ಎಂದರು.

ಚಿಕ್ಕಮಗಳೂರು: ಕರ್ನಾಟಕ ರಾಜ್ಯೋತ್ಸವದ ವೇದಿಕೆಗೆ ನುಗ್ಗಲು ಯತ್ನ, ಪ್ರತಿಭಟನಾನಿರತರ ಬಂಧನ

ಸಿಎಂ ಜೊತೆ ಚರ್ಚಿಸಿ ಚಾಲುಕ್ಯ ಉತ್ಸವ
ಇದೇ ಸಮಯದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಜಿಲ್ಲೆಯಲ್ಲಿ ಚಾಲುಕ್ಯ ಉತ್ಸವ ಸೇರಿದಂತೆ ಇತರ ಉತ್ಸವ ನಡೆದಿಲ್ಲ. ಈ ಬಾರಿಯಾದರೂ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಈ ಬಗ್ಗೆ ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾದ ಸುನೀಲಕುಮಾರ್ (Sunil Kumar) ಜೊತೆಗೆ ಹಾಗೂ ಮುಖ್ಯಮಂತ್ರಿ ಗಳ ಜೊತೆಗೆ ಚರ್ಚೆ ಮಾಡಿ, ಈ ಬಾರಿ ಉತ್ಸವ ನಡೆಯುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕರ್ನಾಟಕ ರಾಜ್ಯೋತ್ಸವದಂದೇ ಎಂಇಎಸ್ ಪುಂಡಾಟ: ಬೆಳಗಾವಿಯಲ್ಲಿ ಕರಾಳ ದಿನಾಚರಣೆ

ಬೆಂಗಳೂರಿಗೆ ಹೋದ ಬಳಿಕ ಸಂಬಂಧದಪಟ್ಟವರ ಜೊತೆಗೆ ಚರ್ಚೆ ಮಾಡಿ, ಚಾಲುಕ್ಯ ಉತ್ಸವ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು. ವಿಜಯಪುರ ಶಾಸಕ ಯತ್ನಾಳ ಅವರಿಹೆ ಸಂಬಂಧಿಸಿದ ಪ್ರಶ್ನೆ ಕೇಳುತ್ತಲೇ, ವಿಜಯಪುರ ಮಹಾ ನಗರ ಪಾಲಿಕೆಯಲ್ಲಿ ಬಿಜೆಪಿ ಪಕ್ಷ ಜಯಭೇರಿ ಗಳಿಸಿದೆ. ಅವರು ಪಕ್ಷಕ್ಕೆ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ವೀರಣ್ಣ ಚರಂತಿಮಠ, ಎಂಎಲ್ಸಿ ಪಿ.ಹೆಚ್.ಪೂಜಾರ (PH Pujara)ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

click me!