ಪತ್ನಿ ಸಾವು... ಐದು ವರ್ಷದ ಕಂದನನ್ನು ಕೊಂದು ನೇಣಿಗೆ ಶರಣಾದ ತಂದೆ

By Suvarna News  |  First Published Nov 1, 2022, 5:26 PM IST

ಮಗನ ಸಾಯಿಸಿ ತಂದೆಯೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಬಳ್ಳಾರಿ ತಾಲೂಕಿನ ಕೊಳಗಲ್ ಗ್ರಾಮದಲ್ಲಿ  ನಡೆದಿದೆ.


ಬಳ್ಳಾರಿ: ಮಗನ ಸಾಯಿಸಿ ತಂದೆಯೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಬಳ್ಳಾರಿ ತಾಲೂಕಿನ ಕೊಳಗಲ್ ಗ್ರಾಮದಲ್ಲಿ  ನಡೆದಿದೆ. 32 ವರ್ಷದ ಯಂಕಪ್ಪ ಈಡಿಗೇರ್  ಆತ್ಮಹತ್ಯೆ ಮಾಡಿಕೊಂಡ ತಂದೆ. ತನ್ನ ಐದು ವರ್ಷದ ಮಗ ವಿಜಯ್‌ನನ್ನು ನೀರಿನಲ್ಲಿ ಮುಳುಗಿಸಿ ತಂದೆ ಯಂಕಪ್ಪ ಈಡಿಗೇರ್  ಕೊಲೆ ಮಾಡಿದ್ದಾನೆ. ಸಪ್ಟೆಂಬರ್ 14 ರಂದು  ಯಂಕಪ್ಪ ಈಡಿಗೇರ್ ಪತ್ನಿ ಸಾವಿಗೀಡಾಗಿದ್ದರು. ಜಮೀನಿಗೆ ತೆರಳುವ ವೇಳೆ ಆಟೋ ಕಾಲುವೆಗೆ ಮಗುಚಿ ಬಿದ್ದ ಪರಿಣಾಮ ಪತ್ನಿ ಹುಲಿಗೆಮ್ಮ ಮೃತಪಟ್ಟಿದ್ದರು. ಪತ್ನಿಯ ನಿಧನದ ನಂತರ ಯಂಕಪ್ಪ ಈಡಿಗೇರ್ ಮಾನಸಿಕವಾಗಿ ಕುಗ್ಗಿದ್ದು, ಇನ್ನೊಬ್ಬ ಮಗ ಆಟವಾಡಲು ಹೊರಗೆ ಹೋಗಿದ್ದ ವೇಳೆ ಸಣ್ಣ ಮಗ ವಿಜಯ್‌ನನ್ನು ಕೊಂದು ಸಾವಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿದ್ದು ಎರಡೂ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. 

ಕುಡಿತದ ಚಟ ಮನುಷ್ಯನನ್ನು ಯಾವ ಹಂತಕ್ಕಾದ್ರೂ ತೆಗೆದುಕೊಂಡು ಹೋಗುತ್ತದೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಕುಡಿತದ ಅಮಲಿನಲ್ಲಿ ಹೆತ್ತ ಮಗನನ್ನೇ ಕೊಂದು ತಂದೆಯೊಬ್ಬ ತಾನು ನೇಣಿಗೆ ಶರಣಾಗಿದ್ದಾನೆ. ಕಳೆದೆರಡು ತಿಂಗಳ ಹಿಂದೆ ಈತನ ಪತ್ನಿಯು ಆಟೋ ಅಪಘಾತದಲ್ಲಿ ಕಾಲುವೆಗೆ ಬಿದ್ದು, ಮೃತಪಟ್ಟಿದ್ದಳು. ಇರುವ ಇಬ್ಬರು ಮಕ್ಕಳನ್ನು ನೋಡಿಕೊಳ್ಳಲಾಗದೇ ಪತಿಯೊಬ್ಬ ತನ್ನ ಆರು ವರ್ಷದ ಮಗುವೊಂದನ್ನು ಕೊಂದು ತಾನು ನೇಣಿಗೆ ಶರಣಾಗಿದ್ದಾನೆ. ಅದೃಷ್ಟವೆನ್ನುವಂತೆ 18 ತಿಂಗಳ ಮತ್ತೊಂದು ಮಗು ಆಟವಾಡಲು ಹೊರಗಿದ್ದ ಕಾರಣಕ್ಕೆ ಬದುಕುಳಿದಿದೆ. ಬಳ್ಳಾರಿ ತಾಲೂಕಿನ ಕೊಳಗಲ್ ಗ್ರಾಮದಲ್ಲಿ ನಡೆದಿದೆ. 

Tap to resize

Latest Videos

undefined

ಕ್ಷಮೆ ಕೇಳಿದ ಬಳಿಕವೂ ಚಾಕೋಲೇಟ್ ಕದ್ದ ವಿಡಿಯೋ ವೈರಲ್: ಸಾವಿಗೆ ಶರಣಾದ ವಿದ್ಯಾರ್ಥಿನಿ

ಎರಡು ತಿಂಗಳು ಎರಡು ಘಟನೆ ಇಡೀ ಕಟುಂಬವೇ ನಾಶ

ಅದೊಂದು ಸುಂದರ ಕುಟುಂಬ (Family) ಹೇಳಿಕೊಳ್ಳುವಷ್ಟು ಸ್ಥಿತಿವಂತರಲ್ಲದೇ ಇದ್ರೂ ಕೂಲಿನಾಲಿ ಮಾಡಿ ಬಂದ ಹಣದಲ್ಲಿ ಹಾಗೋ ಹೀಗೋ ಜೀವನ ಸುಗಮವಾಗಿ ನಡೆಯುತ್ತಿತ್ತು. ಆದ್ರೇ, ಬರಸಿಡಿಲಿನಂತೆ ನಡೆದ ಘಟನೆಯೊಂದು ಇಡೀ ಕುಟುಂಬವು ಬೀದಿಗೆ ಬೀಳುವಂತೆ ಮಾಡಿದೆ. ಹೀಗೆ ನೇಣಿಗೆ ಶರಣಾದ ಈತನ ಹೆಸರು ಈಡಿಗೇರ ಯಂಕಪ್ಪ, ಬಳ್ಳಾರಿ (Ballary) ತಾಲೂಕಿನ ಕೊಳಗಲ್ ಗ್ರಾಮದ ನಿವಾಸಿ.ಕುಡಿತದ ಚಟದಿಂದ ಮಕ್ಕಳನ್ನು ನೋಡಿಕೊಳ್ಳಲಾಗದೇ, ಆರು ವರ್ಷದ ಮಗ ವಿಜಯ (Vijaya) ಎನ್ನುವ ಬಾಲಕನನ್ನ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿ ತಾನು ನೇಣಿಗೆ ಶರಣಾಗಿದ್ದಾನೆ. ಈಗಾಗಲೇ ಕುಡಿತದ ಚಟ ಇರೋ ಯಂಕಪ್ಪ ಕಳೆದೆರಡು ತಿಂಗಳಿಂದ ಕುಡಿತ ಜಾಸ್ತಿ ಮಾಡಿದ್ದ. ಇದಕ್ಕೆ ಕಾರಣ ಪತ್ನಿಯ ಸಾವು. ಸಪ್ಟೆಂಬರ್ 14 ರಂದು ಪತ್ನಿ ಹುಲಿಗೆಮ್ಮ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಜನರು ಆಟೋದಲ್ಲಿ ಕೂಲಿ ಕೆಲಸಕ್ಕೆ ಹೋಗ್ತಿದ್ರು. ಆಗ ಆಟೋ ಕಾಲುವೆಗೆ ಉರುಳಿದ ಕಾರಣ ಆರು ಜನರು ಮೃತಪಟ್ಟಿದ್ದರು. ಅದರಲ್ಲಿ ಹುಲಿಗೆಮ್ಮ (Huligemma)ಕೂಡ ಒಬ್ಬರಾಗಿದ್ರು. ಪತ್ನಿ (Wife) ಕಳೆದುಕೊಂಡ ಬಳಿಕ ಕುಡಿತ ಹೆಚ್ಚಾಗಿ ಈ ರೀತಿ ಹುಚ್ಚಾಟ ಮಾಡಿಕೊಂಡಿದ್ದಾನೆ ಎನ್ನುತ್ತಾರೆ ಗ್ರಾಮದ ಶಿವಮೂರ್ತಿ (Shivamurthy), ಎರ್ರಿಸ್ವಾಮಿ

ಪತಿಯಿಂದ ಹಲ್ಲೆ; ಮನನೊಂದು ಇಬ್ಬರ ಮಕ್ಕಳ ಜತೆ ಚೆಕ್ ಡ್ಯಾಂ ಹಾರಿ ಪತ್ನಿ ಆತ್ಮಹತ್ಯೆ 

 

ತಂದೆ ತಾಯಿಯನ್ನು ಕಳೆದು ಕೊಂಡ 18 ತಿಂಗಳ ಮತ್ತೊಂದು ಮಗು

ಈಗಾಗಲೇ ಒಮ್ಮೆ ಇಬ್ಬರು ಮಕ್ಕಳಿಗೆ ವಿಷವನ್ನು ನೀಡಿ ಈತ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡಿದ್ದನಂತೆ. ಆಗ ಗ್ರಾಮಸ್ಥರೆಲ್ಲರೂ ಸೇರಿ ಬುದ್ದಿವಾದ ಹೇಳಿದ ಕಾರಣ ಅಂದೇ ನಡೆಯಬೇಕಾದ ಸಾವು ತಪ್ಪಿತ್ತು. ಆದ್ರೇ, ಮನೆಯಲ್ಲಿನ ಒಂಟಿತನ ಮತ್ತು ಕುಡಿತದ ಚಟ ಮಕ್ಕಳನ್ನು ನೋಡಿಕೊಳ್ಳಲಾಗದ ಸ್ಥಿತಿ ಆತ್ಮಹತ್ಯೆಗೆ ಪ್ರೇರಣೆ ಯಾಗಿತ್ತು ಎನ್ನಲಾಗುತ್ತಿದೆ. ಅದೃಷ್ಟವೆನ್ನುವಂತೆ ಘಟನೆ ನಡೆಯೋವಾಗ 18 ತಿಂಗಳ ಮಗು ಪಕ್ಕದ ಮನೆಗೆ ಆಟಕ್ಕೆ ಹೋಗಿರೋದ್ರಿಂದ ಆ ಮಗು ಬದುಕುಳಿದಿದೆ. ಇನ್ನೂ ಪತ್ನಿಯ ಸಾವಿನ ನಂತರ ಸರ್ಕಾರದಿಂದ ಬಂದಿರೋ ಎರಡು ಲಕ್ಷ ಪರಿಹಾರದ ಹಣ ಮಕ್ಕಳ ಹೆಸರಿನಲ್ಲಿದ್ದು, ಇದನ್ನು ಯಂಕಪ್ಪ ಬಳಸಲು  ಆಕ್ಷೇಪವಿತ್ತು ಎನ್ನಲಾಗುತ್ತಿದೆ, ಇದು ಕೂಡ ಸಾವಿಗೆ ಕಾರಣವಾಯ್ತೇ ಎನ್ನುವ ಅನುಮಾನ ವ್ಯಕ್ತವಾಗಿದೆ.  

ಮಗುವನ್ನೇಕೆ ಕೊಲೆ ಮಾಡಬೇಕಿತ್ತು

ಸದ್ಯ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ನಿಖರ ಕಾರಣದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅದೇನೆ ಇರಲಿ ಕುಡಿತದ ಚಟಕ್ಕೆ ಮಕ್ಕಳನ್ನೇಕೆ ಬಲಿ ಮಾಡಿದ ಎಂದು ಗ್ರಾಮಸ್ಥರು  ಮೃತ ಯಂಕಪ್ಪ ವಿರುದ್ಧ ಅಕ್ರೋಶ ಹೊರಹಾಕಿದ್ರೇ, ಉಳಿದಿರೋ ಮತ್ತೊಂದು ಮಗುವಿನ ಸ್ಥಿತಿ ಏನು ಅನ್ನೋದೇ ಸದ್ಯದ ಪ್ರಶ್ನೆಯಾಗಿದೆ.
 

click me!