2 ತಿಂಗಳ ಬಳಿಕ ಕುಟುಂಬ ಸೇರಿದ ಮಾನಸಿಕ ಅಸ್ವಸ್ಥ ಯುವಕ: ವಿಶು ಶೆಟ್ಟಿ ಮಾನವೀಯ ಸ್ಪಂದನೆಗೆ ಪ್ರಶಂಸೆ

By Ravi Janekal  |  First Published Jun 15, 2023, 12:29 PM IST

ಮಾನಸಿಕ ಅಸ್ವಸ್ಥತೆಗೆ ಗುರಿಯಾಗಿ ತನ್ನೂರನ್ನು ಮರೆತು ವಾರದ ಹಿಂದೆ ಉಡುಪಿಯ ಕಾಪುವಿಗೆ ಬಂದು ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಛತ್ತೀಸ್‌ಗಢದ ನಿವಾಸಿ ಸಂಜಯ್ (40) ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ(Vishu shetty social worker) ಅವರ ಮಾನವೀಯ ಸ್ಪಂದನೆಗೆ ಸ್ಪಂದಿಸಿ, 2ತಿಂಗಳ ಬಳಿಕ ತನ್ನ ಕುಟುಂಬವನ್ನು ಸೇರುವಲ್ಲಿ ಯಶಸ್ವಿಯಾಗಿದ್ದಾರೆ.


ಉಡುಪಿ (ಜೂ.15) : ಮಾನಸಿಕ ಅಸ್ವಸ್ಥತೆಗೆ ಗುರಿಯಾಗಿ ತನ್ನೂರನ್ನು ಮರೆತು ವಾರದ ಹಿಂದೆ ಉಡುಪಿಯ ಕಾಪುವಿಗೆ ಬಂದು ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಛತ್ತೀಸ್‌ಗಢದ ನಿವಾಸಿ ಸಂಜಯ್ (40) ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ(Vishu shetty social worker) ಅವರ ಮಾನವೀಯ ಸ್ಪಂದನೆಗೆ ಸ್ಪಂದಿಸಿ, 2ತಿಂಗಳ ಬಳಿಕ ತನ್ನ ಕುಟುಂಬವನ್ನು ಸೇರುವಲ್ಲಿ ಯಶಸ್ವಿಯಾಗಿದ್ದಾರೆ.

ಸಂಜಯ್ ಅವರನ್ನು ಕಾಪು ಪೊಲೀಸರು ಹಾಗೂ ಸಾರ್ವಜನಿಕರ ನೆರವಿನಿಂದ ರಕ್ಷಿಸಿ, ದೊಡ್ಡಣಗುಡ್ಡೆಯ ಬಾಳಿಗಾ ಆಸ್ಪತ್ರೆ(Baliga hospital)ಯಲ್ಲಿ ಚಿಕಿತ್ಸೆ ಕೊಡಿಸಿ ಚಿಕಿತ್ಸೆಗೆ ಸ್ಪಂಧಿಸಿದ ಆತನನ್ನು ಕುಟುಂಬಕ್ಕೆ ಹಸ್ತಾಂತರ ಮಾಡಿದ ಸಮಾಜ ಸೇವಕ ವಿಶು ಶೆಟ್ಟಿ ಅವರ ಸಾಮಾಜಿಕ ಕಳಕಳಿ ಮತ್ತೊಮ್ಮೆ ಪ್ರಶಂಸೆಗೆ ಪಾತ್ರವಾಗಿದೆ.

Tap to resize

Latest Videos

undefined

 

Udupi : ಮಾನಸಿಕ ಅಸ್ವಸ್ಥೆ ಆಸ್ಪತ್ರೆಗೆ ದಾಖಲು, ನಿಟ್ಟುಸಿರು ಬಿಟ್ಟ ಸ್ಥಳೀಯರು

ಮೂರು ಸಣ್ಣ ಮಕ್ಕಳ ತಂದೆಯಾಗಿದ್ದ ಸಂಜಯ್ ಅದಾವುದೋ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆ ಹೊಂದಿ ಮಾನಸಿಕ ಸಮತೋಲನ ಕಳೆದುಕೊಂಡು ಮನೆ ತ್ಯಜಿಸಿದ್ದರು. ಇವರ ನಾಪತ್ತೆ ಬಗ್ಗೆ ಛತ್ತೀಸ್‌ಗಢದ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿತ್ತು. 

ಸಂಜಯ್ ಕೈ ತಪ್ಪಿದ ದು:ಖದಲ್ಲಿದ್ದ ಕುಟುಂಬಕ್ಕೆ ಅವರು ಉಡುಪಿಯಲ್ಲಿರುವ ಬಗ್ಗೆ ಮಾಹಿತಿ ಲಭಿಸಿದಾಗ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಕೂಡಲೇ ಸಂಜಯ್ ಅವರ ಸಂಬಂಧಿಕರು ಶನಿವಾರ ಉಡುಪಿಗೆ ಆಗಮಿಸಿದಾಗ, ಕಾನೂನು ಪ್ರಕ್ರಿಯೆ ನಡೆಸಿ ವಿಶು ಶೆಟ್ಟಿ ಅವರು ಸಂಜಯ್ ಅವರನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.

 ಆಸ್ಪತ್ರೆ ವೆಚ್ಚ ಭರಿಸಿದರು :  ಈ ಸಂದರ್ಭದಲ್ಲಿ ಸಂಜಯ್ ಅವರಿಗೆ ಉತ್ತಮ ಚಿಕಿತ್ಸೆ ನೀಡಿ ಪುನರ್ಜನ್ಮ ನೀಡಿದ ವಿಶು ಶೆಟ್ಟಿ ಹಾಗೂ ಕ್ಲಪ್ತಕಾಲದಲ್ಲಿ ಸ್ಪಂದಿಸಿದ ಕಾಪು ಪೊಲೀಸರು ಹಾಗೂ ಸಾರ್ವಜನಿಕರಿಗೆ ಕುಟುಂಬ ಕೃತಜ್ಞತೆ ಸಲ್ಲಿಸಿದೆ. ಈ ನಡುವೆ ಸಂಜಯ್ ಅವರ ಆಸ್ಪತ್ರೆಯ ಬಿಲ್ ಹಾಗೂ ಇತರ ಖರ್ಚು  ಭರಿಸಲು ಕುಟುಂಬಸ್ಥರ ಬಳಿ ಹಣವಿರಲಿಲ್ಲ.

ಹೀಗಾಗಿ ವೆಚ್ಚವನ್ನು ವಿಶು ಶೆಟ್ಟಿ ಹಾಗೂ ಅವರ ಅಭಿಮಾನಿ ಕರುಣಾಕರ ಕೋಟ ಅವರು ಭರಿಸಿ ಮಾನವೀಯತೆ ಮೆರೆದಿದ್ದಾರೆ.

ಅನಾಥ ವೃದ್ಧರಿಗೆ ಆಶ್ರಯ ನೀಡೋದ್ಯಾರು, ಡಿಸಿ ಮೊರೆ ಹೋದ ಉಡುಪಿಯ ಸಾಮಾಜಿಕ ಕಾರ್ಯಕರ್ತರು

 ಪ್ರಕರಣದ ಹಿನ್ನಲೆ : ಕಾಪು ಠಾಣಾ ವ್ಯಾಪ್ತಿಯ ರೈಲ್ವೆ ಸೇತುವೆ ಬಳಿ ಪತ್ತೆಯಾದ ಸಂಜಯ್‌ನನ್ನು ವಿಶು ಶೆಟ್ಟಿ ಅವರು ಕಾಪು ಪೊಲೀಸರು ಹಾಗೂ ಸಾರ್ವಜನಿಕರ ಸಹಕಾರದಿಂದ ವಶಕ್ಕೆ ಪಡೆದು ದೊಡ್ಡಣಗುಡ್ಡೆಯ ಬಾಳಿಗಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಚಿಕಿತ್ಸೆಯಿಂದ ಚೇತರಿಸಿಕೊಂಡ ಸಂಜಯ್ ಅವರನ್ನು ಮಾತನಾಡಿಸಿ, ವಿಳಾಸ ಪಡೆದು ಅವರ ಕುಟುಂಬವನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮೂರು ಮಕ್ಕಳ ತಂದೆಯಾಗಿರುವ ಸಂಜಯ್ ಅವರು ಮಾನಸಿಕ ಅಸ್ವಸ್ಥತೆಗೆ ಗುರಿಯಾಗಿ 2 ತಿಂಗಳ ಹಿಂದೆ ಊರು ಬಿಟ್ಟಿರುವ ಮಾಹಿತಿ ಲಭಿಸಿದೆ.

click me!