
ಬೆಂಗಳೂರು(ಜೂ.15): ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ರಾಜ್ಯದ ಮಹಿಳೆಯರಿಗೆ ರಾಜ್ಯ ಸಾರಿಗೆ ಸಂಸ್ಥೆಗಳಲ್ಲಿ ಉಚಿತ ಪ್ರಯಾಣ ಯೋಜನೆಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, ಶಕ್ತಿ ಯೋಜನೆಯಿಂದ ಬೆಂಗಳೂರಿನ ಮಟ್ರೋ ರೈಲು ಸಂಚಾರಕ್ಕೆ ಹೊಡೆತ ಬೀಳಲಿದೆ ಎಂದೇ ಅಂದಾಜಿಸಲಾಗಿತ್ತು. ಆದರೆ, ನಗರದ ಮಹಿಳೆಯರು ಮಾತ್ರ ನಮಗೆ ಮೆಟ್ರೋ ಸಂಚಾರವೇ ಬೆಸ್ಟ್ ಅಂತ ನಿರೂಪಿಸಿದ್ದಾರೆ.
ಹೌದು, ಶಕ್ತಿ ಯೋಜನೆ ಜಾರಿಯಿಂದ ನಗರದಲ್ಲಿ ಮಹಿಳಾ ಪ್ರಯಾಣಿಕರು ಮೆಟ್ರೋಗೆ ಕೈಕೊಡ್ತಾರೆ ಎಂಬ ಆತಂಕ ಎದುರಾಗಿತ್ತು. ಮೆಟ್ರೋ ಬಿಟ್ಟು ಬಿಎಂಟಿಸಿ ಬಸ್ ಹತ್ತುತ್ತಾರೆ ಎಂದುಕೊಂಡಿದ್ರು, ಆದ್ರೆ ಮೆಟ್ರೋ ತಮ್ಮ ನೆಚ್ಚಿನ ಪ್ರಯಾಣ ಎಂದು ಮಹಿಳಾಮಣಿಗಳು ನಿರೂಪಿಸಿದ್ದಾರೆ.
ಶಕ್ತಿ ಯೋಜನೆ ಜಾರಿ ಹಿನ್ನೆಲೆ ಮಹಿಳೆಯರಿಂದ ಬಸ್ ಫುಲ್ : ಜಾಗವಿಲ್ಲದೇ ಪುರುಷ ಪ್ರಯಾಣಿಕರ ಪರದಾಟ..!
ಐಟಿ, ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಮೆಟ್ರೋ ನೆಚ್ಚಿನ ಸಾರಿಗೆ ವ್ಯವಸ್ಥೆಯಾಗಿದೆ. ಹೀಗಾಗಿ ಶಕ್ತಿ ಯೋಜನೆ ಜಾರಿಯಾದ ಮೇಲೂ ಮೆಟ್ರೋದಲ್ಲಿ ಎಂದಿನಂತೆ ಮಹಿಳಾ ಪ್ರಯಾಣಿಕರು ಓಡಾಡುತ್ತಿದ್ದಾರೆ. ಶೇ.30-40 ಮಹಿಳಾ ಪ್ರಯಾಣಿಕರು ಎಂದಿನಂತೆ ಮೆಟ್ರೋದಲ್ಲಿ ಓಡಾಟ ನಡೆಸಿದ್ದಾರೆ. ಕಳೆದ ವಾರ ಮೂರು ದಿನಕ್ಕೆ ಹೋಲಿಕೆ ಮಾಡಿದ್ರೆ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.
ಶಕ್ತಿ ಯೋಜನೆ ಜಾರಿಯಾದ ಮೊದಲ ಮೂರು ದಿನ
11 ಜೂನ್ - 5,18,424 ಪ್ರಯಾಣಿಕರು
12 ಜೂನ್ - 6,32,450 ಪ್ರಯಾಣಿಕರು
13 ಜೂನ್ - 6,16,994 ಪ್ರಯಾಣಿಕರು
ಶಕ್ತಿ ಯೋಜನೆ ಮುನ್ನ ವಾರದ ಮೊದಲ ಮೂರು ದಿನ
4 ಜೂನ್ - 5,07,561 ಪ್ರಯಾಣಿಕರು
5 ಜೂನ್ - 6,25,698 ಪ್ರಯಾಣಿಕರು
6 ಜೂನ್ - 6,20,072 ಪ್ರಯಾಣಿಕರು