* ಮಲ್ಲಾಪುರ, ಕದ್ರಾ ಭಾಗದಲ್ಲಿ ಹೆಚ್ಚು ಹಾನಿಯಾದರೂ ಸಿಎಂ ಕರೆಸಿಲ್ಲ
* ಸಾಮಾಜಿಕ ಹೋರಾಟಗಾರ ಮಾಧವ ನಾಯಕ ಆರೋಪ
* ಪ್ರಜಾಪ್ರಭುತ್ವದಲ್ಲಿ ಆಡಳಿತ ಪಾರದರ್ಶಕವಾಗಿ ಇರಬೇಕು
ಕಾರವಾರ(ಆ.01): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾ ಕೇಂದ್ರ ಸ್ಥಾನ ಕಾರವಾರಕ್ಕೆ ಬರಬೇಕಿತ್ತು. ಮಲ್ಲಾಪುರ, ಕದ್ರಾ ಭಾಗದಲ್ಲಿ ಹೆಚ್ಚು ಹಾನಿಯಾಗಿದೆ. ಆದರೆ ಅವರನ್ನು ಉದ್ದೇಶ ಪೂರ್ವಕವಾಗಿ ಕರೆತಂದಿಲ್ಲ ಎಂದು ಸಾಮಾಜಿಕ ಹೋರಾಟಗಾರ ಮಾಧವ ನಾಯಕ ಆರೋಪಿಸಿದ್ದಾರೆ.
ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಸ್ಪತ್ರೆ ಅಥವಾ ಇತರೇ ಭೂಮಿ ಪೂಜೆ ಮಾಡಿಸಿದರೆ ಪರ್ಸಂಟೇಜ್ ತಪ್ಪುತ್ತದೆ ಎನ್ನುವ ಉದ್ದೇಶದಿಂದ ಮುಖ್ಯಮಂತ್ರಿಯನ್ನು ಕಾರವಾರಕ್ಕೆ ಕರೆಸಿಲ್ಲವೆಂದು ಭಾಸವಾಗುತ್ತಿದೆ. ಅಂಕೋಲಾಕ್ಕೆ ಆಗಮಿಸಿದ್ದ ಸಿಎಂ ಎದುರು ಬಿಜೆಪಿ ಕಾರ್ಯಕರ್ತ ಹೇಳಿಕೊಂಡ ವ್ಯಕ್ತಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಸರ್ಕಾರದ ಯೋಜನೆ ತಲುಪುತ್ತಿಲ್ಲವೆಂದು ದೂರಿದ್ದಾರೆ ಎಂದು ತಿಳಿಸಿದ್ದಾರೆ.
undefined
ಪರ್ಸಂಟೇಜ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಪುನಃ ಶುಕ್ರವಾರ ದೂರು ನೀಡಿದ್ದೇನೆ. ಕೆಲವು ದಿನದ ಹಿಂದೆ ಮಾಜಿ ಸಚಿವ ಆನಂದ ಅಸ್ನೋಟಿಕರ ತನಿಖೆಗೆ ಬರಲು ಸಿದ್ಧ, ಗುತ್ತಿಗೆದಾರರನ್ನು ಕರೆಸಿದರೆ ಏಕೆ ಆಸ್ಪತ್ರೆಯ ಕಾಮಗಾರಿ ವಿಳಂಬವಾಗುತ್ತದೆ ಎನ್ನುವುದು ತಿಳಿಯುತ್ತದೆ ಎಂದಿದ್ದಾರೆ. ಇದರ ಆಧಾರದ ಮೇಲೆ ಪುನಃ ದೂರು ನೀಡಲಾಗಿದೆ ಎಂದು ವಿವರಿಸಿದರು.
ನೆರೆಪೀಡಿತರಿಗೆ ಬೊಮ್ಮಾಯಿ ನೆರವು: ರಸ್ತೆಗಳ ಮರು ನಿರ್ಮಾಣಕ್ಕೆ 210 ಕೋಟಿ ರೂ. ಘೋಷಣೆ!
ವಿಚಾರಣೆ ವೇಳೆ ಮೇಲ್ನೋಟಕ್ಕೆ ಸಾಬೀತಾದರೆ ಶಾಸಕರನ್ನು ಬಂಧಿಸಬೇಕಾಗುತ್ತದೆ. ಯಾರೇ ತಪ್ಪು ಮಾಡಿದರೂ ತಪ್ಪೆ ಆಗುತ್ತದೆ. ಕಾನೂನು ಚೌಕಟ್ಟಿನ ಅಡಿಯಲ್ಲಿ ತಾವು ಕೆಲಸ ಮಾಡುತ್ತಿದ್ದೇನೆ. ಇತ್ತೀಚಿನ ದಿನದಲ್ಲಿ ಈ ಕ್ಷೇತ್ರದಲ್ಲಿ ದಬ್ಬಾಳಿಕೆ ತಂತ್ರ ನಡೆಯುತ್ತಿದೆ. ಯಾರಿಗೂ ದ್ವನಿ ಎತ್ತಲು ಬಿಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಜಯ ಸಿಗ್ಲಿ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿದ ಹೇಳಿಕೆ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಅವರು ಯಾವ ರೀತಿ ತಪ್ಪು ಮಾಡಿದ್ದಾರೆ? ಮಾನಹಾನಿ ಆಗಿದೆಯೆ? ಕೆಟ್ಟ, ಅವಾಚ್ಯ ಶಬ್ದದಿಂದ ಬೈದಿದ್ದಾರಾ? ಏಕೆ ಅವರ ಮೇಲೆ ಪ್ರಕರಣ ದಾಖಲು ಮಾಡಿದ್ದೀರಿ ಎಂದು ಪ್ರಶ್ನಿಸಿದ ಮಾಧವ, ಜನಪ್ರತಿನಿಧಿ ಆದ ಮೇಲೆ ಆರೋಪ ಮಾಡಬಾರದು ಅಂದರೆ ಹೇಗೆ, ಬಹುಪರಾಕ್ ಹೇಳಲು ಸಾಧ್ಯವೇ? ಯಾವುದೇ ಜನಪ್ರತಿನಿಧಿಯ ಮೇಲೆ ದೂರಿದ್ದರೆ ಧ್ವನಿ ಎತ್ತಿ ಅನ್ಯಾಯದ ವಿರುದ್ಧ ಹೋರಾಡಬೇಕು. ಅನ್ಯಾಯ ಸಹಿಸಬಾರದು. ನಾವು ಜತೆಗೆ ಇರುತ್ತವೆ ಎಂದರು.
ನ್ಯಾಯವಾದಿ ಕೆ.ಆರ್. ದೇಸಾಯಿ, ಪ್ರಜಾಪ್ರಭುತ್ವದಲ್ಲಿ ಆಡಳಿತ ಪಾರದರ್ಶಕವಾಗಿ ಇರಬೇಕು. ಯಾರು ಕಾನೂನು ಮೀರಿ ಕೆಲಸ ಮಾಡಬಾರದು. ಎಲ್ಲಾ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಕಾನೂನಿನ ಚೌಕಟ್ಟು ಇದೆ. ಅದನ್ನು ಅರಿತು ಕೆಲಸ ಮಾಡಬೇಕು ಎಂದು ಅಭಿಪ್ರಾಯಿಸಿದರು.