ಕೈಗಾರಿಕೆ ಸಚಿವ ಶರಣಬಸಪ್ಪಗೌಡ ದರ್ಶನಾಪೂರ್ ಅವರು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವುದರಿಂದ ಸಹಜವಾಗಿ ಇಲ್ಲಿನ ಕೈಗಾರಿಕೆಗಳಿಗೆ ಉತ್ತೇಜನ ಸಿಗಬಹುದೆಂಬ ಆಸೆ ಕ್ಷೇತ್ರದ ಜನರಲ್ಲಿ ಚಿಗುರೊಡೆದಿದೆ.
ಎಂ.ಬಿ.ನಾಯಕಿನ್
ಗುರುಮಠಕಲ್ (ಜೂ.13) ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪಗೌಡ ದರ್ಶನಾಪೂರ್ ಅವರು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವುದರಿಂದ ಸಹಜವಾಗಿ ಇಲ್ಲಿನ ಕೈಗಾರಿಕೆಗಳಿಗೆ ಉತ್ತೇಜನ ಸಿಗಬಹುದೆಂಬ ಆಸೆ ಕ್ಷೇತ್ರದ ಜನರಲ್ಲಿ ಚಿಗುರೊಡೆದಿದೆ.
undefined
ಮತಕ್ಷೇತ್ರದಲ್ಲಿ ಯುವಕರ ನಿರುದ್ಯೋಗ ಸಮಸ್ಯೆ ಮತ್ತು ಗುಳೆ ಹೋಗುವ ಪ್ರಮಾಣ ಹೆಚ್ಚಿದೆ. ಇದನ್ನು ತಡೆದು ಸ್ಥಳೀಯರಿಗೆ ಉದ್ಯೋಗ ಒದಗಿಸಲು ಕಡೇಚೂರು-ಬಾಡಿಯಾಳ ಮತ್ತು ಆಶನಾಳ ಪ್ರದೇಶಗಳನ್ನು ಕೈಗಾರಿಕೆ ವಲಯವಾಗಿಸಲು, ಜವಳಿ ಪಾರ್ಕ್, ಫುಡ್ ಪಾರ್ಕ್, ಕ್ಲೇ ಪಾರ್ಕ್ ಮುಂತಾದವುಗಳ ಸ್ಥಾಪನೆಗೆ ವಿಪುಲ ಅವಕಾಶವಿದೆ.
ಹೊಸಬರಿಗೆ ಟಿಕೆಟ್ ಐಡಿಯಾ ಕೊಟ್ಟವರ ನೇಣಿಗೆ ಹಾಕಿ: ರಮೇಶ ಜಜಿಗಜಿಣಗಿ ತೀವ್ರ ಆಕ್ರೋಶ
ಕೈಗಾರಿಕಾ ಪ್ರದೇಶ ರೂಪಗೊಳ್ಳಲು ಬೂಸ್ಟರ್ ಡೋಸ್ ಅವಶ್ಯ:
ಕ್ಷೇತ್ರದ ಕಡೇಚೂರು-ಬಾಡಿಯಾಳ ಪ್ರದೇಶದಲ್ಲಿ ಮಧ್ಯಮ ಮತ್ತು ಬೃಹತ್ ಪ್ರಮಾಣ ಕೈಗಾರಿಕೆ ವಲಯವನ್ನಾಗಿಸಲು ರಾಜಕೀಯ ಇಚ್ಛಾ ಶಕ್ತಿ ಕೊರತೆಯಿಂದ ಕಳೆದ 10 ವರ್ಷಕ್ಕಿಂತ ನಿಧಾನಗತಿಯಲ್ಲಿ ಕಾಮಗಾರಿ ಸಾಗಿದೆ. ಅದಕ್ಕೆ ಸಚಿವರು ಬೂಸ್ಟರ್ ಡೋಸ್ ಕೊಡಬೇಕಾಗಿದೆ. ಆಶನಾಳ ಹತ್ತಿರ 302 ಎಕರೆ ಪ್ರದೇಶದಲ್ಲಿ ಸಣ್ಣ ಕೈಗಾರಿಕೆ ಪ್ರದೇಶವಾಗಿ ರೂಪಗೊಳ್ಳುವಲ್ಲಿ ಆಸಕ್ತಿ ವಹಿಸಬೇಕಾಗಿದೆ. ಇದರಿಂದ ಕೈಗಾರಿಕೆಗಳು ಸ್ಥಾಪನೆ ಆಗುವುದರ ಜೊತೆಗೆ ಸ್ಥಳೀಯರಿಗೆ ಲಕ್ಷಾಂತರ ಉದ್ಯೋಗ ದೊರೆಯಲಿದೆ.
ನೇಕಾರರ ಬದುಕಿಗೆ ದಾರಿದೀಪ:
ನಿಜಾಮರ ಕಾಲದಲ್ಲಿ ಖಾದಿ ಬಟ್ಟೆತಯಾರಿಸುವಲ್ಲಿ ತಾಲೂಕಿನ ಚಂಡರಕಿ ಗ್ರಾಮವು ಪ್ರಸಿದ್ಧಿಯಾಗಿತ್ತು. ದೇಶದ ಸ್ವಾತಂತ್ರ್ಯ ಸಮಯದಲ್ಲಿ ಇಲ್ಲಿಂದಲೇ ಖಾದಿ ರಾಷ್ಟ್ರ ಧ್ವಜಗಳನ್ನು ತಯಾರಿಸಿ ದೆಹಲಿಗೆ ಕಳುಹಿಸಲಾಗುತ್ತಿತ್ತು. ನಂತರ ದಿನಗಳಲ್ಲಿ ಗುರುಮಠಕಲ್ ಮತ್ತು ಚಂಡರಕಿ ಗ್ರಾಮದಲ್ಲಿ ನೇಕಾರರ ಬದುಕು ದುಸ್ತರವಾಗಿದೆ. ನೇಕಾರರ ಬದುಕು ಹಸನಾಗಿಸಲು ಸಚಿವರು ಗಮನ ಹರಿಸಬೇಕಿದೆ.
ಗಾಮೆಂರ್‍ಟ್ಸ್ ಮತ್ತು ಜವಳಿ ಪಾರ್ಕ್ ಸ್ಥಾಪನೆಗೆ ಒತ್ತು:
ಮತಕ್ಷೇತ್ರದಲ್ಲಿ ಜನರು ಬೆಂಗಳೂರು, ಹೈದ್ರಾಬಾದ್, ಸೂರತ್, ಮುಂಬೈ, ಪುಣೆ ಮುಂತಾದ ಕಡೆ ವಲಸೆ ಹೋಗಿ ಮಹಿಳೆಯರು ಗಾಮೆಂರ್‍ಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರಿಗಾಗಿ ಗಾಮೆಂರ್‍ಟ್ಸ್ ಮತ್ತು ಜವಳಿ ಪಾರ್ಕ್ ಸ್ಥಾಪನೆಗೆ ವಿಪುಲ ಅವಕಾಶವಿದೆ. ಇದರಿಂದ ಗುಳೆ ಹೋಗುವ ಪ್ರಮಾಣ ತಡೆಯಬಹುದು.
ಫುಡ್ ಪಾರ್ಕ್ಗೆ ಅವಕಾಶ:
ರಾಜ್ಯದಲ್ಲಿ ಕೋಲಾರ ನಂತರ ಗುರುಮಠಕಲ್ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಮತಕ್ಷೇತ್ರವಾಗಿದೆ. ಕೆರೆ ತುಂಬುವ ಯೋಜನೆ ಮೂಲಕ ಕೆರೆಗಳನ್ನು ಹೊಳೆತ್ತುವ ಪ್ರಾಜೆಕ್ಟ್ ಮುಕ್ತಾಯ ಹಂತದಲ್ಲಿದೆ. ಬೆಳಗಾವಿ ಮಾದರಿಯಂತೆ ಇಲ್ಲಿಯೂ ಬತ್ತ ಮತ್ತು ಕಬ್ಬು ಬೆಳೆ ಬೆಳೆಯುವಂತೆ ರೈತರಿಗೆ ಅರಿವು ಮೂಡಿಸಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಅವಕಾಶವಿದೆ. ಇದರಿಂದ ರೈತರ ಆದಾಯ ದ್ವಿಗುಣಗೊಳ್ಳುತ್ತದೆ. ಸಕ್ಕರೆ ಕಾರ್ಖಾನೆ ಜತೆಗೆ ಬತ್ತದ ಮಿಲ್, ತೊಗರಿ ಮಿಲ್ ಮೂಲಕ ಫುಡ್ ಪಾರ್ಕ್ಗಳನ್ನು ಸ್ಥಾಪಿಸುವ ಕಡೆ ಸಚಿವರು ಮತ್ತು ಇಲ್ಲಿನ ಜನಪ್ರತಿನಿಧಿಗಳು ಆಲೋಚಿಸಬೇಕಾಗಿದೆ.
ಪ್ರೋತ್ಸಾಹ ಅಗತ್ಯವಿದೆ:
ತಾಲೂಕಿನ ಮದ್ವಾರ ಗ್ರಾಮದಲ್ಲಿ ಕುಂಬಾರರು ಮಣ್ಣಿನ ಮಡಿಕೆ ತಯಾರಿಕೆ, ಬಚಾವರ ಗ್ರಾಮದಲ್ಲಿ ಪರಿಶಿಷ್ಟಸಮುದಾಯದವರು ಬಡಗಿ ಕೆಲಸದಲ್ಲಿ ನಿಪುಣತೆ, ಪಟ್ಟಣದಲ್ಲಿ ಮೇದಾರ ಸಮುದಾಯ ಬಿದರಿನ ಬುಟ್ಟಿತಯಾರಿಕೆ, ಗಾಜರ್ ಕೋಟ್ ಗ್ರಾಮದಲ್ಲಿ ಲೋಹದ ಮೂರ್ತಿÜ ತಯಾರಿಕೆ, ದಂತಾಪೂರ್ ಗ್ರಾಮದಲ್ಲಿ ಕಲ್ಲಿನ ವಿಗ್ರಹ ತಯಾರಿಕೆಗೆ ಪ್ರಸಿದ್ಧಿ ಪಡೆದಿವೆ. ನಾನಾ ರಾಜ್ಯಗಳಿಂದ ಬಂದು ಇಲ್ಲಿನ ವಸ್ತುಗಳನ್ನು ಖರೀದಿಸುತ್ತಾರೆ. ಇದಕ್ಕಾಗಿ ಸಣ್ಣ ಗುಡಿ ಕೈಗಾರಿಕೆ ಮತ್ತು ಕ್ಲೇ ಮಾದರಿಗಳನ್ನು ಸ್ಥಾಪಿಸಿ ಆರ್ಥಿಕ ಸಹಾಯ ನೀಡುವ ಅಗತ್ಯವಿದೆ. ಇಲ್ಲಿನ ಕರಕುಶಲತೆಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಅವಕಾಶವಿದೆ. ಇದಕ್ಕಾಗಿ ಸಚಿವರು ಅಕ್ರಮ ಕ್ರಮ ಕೈಗೊಳ್ಳುವರೇ ಎಂದು ಇಲ್ಲಿನ ಜನತೆ ಎದುರು ನೋಡುತ್ತಿದ್ದಾರೆ.
ಗಾರೆ ಕೆಲಸ ಮತ್ತು ಕಾರ್ಖಾನೆ ಸ್ಥಾಪನೆ:
ಗುಳೆ ಹೋಗುವ ಜನರಲ್ಲಿ ಹೆಚ್ಚಿನವರು ಅದರಲ್ಲಿ ಮಹಿಳೆಯರು ಗಾಮೆಂರ್‍ಟ್ಸ್‌ನಲ್ಲಿ ದುಡಿದರೆ, ಪುರುಷರು ಮನೆ ಕಟ್ಟುವ ಗಾರೆ ಕೆಲಸದಲ್ಲಿ ತೊಡಗಿರುತ್ತಾರೆ. ಇಲ್ಲಿನ ಜನರು ಗಾರೆ ಕೆಲಸದಲ್ಲಿ ನಿಪುಣರಾಗಿದ್ದಾರೆ. ಅವರಿಗಾಗಿ ಉತ್ತಮ ತರಬೇತಿ ಮತ್ತು ಕಾರ್ಖಾನೆ ಸ್ಥಾಪಿಸಿ ಉದ್ಯೋಗ ಒದಗಿಸುವ ಕಡೆ ಚಿತ್ತ ಹರಿಸಬೇಕಾಗಿದೆ.
ಹೈನುಗಾರಿಕೆ ಬೆಂಬಲ:
ಜಿಲ್ಲೆಯಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆಯಲ್ಲಿ ಗುರುಮಠಕಲ್ ಮತಕ್ಷೇತ್ರ ಮುಂದಿದೆ. ಅವರಿಗಾಗಿ ಹೈನುಗಾರಿಕೆ ಉದ್ಯಮಕ್ಕೆ ವೇದಿಕೆ ಕಲ್ಪಿಸಿದರೆ ರೈತರಿಗೆ ಅನುಕೂಲವಾಗಲಿದೆ.
ಸ್ಟಾರ್ಟ್ ಅಪ್ ಬೆಂಬಲ:
ಇತ್ತೀಚೆಗೆ ಸ್ಟಾರ್ಚ್‌ಪ್‌ಗೆ ಎಲ್ಲ ಸರ್ಕಾರಗಳು ಬೆಂಬಲ ವ್ಯಕ್ತ ಪಡಿಸುತ್ತಿವೆ. ಆದರೆ, ಇಲ್ಲಿ ಯಾವುದೇ ಸ್ಟಾರ್ಚ್‌ಅಪ್ ಆರಂಭವಾಗಿಲ್ಲ. ಇದಕ್ಕೆ ಕಾರಣ ಬ್ಯಾಂಕ್‌ಗಳಲ್ಲಿ ಸಾಲ ಮಂಜೂರು ಆಗದಿರುವುದು. ಪಿಎಂ ಮತ್ತು ಸಿಎಂ ಕೌಶಲ್ಯ ಯೋಜನೆ ಅಡಿಯಲ್ಲಿ ಆಯ್ಕೆಯಾದರೂ ಬ್ಯಾಂಕ್‌ಗಳಲ್ಲಿ ಮ್ಯಾನೇಜರ್‌ಗಳು ಸಾಲ ಮಂಜೂರು ಮಾಡದೇ ಸತಾಯಿಸು ತ್ತಿರುವುದು. ಮುದ್ರಾ ಸಾಲ, ಆತ್ಮ ನಿರ್ಭರ ಸಾಲ ಸುಲಭವಾಗಿ ಯುವ ಉದ್ಯಮಿಗಳಿಗೆ ಲಭ್ಯವಾಗುತ್ತಿಲ್ಲ. ಅಷ್ಟೇ ಅಲ್ಲ, ಕೈಗಾರಿಕೆಗೆ ಸಿಗುವ ಸಬ್ಸಿಡಿ ಹಣವು ಬೇಗ ಮಂಜೂರು ಆಗುತ್ತಿಲ್ಲ. ಇದನ್ನು ತಡೆದು ಎಲ್ಲ ಉದ್ಯಮಿಗಳಿಗೆ ಸಾಲ ಸೌಲಭ್ಯ ಸಿಗುವಂತೆ ವ್ಯವಸ್ಥೆ ಮಾಡಬೇಕಾಗಿದೆ. ಸ್ಟಾರ್ಚ್‌ಆಪ್‌ಗಳಿಗೆ ಪ್ರೋತ್ಸಾಹ ಅಗತ್ಯವಿದೆ.
ಕಟೀಲ್‌ಗೆ ಅಧ್ಯಕ್ಷ ಸ್ಥಾನದಿಂದ ಬಿಜೆಪಿ ನಾಶ: ಸಚಿವ ದರ್ಶನಾಪುರ್ ಆರೋಪ
ಯುವಕರಿಗೆ ಉದ್ಯೋಗ ಕಲ್ಪಿಸುವ ಜತೆಗೆ ಗುಳೆ ನಿಯಂತ್ರಣಕ್ಕಾಗಿ ಇಲ್ಲಿ ಹೆಚ್ಚಿನ ರೀತಿಯಲ್ಲಿ ಕೈಗಾರಿಕೆಗಳು ಸ್ಥಾಪನೆ ಆಗುವಂತೆ ಅನೇಕ ಹೂಡಿಕೆದಾರರೊಂದಿಗೆ ಚರ್ಚಿಸಿದ್ದೇನೆ. ನಮ್ಮ ಜಿಲ್ಲೆಯವರು ಸಣ್ಣ ಕೈಗಾರಿಕೆ ಸಚಿವರು ಆಗಿರುವುದರಿಂದ ಜಿಲ್ಲೆ ಸೇರಿದಂತೆ ನಮ್ಮ ಕ್ಷೇತ್ರವು ಕೈಗಾರಿಕೆಗಳು ಉದಯಿಸಲಿವೆ ಎಂಬ ಆಶಾಭಾವನೆ ಇದೆ.
ಶರಣಗೌಡ ಕಂದಕೂರ, ಶಾಸಕ
ಕರ್ನಾಟಕ ರಾಜ್ಯದ ಜನರಿಗೆ ಅನುಕೂಲಕರವಾಗುವಂತೆ ಮತ್ತು ಸ್ಥಳೀಯರಿಗೆ ಉದ್ಯೋಗ ಹಾಗೂ ಆದಾಯ ಹೆಚ್ಚಿಸುವ ಕೈಗಾರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರೋತ್ಸಾಹಿಸಲಾಗುವುದು. ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಿನ ರೀತಿಯಲ್ಲಿ ಕೈಗಾರಿಕೆಗಳು ಸ್ಥಾಪಿಸುವಲ್ಲಿ ಆದ್ಯತೆ ನೀಡುತ್ತೇನೆ.
ಶರಣಬಸಪ್ಪಗೌಡ ದರ್ಶನಾಪೂರ್, ಸಣ್ಣ ಕೈಗಾರಿಕೆ ಸಚಿವ