
ದೇವದುರ್ಗ (ಕನಕಗುರುಪೀಠ) (ಜ.14): ಹಾಲುಮತ ಸಮಾಜದ ಕೊಡುಗೆ ಅನನ್ಯವಾಗಿದ್ದು, ಮಳೆ, ಬೆಳೆ, ಬರಗಾಲ, ರಾಜನೀತಿಗಳೊಂದಿಗೆ ಜೀವನ ಮಾಡಿ, ಪ್ರಕೃತಿಯೊಂದಿಗೆ ಸಹಜೀವನ ನಡೆಸಿ ಜಗತ್ತಿನಲ್ಲಿ ಗಮನ ಸೆಳೆದಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು. ತಾಲೂಕಿನ ತಿಂತಣಿ ಬ್ರಿಜ್ ಬಳಿ ಇರುವ ಕನಕ ಗುರುಪೀಠದಲ್ಲಿ ಶುಕ್ರವಾರ ಜರುಗಿದ ಹಾಲುಮತ ಸಂಸ್ಕೃತಿ ವೈಭವ-2024ರ ಯುವಜನ ಸಮಾವೇಶದಲ್ಲಿ ಶುಕ್ರವಾರ ಮಾತನಾಡಿದರು.
ಕನಕದಾಸರ ಭಕ್ತಿ ಸಾಹಿತ್ಯ, ವಿಜಯ ನಗರದಲ್ಲಿ ಹಕ್ಕ-ಬುಕ್ಕ ಸಾಮ್ರಾಜ್ಯದ ಆಡಳಿತ, ಕಾಳಿದಾಸ ಅದ್ಭುತ ಸಾಹಿತ್ಯ ಜಗತ್ತಿನ ಬಹುಮಹತ್ವದ ಸ್ಥಾನ ಪಡೆದಿವೆ. ಹಾಲುಮತ ಸಮುದಾಯದ ಬಂಧುಗಳು ದೈವತ್ವದ ನೆಲೆಗಟ್ಟಿನಲ್ಲಿ ಜೀವಿಸಿದವರು. ಕುರಿ ಹಿಕ್ಕಿಯಲ್ಲಿಯೆ ಲಿಂಗವನ್ನು ಕಂಡು ಬೀರಪ್ಪ, ಮಾಳಿಂಗರಾಯನನ್ನು ಕಂಡವರು. ಮನುಷ್ಯ ಮಹಾದೇವನಾಗಬಲ್ಲ, ನರ ನಾರಾಯಣ ನಾಗಬಲ್ಲ ಎಂಬ ಸಂದೇಶ ಸಾರಿರುವುದು ದೇಶದ ಹಿಂದೂ ಸಂಸ್ಕೃತಿ ಭಾಗವಾಗಿದೆ ಎಂದರು.
ಪ್ರಲ್ಹಾದ್ ಜೋಶಿಗೆ ಸರಿಸಾಟಿ ‘ಕೈ’ ಅಭ್ಯರ್ಥಿ ಯಾರು?: ಲಾಡ್, ಶೆಟ್ಟರ್ ಹೆಸರು ಮುಂಚೂಣಿಗೆ
ಕನಕದಾಸರು ಭಕ್ತಿ ಪರಂಪರೆಗೆ ಬಹುದೊಡ್ಡ ಕೊಡುಗೆ ನೀಡಿ, ದಾಸ ಶ್ರೇಷ್ಠರು ಎಂದು ಪ್ರಸಿದ್ಧಿ ಪಡೆದವರು. ಅಹಂಕಾರ ಇರಬಾರದು ಎಂಬ ಸಂದೇಶ ಸಾರಿರುವವರು ಕನಕದಾಸರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 10 ವರ್ಷಗಳಲ್ಲಿ ಅತಿ ದೊಡ್ಡ ಶಕ್ತಿಯಾಗಿ ಬೆಳೆಯುತ್ತಿದೆ. ಜಗತ್ತಿನ 5ನೇ ಅತಿದೊಡ್ಡ ಆರ್ಥಿಕ ಶಕ್ತಿ ಹೊಂದಿದ ದೇಶ ಎಂಬ ಸ್ಥಾನಮಾನ ದೊರಕಿದ್ದು 3ನೇ ಅತಿದೊಡ್ಡ ಶಕ್ತಿಯನ್ನಾಗಿ ಭಾರತ ಮಾಡುವ ಸಂಕಲ್ಪ ಹೊಂದಲಾಗಿದೆ ಎಂದರು.
ಹಾಲುಮತದ ಮೀಸಲಾತಿಗೆ ಕೇಂದ್ರ ಸರ್ಕಾರ ಅನುಮೋದನೆಗೆ ಈಗಾಗಲೇ ಅನೇಕ ಸಭೆಗಳ ಮೂಲಕ ಚರ್ಚೆಯಾಗಿದ್ದು, ಒಬಿಸಿ ಸಮುದಾಯಗಳಿಗೆ ಕೇವಲ ಮೀಸಲಾತಿ ನೀಡದೇ, ಸವಾಂಗೀಣ ಅಭಿವೃದ್ಧಿಗೆ ಅದೇ ಪದಥಲದಿಂದ ಬೆಳೆದಿರುವ ಮೋದಿ ಹೊಸ ಭರವಸೆ ನೀಡಿದ್ದಾರೆ. ಈಗಾಗಲೇ ಜಗತ್ತಿನ ಎಲ್ಲಾ ದೇಶಗಳ ಜೊತೆಗೆ ಅಭಿವೃದ್ಧಿಯ ಕ್ರಾಂತಿಯ ಛಾಪು ಮೂಡಿಸಿರುವ ಪ್ರಧಾನಿ ನರೇಂದ್ರ ಮೋದಿ ಜಗತ್ತಿನಲ್ಲಿ ದೊಡ್ಡಣ್ಣನಾಗುವದಿಲ್ಲ. ಹಿರಿಯಣ್ಣ ಆಗುತ್ತಾರೆ ಎಂಬ ವಿಶ್ವಾಸ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ತಿಳಿಸಿದರು.
ಪರಿಹಾರ ಕೈಗೊಳ್ಳದಿದ್ದರೆ ಶಿಸ್ತು ಕ್ರಮ: ಸಂಸದ ಡಿ.ಕೆ.ಸುರೇಶ್
ಕಾಗಿನೆಲೆ ಕ್ಷೇತ್ರದ ನಿರಂಜನಾನಂದಪುರಿ ಸ್ವಾಮೀಜಿ, ಇಲಕಲ್ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ, ಕನಕ ಗುರುಪೀಠದ ಸಿದ್ಧರಾಮಾನಂದ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಮಾಜಿ ಸಚಿವ ಬಂಡೆಪ್ಪ ಕಾಸೆಂಪೂರ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಕುಷ್ಟಗಿ, ಸಂಸದ ರಾಜಾ ಅಮರೇಶ್ವರ ನಾಯಕ, ಉಮೇಶ ಜಾಧವ, ಶಾಸಕ ಮಾನಪ್ಪ ವಜ್ಜಲ್, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಸಿಂಧನೂರು, ಮಾಜಿ ಸಚಿವ ಕೆ.ಶಿವನಗೌಡ ನಾಯಕ ಮಾತನಾಡಿದರು. ಈ ಸಂದರ್ಭದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಸಂಸದ ಬಿ.ವಿ.ನಾಯಕ, ನಿಕೇತರಾಜ್ ಮೌರ್ಯ, ಮುಖಂಡ ತ್ರಿವಿಕ್ರಮ ಜೋಷಿ, ಬಸವಂತಪ್ಪ, ಧರ್ಮಣ್ಣ ಹಾಗೂ ಇತರರು ಇದ್ದರು.